1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಎಲ್ಲಾ ವಯೋಮಾನದವರಿಗೂ ನಂದಿನಿ ಹಾಲು :-

ನಂದಿನಿ ಹಾಲಿನ ಜಿಡ್ಡು ಹಾಗೂ ಹಾಲಿನ ಎಸ್‍ಎನ್‍ಎಫ್ ನ ವಿವಿಧತೆಯ ಮೇರೆಗೆ ಹಲವು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಯ ಮೇರೆಗೆ ಪೋಷಕಾಂಶಗಳ ಪಟ್ಟಿಯ ಪ್ರಕಾರ ಆಯ್ಕೆ ಮಾಡಬಹುದಾಗಿದೆ. ಈ ಪೋಷಕಾಂಶಗಳ ಪಟ್ಟಿಯು 100 ಮಿ.ಲೀ ಹಾಲಿಗೆ ಸಮನಾಗಿ ತಯಾರಿಸಲಾಗಿದೆ.

ಪ್ರತಿ 100ml ಹಾಲಿನ ಪೌಷ್ಠಿಕಾಂಶದ ಮಾಹಿತಿ*

ಪ್ರತಿ 100ml ಹಾಲಿನ ಪೌಷ್ಠಿಕಾಂಶದ ಮಾಹಿತಿ*

ಡಬಲ್  ಟೋನ್ಡ್ ಹಾಲು ಟೋನ್ಡ್ ಹಾಲು ಹೋಮೋಜಿನೈಸ್ಡ್  ಹಸುವಿನ ಹಾಲು ಸ್ಪೆಷಲ್  ಟೋನ್ಡ್ ಹಾಲು ಶುಭಂ ಸ್ಟ್ಯಾಂಡರ್ಡೈಸ್ಡ್ ಹಾಲು

                        ಶುಭಂ ಗೋಲ್ಡ್ 

ಸ್ಟ್ಯಾಂಡರ್ಡೈಸ್ಡ್

ಹಾಲು  

ಕೆನೆಭರಿತ ಹಾಲು

ಎನರ್ಜಿ,  ಕಿಲೋ ಕ್ಯಾಲೋರಿ

49 60 65 71 74 80 89

ಕಾರ್ಬೋಹೈಡ್ರೇಟ್,  ಗ್ರಾಂ

5.1 4.8 4.8 5.1 4.8 5.1 5.1

ಲ್ಯಾಕ್ಟೋಸ್,  ಗ್ರಾಂ

5.1

4.8 4.8 5.1 4.8 5.1 5.1

ಪ್ರೋಟೀನ್,  ಗ್ರಾಂ

3.5 3.3 3.3 3.5 3.3 3.5 3.5

ಫ್ಯಾಟ್,  ಗ್ರಾಂ

1.6 3.1 3.6 4.1 4.6 5.1 6.1

ಸ್ಯಾಚುರೇಟೆಡ್ ಫ್ಯಾಟ್, ಗ್ರಾಂ

1.0 2.0 2.3 2.7 3.0 3.3 4.0

ಟ್ರಾನ್ಸ್ ಫ್ಯಾಟ್, ಗ್ರಾಂ

0.04 0.08 0.1 0.1 0.11 0.13 0.15

ಮಿನರಲ್ಸ್  ,  ಗ್ರಾಂ

0.7 0.7 0.7 0.7 0.7 0.7 0.7

ಕ್ಯಾಲ್ಸಿಯಂ,  ಮಿಲ್ಲಿ ಗ್ರಾಂ

127 124 124 127 124 127 127

ವಿಟಾಮಿನ್ ಎ,   ಮೈಕ್ರೊ ಗ್ರಾಂ

18 35 40 40 51 59 71

ಈ ಹಾಲಿನ ಮಾದರಿಗಳು ಪಾಶ್ಚರೀಕರಿಸಿದ ಹಾಲಿನ ವಿಧಗಳಾಗಿದ್ದು, 4o ಸೆಂಟಿಗ್ರೇಡ್‍ಗಿಂತ ಕಡಿಮೆ ಉಷ್ಣಾಂಶದಲ್ಲಿ ಶೇಖರಿಸಿಟ್ಟಾಗ 2 ದಿನಗಳ ಕಾಲ ಕೆಡದೇ ಇಡಬಹುದು.

ನಂದಿನಿ ಯು.ಹೆಚ್.ಟಿ ಹಾಲು :

ಹಾಲನ್ನು ಅಧಿಕ ಉಷ್ಣಾಂಶಕ್ಕೊಳಪಡಿಸಿ ಶೇಖರಣೆ ಮಾಡುವ ಅತ್ಯಾಧುನಿಕ ವಿಧಾನವಾಗಿರುತ್ತದೆ. ಹಾಲನ್ನು ಮುಚ್ಚಿದ ವ್ಯವಸ್ಥೆಯಲ್ಲಿ ಕಾಯಿಸಿ, ಅತಿ ಹೆಚ್ಚು ಉಷ್ಣಾಂಶದೊಂದಿಗೆ ಹೋಮೋಜಿನೈಸ್ಡ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಹಾಗೂ ತಂಪಾಗಿಸಿ ಎಸ್ಪಟಿಕಲ್ಲಿ(aseptically) ಪ್ಯಾಕ್ ಮಾಡಲಾಗುತ್ತದೆ. ಹಾಲನ್ನು ಸಾಮಾನ್ಯವಾಗಿ 135-137o ಸೆಂಟಿಗ್ರೇಡ್ ಉಷ್ಣಾಂಶದಲ್ಲಿ 2 ಸೆಕೆಂಡುಗಳ ಕಾಲ ನೇರ ಅಥವಾ ಪರೋಕ್ಷ ತಾಪಮಾನದಲ್ಲಿ, ನೇರ ಸ್ಟೀಮ್ ಇಂಜೆಕ್ಷನ್ ಹಾಗೂ ಪುನಃ ಸೋಂಕಾಗುವಿಕೆ ಅಪಾಯವನ್ನು ತೊಡೆದುಹಾಕಲು ಎಸ್ಪಟಿಕ್(aseptic) ಪದ್ಧತಿಯಲ್ಲಿ ಪ್ಯಾಕಿಂಗ್ ಮಾಡಲಾಗುತ್ತದೆ.

ಕರ್ನಾಟಕ ಹಾಲು ಮಹಾಮಂಡಳಿಯು ಗುಟ್‍ಲೈಫ್ ಎಂಬ ಹೆಸರಿನಲ್ಲಿ ಅಧ್ಯುನ್ನತ  ತಾಪಮಾನ ಹಾಲು (ಯುಹೆಚ್‍ಟಿ ಹಾಲು) ಮಾರುಕಟ್ಟೆಗೆ ಪರಿಚಯಿಸಿದ್ದು, ವಿವಿಧ ಪ್ರಕಾರಗಳಲ್ಲಿ ಆರೋಗ್ಯ ಜಾಗೃತ ಗ್ರಾಹಕರಿಗೆ ಅನುಕೂಲಕಾರಿಯಾಗಿದೆ.

  1. ನಂದಿನಿ ಗುಡ್‍ಲೈಫ್ ಹಸುವಿನ ಹಾಲು (ಹಾಲಿನ ಕೊಬ್ಬು: 3%(ಕನಿಷ್ಠ)), ಹಾಲಿನ ಎಸ್‍ಎನ್‍ಎಫ್ (8.5% (ಕನಿಷ್ಠ)) ,
  2. ನಂದಿನಿ ಗುಡ್‍ಲೈಫ್-ಸಂಪೂರ್ಣ (ಹಾಲಿನ ಕೊಬ್ಬು: 4.5%(ಕನಿಷ್ಠ)), ಹಾಲಿನ ಎಸ್‍ಎನ್‍ಎಫ್ (8.5% (ಕನಿಷ್ಠ)) ,
  3. ನಂದಿನಿ ಗುಡ್‍ಲೈಫ್-ಸ್ಮಾರ್ಟ್ (ಹಾಲಿನ ಕೊಬ್ಬು: 1.5%(ಕನಿಷ್ಠ)), ಹಾಲಿನ ಎಸ್‍ಎನ್‍ಎಫ್ (9.0% (ಕನಿಷ್ಠ)) ,
  4. ನಂದಿನಿ ಗುಡ್‍ಲೈಫ್-ಸ್ಲಿಮ್ (ಹಾಲಿನ ಕೊಬ್ಬು: 0.5%(ಗರಿಷ್ಠ)), ಹಾಲಿನ ಎಸ್‍ಎನ್‍ಎಫ್ (9% (ಕನಿಷ್ಠ)) .

ಈ ಹಾಲಿನ ಮಾದರಿಗಳು ಮಾರುಕಟ್ಟೆಯಲ್ಲಿ ಎರಡು ರೀತಿಯ ಪ್ಯಾಕೇಜಿಂಗ್‍ಗಳಲ್ಲಿ ಲಭ್ಯವಿವೆ: ಫಿನೋ ಪ್ಯಾಕೇಜಿಂಗ್ – 90 ದಿನಗಳ ಕಾಲ ಕೆಡದೇ ಬಾಳಿಕೆ ಬರುತ್ತದೆ ಹಾಗೂ 6 ಪದರಗಳುಳ್ಳ ಬಹುಪದರಗಳ ಬ್ರಿಕ್ ಪ್ಯಾಕೇಜಿಂಗ್ - 180 ದಿನಗಳ ಕಾಲ ಕೆಡದೇ ಬಾಳಿಕೆ ಬರುತ್ತದೆ. ಈ ಉತ್ಪನ್ನಗಳು ಅಂತಿಮವಾಗಿ ಗ್ರಾಹಕರ ಅನುಕೂಲಕ್ಕೆ ತಕ್ಕಂತಿದ್ದು, ಶೈತ್ಯೀಕರಣ ಮಾಡದೇ ಎಲ್ಲಾ ಕಡೆ ಸಾಗಿಸಬಹುದಾಗಿದೆ. 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105