1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಅಭಿವೃದ್ಧಿ ಕಾರ್ಯಕ್ರಮಗಳು

1.   National Programme for Dairy Development (ಎನ್.ಪಿ.ಡಿ.ಡಿ.):

ಕೇಂದ್ರ ಪುರಸ್ಕೃತ  ಎನ್.ಪಿ.ಡಿ.ಡಿ. ಯೋಜನೆಯಡಿಯಲ್ಲಿ ಹೈದ್ರಾಬಾದ್, ಕರ್ನಾಟಕದ ಯಾದಗೀರ್, ಬೀದರ್ ಹಾಗು ಕಲಬುರಗಿ ಜಿಲ್ಲೆಗಳಲ್ಲಿ 320 ಸಂಘಗಳನ್ನು ತೆರೆಯಲು 2015-16ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ರೂ.395.80 ಲಕ್ಷ ಬಿಡುಗಡೆಯಾಗಿರುತ್ತದೆ.  ಈಗಾಗಲೇ 2016-17ನೇ ಸಾಲಿನಲ್ಲಿ ಸಂಘ ಪ್ರಾರಂಭಿಸಲು 329 ಹಳ್ಳಿಗಳನ್ನು ಗುರುತಿಸಲಾಗಿದ್ದು, 169 ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಲಾಗಿರುತ್ತದೆ.  96 ಗ್ರಾಮಗಳಲ್ಲಿ ಮುಖ್ಯ ಸಚೇತಕರ ಆಯ್ಕೆ ಮಾಡಲಾಗಿದ್ದು, 16 ಗ್ರಾಮಗಳಲ್ಲಿ ಷೇರು ಸಂಗ್ರಹಣೆ ಪ್ರಗತಿಯಲ್ಲಿರುತ್ತದೆ. 61 ಸಂಘಗಳು ನೋಂದಣಿಯಾಗಿ ಕಾರ್ಯಾಚರಣೆಯಲ್ಲಿರುತ್ತವೆ.  ಸದರಿ ಸಂಘಗಳಿಂದ ದಿನವಹಿ ಸರಾಸರಿ 3180 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ.

2.  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:  

ಬೀದರ್ ಜಿಲ್ಲೆಯನ್ನು ಕ್ಷೀರವಲಯವನ್ನಾಗಿ ಅಭಿವೃದ್ಧಿಪಡಿಸಲು 2015-16ನೇ ಸಾಲಿನಲ್ಲಿ ರೂ.10 ಕೋಟಿ ಕರ್ನಾಟಕ ಹಾಲು ಮಹಾಮಂಡಳಿಗೆ ಬಿಡುಗಡೆಯಾಗಿರುತ್ತದೆ.  ಯೋಜನೆಯಡಿ 1500 ಹೈನುರಾಸುಗಳನ್ನು ಖರೀದಿಸಬೇಕಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ರಾಜ್ಯ ಸರ್ಕಾರದ ಪಶುಭಾಗ್ಯ ಯೋಜನೆಯ ಮಾರ್ಗಸೂಚಿಯಂತೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ.
ಉಳಿದಂತೆ ತಳಿ ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಕ್ರಿಯಾಯೋಜನೆಯನ್ನು    ತಯಾರಿಸಲಾಗಿರುತ್ತದೆ.
   2016-17ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿರುತ್ತದೆ.
1)    ಬೆಳಗಾವಿ ಫ್ಲೆಕ್ಸಿಪ್ಯಾಕ್ ಘಟಕ ಸ್ಥಾಪನೆ              ರೂ.6.94 ಕೋಟಿ
2)    ತುಮಕೂರು ಫ್ಲೆಕ್ಸಿಪ್ಯಾಕ್ ಘಟಕ ಸ್ಥಾಪನೆ          ರೂ.6.00 ಕೋಟಿ
3)    ಕೊಪ್ಪಳ ಡೇರಿ
 ಸ್ಥಾಪನೆ (ಬೂದಗುಂಪ)            ರೂ.2.00 ಕೋಟಿ
4)    400 ಸೈಲೇಜ್ ಘಟಕ ಸ್ಥಾಪನೆಗೆ                   ರೂ.1.00 ಕೋಟಿ
5)    ಪ್ರೋಬಯೋಟಿಕ್ ಫೀಡ್ ಸಪ್ಲಿಮೆಂಟ್              ರೂ.2.00 ಕೋಟಿ

ಒಟ್ಟು ರೂ.17.94 ಕೋಟಿ ಬಿಡುಗಡೆಯಾಗಿದ್ದು, ತುಮಕೂರು ಫ್ಲೆಕ್ಸಿಪ್ಯಾಕ್ ಘಟಕ ಪ್ರಾರಂಭಗೊಂಡಿರುತ್ತದೆ. ಬೆಳಗಾವಿ ಮತ್ತು ಕೊಪ್ಪಳ ಡೇರಿ  (ಬೂದಗುಂಪ) ಸ್ಥಾಪನೆ ಕಾರ್ಯ ಪ್ರಗತಿಯಲ್ಲಿರುತ್ತವೆ. ಉಳಿದಂತೆ ಸೈಲೇಜ್ ಘಟಕ ಸ್ಥಾಪನೆ ಮತ್ತು ಪ್ರೋಬಯೋಟಿಕ್ ಫೀಡ್ ಸಪ್ಲಿಮೆಂಟ್‍ಗಳು ರಾಸುಗಳ ಆರೋಗ್ಯ ಹಾಗು ಹಾಲು ಉತ್ಪಾದನೆಗೆ ಪೂರಕವಾಗಿದ್ದು, ಎಲ್ಲಾ ಒಕ್ಕೂಟಗಳಿಗು ಅನುದಾನದ ಮೊತ್ತವನ್ನು ಹಂಚಿಕೆ ಮಾಡಲಾಗಿದೆ.  ಕಾರ್ಯಕ್ರಮವು ಪ್ರಗತಿಯಲ್ಲಿರುತ್ತದೆ.

3.  ಸ್ಟೆಪ್ ಮತ್ತು ಕ್ಷೀರ-ಸಂಜೀವಿನಿ ಯೋಜನೆ:  ಮಹಿಳಾ ಸಬಲೀಕರಣ

ಸ್ಪೆಪ್ ಕಾರ್ಯಕ್ರಮವು ಮಹಿಳೆಯರನ್ನು ಸಶಕ್ತ ಗುಂಪುಗಳಲ್ಲಿ ಸಂಘಟಿಸಿ ಅವರ ವೃತ್ತಿ ಕೌಶಲ್ಯತೆಯನ್ನು ಅಭಿವೃದ್ಧಿಪಡಿಸಿ ಉತ್ಪಾದಕ ಆಸ್ತಿಗಳಿಗೆ ವ್ಯವಸ್ಥೆ ಮಾಡುವುದು, ಹಿಂದಿನ ಮತ್ತು ಮುಂದಿನ ವ್ಯೂಹಗಳನ್ನು (Backward and Forward Linkages) ಸೃಷ್ಟಿಸುವುದು, ಬೆಂಬಲ ಸೇವೆಗಳನ್ನು ಸುಧಾರಿಸುವುದು/ ವ್ಯವಸ್ಥೆ ಮಾಡುವುದು, ಆಸ್ತಿ ಸೃಷ್ಟಿಗಾಗಿ ಸಾಲಕ್ಕೆ ಅವಕಾಶ ಮಾಡಿಕೊಡುವುದು, ಲಿಂಗ ಸಮಾನತೆ, ಆರೋಗ್ಯ ಮತ್ತು ಪೌಷ್ಟಿಕ ಆಹಾರ, ಹಾಗೂ ಕಾನೂನು ಸಾಕ್ಷರತೆ ಬಗ್ಗೆ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು, ಮಹಿಳೆಯರಿಗೆ ನಿರಂತರ ಆದಾಯ ತರುವಂತಹ ಉದ್ಯೋಗವನ್ನು ನೀಡುವ ಮೂಲಕ ಗಮನಾರ್ಹ ಪ್ರಭಾವವನ್ನು ಬೀರುವ ಗುರಿಯನ್ನು ಹೊಂದಿದೆ. ಹೀಗೆ, ಸ್ಟೆಪ್ ಕಾರ್ಯಕ್ರಮವು ಸಾಂಪ್ರದಾಯಿಕ ವಲಯಗಳಲ್ಲಿ ಬಡ ಮಹಿಳೆಯರ ಸಮಗ್ರ ಅಭಿವೃದ್ಧಿಯ ಗುರಿ ಹೋಂದಿರುವ ಪ್ಯಾಕೇಜನ್ನು ನೀಡುತ್ತದೆ. ಈ ಯೋಜನೆಯ ಮುಖ್ಯವಾದ ಗುರಿಯೆಂದರೆ ಯೋಜನಾ ಅವಧಿಯು ಮುಕ್ತಾಯಗೊಂಡ ನಂತರವೂ ಕನಿಷ್ಠ ಸರ್ಕಾರಿ ನೆರವು ಹಾಗೂ ಮಾರ್ಗದರ್ಶನದೊಂದಿಗೆ ಮಾರುಕಟ್ಟೆ ಪ್ರದೇಶದಲ್ಲಿ ಸ್ವಯಂ ಪೋಷಣೆಯ (Self Sustaining)ಆಧಾರದ ಮೇಲೆ ಗುಂಪುಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ.   Read More

 

4.   ರಾಷ್ಟ್ರೀಯ ಹೈನು ಯೋಜನೆ – 1
•    ಯೋಜನಾ ಆಯೋಗದ ಪ್ರಕಾರ 2021-22ಕ್ಕೆ 200 ಮಿಲಿಯನ್ ಟನ್ ಹಾಲಿಗೆ ಬೇಡಿಕೆ ಬರುವುದಾಗಿ ಮಾಹಿತಿ ಇರುತ್ತದೆ.  
•    ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಹಾಲಿಗೆ ಬೇಡಿಕೆ ಹೆಚ್ಚಾಗಲಿದ್ದು
  ಹಾಲಿನ ಉತ್ಪಾದನೆ ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆಗೆ ಉತ್ತೇಜಿಸಿ, ಪಾರದರ್ಶಕ ಮಾರುಕಟ್ಟೆ ಒದಗಿಸುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶಗಳಿಂದ ರಾಷ್ಟ್ರೀಯ ಹೈನುಯೋಜನೆ-1ನ್ನು 2012-13ರಲ್ಲಿ  ರಾಷ್ಟ್ರೀಯ ಹೈನು ಅಭಿವೃದ್ಧಿ ಸಂಸ್ಥೆ ಮೂಲಕ ಅನುಷ್ಟಾನಗೊಳಿಲು ಪ್ರಾರಂಭಿಸಲಾಯಿತು.

ಉದ್ದೇಶಗಳು:
1.    ದೇಶದಲ್ಲಿ ಲಭ್ಯವಿರುವ ಹೈನುರಾಸುಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಒಟ್ಟು ಹಾಲು ಉತ್ಪಾದನೆಯನ್ನು ಹೆಚ್ಚಿಸಿ ಬೇಡಿಕೆಯನ್ನು ಪೂರೈಸುವುದು.
2.    ಗ್ರಾಮೀಣ ಭಾಗದ ಹೈನುಗಾರರಿಗೆ ಸ್ಥಳೀಯವಾಗಿ ಪಾರದರ್ಶಕ ಮಾರುಕಟ್ಟೆ ಸೌಲಭ್ಯ ಒದಗಿಸುವುದು.

ರಾಷ್ಟ್ರೀಯ ಹೈನು ಯೋಜನೆ ವೆಚ್ಚಗಳ ವಿವರ:                                                                                                                        

 

ವಿಭಾಗ  

 

ಯೋಜನೆ ವಿವರ  

 

ಒಟ್ಟು ವೆಚ್ಚ (ಕೋಟಿ ರೂ.ಗಳಲ್ಲಿ)

(i)

ತಳಿ ಅಭಿವೃದ್ಧಿ   

715

ರಾಸುಗಳ ಪೌಷ್ಠಿಕತೆ   

425

(ii)

ಗ್ರಾಮೀಣ ಅವಲಂಬಿತ ಹಾಲು ಶೇಖರಣಾ ವ್ಯವಸ್ಥೆ

488

(iii)

ಯೋಜನೆ ಅನುಷ್ಟಾನ ಮತ್ತು ತರಬೇತಿ       

132

 

ಒಟ್ಟು*   

1760

 

ಯೋಜನೆ ಅನುಷ್ಟಾನಗೊಳಿಸುವ ಸಂಸ್ಥೆಯು ಭರಿಸಬೇಕಾದ ವಂತಿಕೆ       

282

 

ರಾಷ್ಷ್ರೀಯ ಹೈನು ಅಭಿವೃದ್ಧಿ ಸಂಸ್ಥೆ ವಂತಿಕೆ   

200

 

ಒಟ್ಟು ಮೊತ್ತ   

2242

   *ಅನುದಾನಗಳ ಮೂಲ - (ವಿಶ್ವಬ್ಯಾಂಕ್ ರೂ.1584 ಕೋಟಿ + ಕೇಂದ್ರ ಸರ್ಕಾರ ರೂ.176 ಕೋಟಿ)

ರಾಷ್ಟ್ರೀಯ ಹೈನು ಯೋಜನೆ –I  - ಕರ್ನಾಟಕ ಹಾಲು ಮಹಾಮಂಡಳಿ ವ್ಯಾಪ್ತಿಯ ಒಕ್ಕೂಟಗಳಿಗೆ ಮಂಜೂರಾಗಿರುವ ಉಪಯೋಜನೆಗಳ ವಿವರ:-

                                                                                                    (ಲಕ್ಷ ರೂ.ಗಳಲ್ಲಿ)

ಯೋಜನೆ ಅನುಷ್ಟಾನಗೊಳಿಸುವ 

ಸಂಸ್ಥೆಯ ಹೆಸರು   

ಮಂಜೂರಾದ ಅನುದಾನ    ಹೆಚ್ಚುವರಿ ಅನುದಾನ    ಒಟ್ಟು
ಕಹಾಮ - ಪಿಟಿ ಯೋಜನೆ  2,054.73 44.29 2,099.02
ಕಹಾಮ - ನಂದಿನಿ ವೀರ್ಯಾಣು ಕೇಂದ್ರ ಯೋಜನೆ    678.20 37.55 715.75

ರಾಷ್ಟ್ರೀಯ ಹೈನು ಯೋಜನೆ – I  - ಗ್ರಾಮೀಣ ಅವಲಂಬಿತ ಹಾಲು ಶೇಖರಣಾ ವ್ಯವಸ್ಥೆಯ ಉಪಯೋಜನೆಗಳ ವಿವರ:-

                                                                                                                                    (ಲಕ್ಷ ರೂ.ಗಳಲ್ಲಿ)

ಯೋಜನೆ ಅನುಷ್ಟಾನಗೊಳಿಸುವ ಒಕ್ಕೂಟಗಳ ಹೆಸರು   

ಯೋಜನಾ ವೆಚ್ಚಗಳ ಗುರಿ

ಅನುದಾನ ಮೊತ್ತ   

ಒಕ್ಕೂಟಗಳ ವಂತಿಕೆ   

ಒಟ್ಟು

ಬೆಂಗಳೂರು – 1   

473.53

329.69

803.22

ಬೆಂಗಳೂರು - III   

1176.49

1093.87

2270.36

ಧಾರವಾಡ   

159.57

9.00

168.57

ಹಾಸನ   

510.93

364.75

875.69

ಕೋಲಾರ

542.47

363.73

906.20

ಮೈಸೂರು   

667.00

442.50

1109.50

ರಾಯಚೂರು - ಬಳ್ಳಾರಿ   

520.01

489.77

1009.50

  ದಕ್ಷಿಣ ಕನ್ನಡ   

747.67

549.99

1297.66

   ಶಿವಮೊಗ್ಗ   

470.72

267.44

738.15

  ತುಮಕೂರು   

455.81

323.29

779.10

  ಮಂಡ್ಯ   

1039.95

751.14

1791.09

  ಬೆಳಗಾವಿ   

532.73

435.53

968.26

 ವಿಜಯಪುರ   

464.11

431.59

895.70

       ಒಟ್ಟು   

7760.99

5852.29

13613.28

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ರಾಷ್ಟ್ರೀಯ ಹೈನು ಯೋಜನೆ – I  - ಪಡಿತರ ಸಮತೋಲನಾ ಕಾರ್ಯಕ್ರಮದ ಉಪಯೋಜನೆಗಳ ವಿವರ:- (ಲಕ್ಷ ರೂ.ಗಳಲ್ಲಿ)

ಯೋಜನೆ ಅನುಷ್ಟಾನಗೊಳಿಸುವ ಒಕ್ಕೂಟಗಳ ಹೆಸರು

ಒಟ್ಟು ಅನುದಾನ

 ಬೆಂಗಳೂರು  

357.72

  ಬೆಂಗಳೂರು - II

229.54

 ಕೋಲಾರ   

358.65

 ಮೈಸೂರು   

378.75

 ತುಮಕೂರು

226.61

 ಧಾರವಾಡ   

225.80

ಹಾಸನ   

203.57

  ರಾಯಚೂರು-ಬಳ್ಳಾರಿ   

200.55

ಕಲಬುರ್ಗಿ   

200.52

ಬೆಳಗಾವಿ   

200.55

ಮಂಡ್ಯ   

183.16

 ವಿಜಯಪುರ   

109.55

ಚಾಮರಾಜನಗರ   

228.42

ಒಟ್ಟು   

3103.37

 

ರಾಷ್ಟ್ರೀಯ ಹೈನು ಯೋಜನೆ – I  - ಮೇವು ಅಭಿವೃದ್ಧಿ ಕಾರ್ಯಕ್ರಮದ ಉಪಯೋಜನೆಗಳ ವಿವರ:- (ಲಕ್ಷ ರೂ.ಗಳಲ್ಲಿ)

ಯೋಜನೆ ಅನುಷ್ಟಾನಗೊಳಿಸುವ ಒಕ್ಕೂಟಗಳ ಹೆಸರು   

ಒಟ್ಟು ಅನುದಾನ

  ಬೆಂಗಳೂರು    

174.04

  ಕೋಲಾರ   

305.00

  ರಾಯಚೂರು-ಬಳ್ಳಾರಿ   

343.44

 ತುಮಕೂರು   

106.26

  ಹಾಸನ   

103.77

                          ಒಟ್ಟು   

1032.51

1.  ಕ್ಷೀರಭಾಗ್ಯ :

  • ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಶ್ಯವಿರುವ ಪೌಷ್ಟಿಕ ಆಹಾರವನ್ನು ಒದಗಿಸುವ ದಿಶೆಯಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಹಾಲು ಮಹಾಮಂಡಳಿಯ ಸಹಯೋಗದೊಂದಿಗೆ ರಾಜ್ಯದ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲನ್ನು ಒದಗಿಸುವ ಕ್ಷೀರಭಾಗ್ಯ ಯೋಜನೆಯನ್ನು ದಿನಾಂಕ 1 ಆಗಸ್ಟ್ 2013ರಂದು ಜಾರಿಗೆ ಬಂದಿದೆ.
  • ರಾಜ್ಯದ ಬಡಮಕ್ಕಳಿಗೆ ನೆರವು ನೀಡಲು ಹಾಗೂ ಹಾಲು ಉತ್ಪಾದಕರು ತಯಾರಿಸುವ ಹೆಚ್ಚುವರಿ ಹಾಲಿನ ವಿಲೇವಾರಿಗೆ ಅನುವು ಮಾಡಿಕೊಡಲು ರಾಜ್ಯದ ಮುಖ್ಯಮಂತ್ರಿಗಳು ನೀಡಿದ ಸಲಹೆಯ ಮೇರೆಗೆ ಪ್ರಾರಂಭಗೊಂಡ ಈ ಕ್ಷೀರಭಾಗ್ಯ ಯೋಜನೆ ಕರ್ನಾಟಕ ಹಾಲು ಮಹಾಮಂಡಳಿಯು ಪರಿಕಲ್ಪಿಸಿಕೊಂಡ ಒಂದು ಅಪೂರ್ವವಾದ ಕನಸಿನ ಯೋಜನೆ.
  •  ಕ್ಷೀರಭಾಗ್ಯ ಯೋಜನೆಯ ಸಾರಾಂಶ ಹೀಗಿದೆ:
ಕ್ರಮ ಸಂಖ್ಯೆ ಸಾರಾಂಶ ಶಾಲೆಗಳು ಅಂಗನವಾಡಿ
1 ಶಾಲೆಗಳು/ಅಂಗನವಾಡಿಗಳು 55,683 64,000
2 ಶಾಲೆ/ಅಂಗನವಾಡಿ ಮಕ್ಕಳು 64 ಲಕ್ಷ 40 ಲಕ್ಷ
3 ಫಲಾನುಭವಿಗಳು ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ 1ರಿಂದ 10ನೇ ತರಗತಿಯ ಮಕ್ಕಳು  6 ತಿಂಗಳಿಂದ 6 ವರ್ಷದವರೆಗಿನ ಮಕ್ಕಳು
4 ಹಾಲಿನ ಪುಡಿಯ ಅಗತ್ಯತೆ ಒಂದು ಮಗುವಿಗೆ ಬೇಕಾಗುವ ಕೆನೆಭರಿತ ಹಾಲಿನಪುಡಿ 18 ಗ್ರಾಂ ಅಂದರೆ 150 ಮಿ.ಲಿ. ಹಾಲಿಗೆ ಸಮ (ವಾರದಲ್ಲಿ ಐದು ದಿನ) ಒಂದು ಮಗುವಿಗೆ ಬೇಕಾಗುವ ಕೆನೆಭರಿತ ಹಾಲಿನಪುಡಿ 18 ಗ್ರಾಂ ಅಂದರೆ 150 ಮಿ.ಲಿ. ಹಾಲಿಗೆ ಸಮ (ವಾರದಲ್ಲಿ ಐದು ದಿನ)
5 ದಿನನಿತ್ಯ ಅಗತ್ಯವಿರುವ ಹಾಲಿನ ಪ್ರಮಾಣ 5 ಲಕ್ಷ ಲೀಟರ್ 3 ಲಕ್ಷ ಲೀಟರ್
6 ಒಂದು ಬಾರಿ ಒಂದು ಮಗುವಿಗೆ ತಗಲುವ ವೆಚ್ಚ ಅಂದಾಜು ರೂ.5.25. ಅಂದಾಜು ರೂ.5.25

2. ಕ್ಷೀರಧಾರೆ ಯೋಜನೆ:  

2008-09ನೇ ಸಾಲಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.2/- ಪ್ರೋತ್ಸಾಹಧನವನ್ನು ಸರ್ಕಾರವು ಜಾರಿಗೊಳಿಸಿತು.  ಈ ಕಾರ್ಯಕ್ರಮವು ಕ್ಷೀರಧಾರೆ ಯೋಜನೆಯಾಗಿ ದಿ:14-5-2013 ರಿಂದ ಮುಂದುವರೆದಿದ್ದು, ಪ್ರತಿ ಲೀಟರ್ ಹಾಲಿಗೆ ರೂ.4/- ಪ್ರೋತ್ಸಾಹಧನವನ್ನು ಹಾಲು ಉತ್ಪಾದಕರಿಗೆ ಪಾವತಿಸಲಾಗುತ್ತಿದೆ.  ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಉತ್ಪಾದಕರ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಲಾಗುತ್ತಿದೆ.  ಮುಂದುವರೆದು, ಯೋಜನೆಯಡಿ ಹೆಚ್ಚಿನ ಪಾರದರ್ಶಕತೆ ತರಲು ಆಗಸ್ಟ್-2016 ರ ಮಾಹೆಯಿಂದ  ಹಾಲು ಉತ್ಪಾದಕರ ಆಧಾರ್ ಸಂಖ್ಯೆಗೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನದ ಮೊತ್ತವನ್ನು ಪಾವತಿಸಲು ಕ್ರಮವಿಡಲಾಗಿದೆ.  2016-17ರ ಸಾಲಿನಲ್ಲಿ ಒಟ್ಟು ರೂ.954.75 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿರುತ್ತದೆ.  ಪ್ರಸ್ತುತ ರಾಜ್ಯವು ಬರಗಾಲದಿಂದ ತತ್ತರಿಸುತ್ತಿದ್ದು, ಸಂಕಷ್ಠದಲ್ಲಿರುವ ಹೈನುಗಾರರಿಗೆ ಅನುಕೂಲವಾಗಲು ಡಿಸೆಂಬರ್-2016 ರಿಂದ ಪ್ರೋತ್ಸಾಹಧನದ ಮೊತ್ತವನ್ನು ರೂ.4/- ರಿಂದ ರೂ.5/-ಗೆ ಸರ್ಕಾರವು ಹೆಚ್ಚಿಸಿರುತ್ತದೆ.

ಈ ಯೋಜನೆಯಡಿ ಸರಾಸರಿ 8.60 ಲಕ್ಷ ಹಾಲು ಉತ್ಪದಕರು ಪ್ರಯೋಜನ ಪಡೆಯುತ್ತಿದ್ದು, ಇವರಲ್ಲಿ 3.5 ಲಕ್ಷ  ಮಹಿಳೆಯರು, ಪರಿಶಿಷ್ಟ ಜಾತಿ 65,000 ಹಾಗು ಪರಿಶಿಷ್ಠ ಪಂಗಡ 35,000 ಫಲಾನುಭವಿಗಳಿರುತ್ತಾರೆ.    

3.  ಸಂಘಗಳ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ:

2014-15ನೇ ಸಾಲಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಶೇಖರಣೆಯಾದ ಗುಣಮಟ್ಟದ ಪ್ರತಿ ಲೀಟರ್ ಹಾಲಿಗೆ 20 ಪೈಸೆಗಳನ್ನು ಸಂಘಗಳ ಸಿಬ್ಬಂದಿಗೆ ಪ್ರೋತ್ಸಾಹಧನವನ್ನಾಗಿ ನೀಡಿದ್ದು, 2016-17ನೇ ಸಾಲಿನಲ್ಲಿ ರೂ.36.30 ಕೋಟಿಗಳನ್ನು ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗಿರುತ್ತದೆ.  ತದನಂತರ ಈ ಯೋಜನೆಯು ಮುಂದುವರೆದಿರುವುದಿಲ್ಲ.

4.  ದೇಶಿ ತಳಿ ಹಸುವಿನ ಹಾಲು ಶೇಖರಣೆ, ಸಂಸ್ಕರಣೆ ಮತ್ತು ಮಾರಾಟ:  

2016-17ನೇ ಸಾಲಿನಲ್ಲಿ ಸದರಿ ಯೋಜನೆಯಡಿ ಕರ್ನಾಟಕ ಹಾಲು ಮಹಾಮಂಡಳಿಗೆ ರೂ.2.00 ಕೋಟಿ ಬಿಡುಗಡೆಯಾಗಿರುತ್ತದೆ.  ದೇಶಿ ತಳಿಗಳಾದ ಮಲ್ನಾಡ್ ಗಿಡ್ಡ ಹಾಗು ದೇವಣಿ ತಳಿಯ ರಾಸುವಿನ ಹಾಲನ್ನು ಸಂಗ್ರಹಿಸಿ ಮಾರಾಟ ಮಾಡಬೇಕಾಗಿದ್ದು, ಕಾರ್ಯಕ್ರಮವು ಪ್ರಗತಿಯಲ್ಲಿರುತ್ತದೆ.  
ವಿಶೇಷ ಕೇಂದ್ರಿಯ ನೆರವಿನಡಿ ಪರಿಶಿಷ್ಠ ವರ್ಗದವರ ಅಭಿವೃದ್ಧಿ ಕಾರ್ಯಕ್ರಮ:  
ಸದರಿ ಕಾರ್ಯಕ್ರಮದಡಿ ಪ್ರತಿ ಬಿ.ಎಂ.ಸಿ. ಘಟಕಕ್ಕೆ ತಲಾ ರೂ. 5.00 ಲಕ್ಷ ಅನುದಾನದಂತೆ ಚಿತ್ರದುರ್ಗ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ರಾಯಚೂರು, ಬಳ್ಳಾರಿ, ಬೆಳಗಾವಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 120 ಬಿ.ಎಂ.ಸಿ.ಘಟಕಗಳನ್ನು ಸ್ಥಾಪಿಸಲು ರೂ.6.00 ಕೋಟಿ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುತ್ತದೆ.  ಅನುದಾನದ ಮೊತ್ತ ಬಿಡುಗಡೆಯಾಗಿರುವುದಿಲ್ಲ. 

ಹೆಚ್.ಎಫ್. ತಳಿಯ ಉತ್ಕೃಷ್ಟ ಹೋರಿಗಳನ್ನು ಪಡೆದು ಅದರಿಂದ ಗುಣಮಟ್ಟದ ವೀರ್ಯನಳಿಕೆಗಳನ್ನು ಉತ್ಪಾದಿಸಿ ಅವುಗಳನ್ನು ಹಾಲೂಡುವ ರಾಸುಗಳಲ್ಲಿ ಬಳಸಿ, ಮುಂದಿನ ಪೀಳಿಗೆಯಲ್ಲಿ ಅನುವಂಶೀಯತೆ ಗುಣಗಳನ್ನು ಅಭಿವೃದ್ಧಿ ಪಡಿಸುವ ವೈಜ್ಞಾನಿಕ ವಿಧಾನವೇ ಪೀಳಿಗೆ ಪರೀಕ್ಷಾ ಯೋಜನೆ.

ವಿಧಾನ:

ಆಯ್ದ ಮತ್ತು ಗುಣಮಟ್ಟದಲ್ಲಿ ಉತ್ತಮವೆಂದು ಸಾಬೀತಾಗಿರುವ ಹೆಚ್.ಎಫ್. ಹೋರಿಗಳಿಂದ ಸಂಗ್ರಹಿಸಿರುವ ವೀರ್ಯವನ್ನು ಕೃತಕ ಗರ್ಭಧಾರಣೆ ಮೂಲಕ ಯೋಜನೆಯ ಕಾರ್ಯವ್ಯಾಪ್ತಿಯಲ್ಲಿ ಬರುವ ಹೆಚ್.ಎಫ್. ತಳಿಯ ರಾಸುಗಳಿಗೆ ನೀಡಿ, ಇವುಗಳಿಂದ ಹುಟ್ಟುವ ಹೆಣ್ಣು ಕರುಗಳನ್ನು ಪಾಲನೆ ಮಾಡಿ, ಇವುಗಳು ಬೆಳೆದು ಬೆದೆಗೆ ಬಂದಾಗ ಹೋರಿಗಳ ವೀರ್ಯವನ್ನು ಕೃತಕ ಗರ್ಭಧಾರಣೆ ಮೂಲಕ ನೀಡಿ, ಇವುಗಳಿಂದ ಹುಟ್ಟುವ ಗಂಡು ಕರುಗಳನ್ನು ಯೋಜನೆಯ ನಿಯಮಾನುಸಾರವಾಗಿ ಎಲ್ಲಾ ಪರೀಕ್ಷೆಗಳಿಗೆ ಒಳಪಡಿಸಿದ ನಂತರ ಅತ್ಯುನ್ನತ ಅರ್ಹತೆಗಳನ್ನು ಹೊಂದಿರುವ ಗಂಡು ಕರುಗಳನ್ನು ಆಯ್ಕೆ ಮಾಡಲಾಗುವುದು.  ಈ ರೀತಿ ಆಯ್ಕೆ ಮಾಡಿದ ಗಂಡು ಕರುಗಳನ್ನು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿಗಾಗಿ ವೀರ್ಯ ಸಂಗ್ರಹಿಸಲು ವೀರ್ಯ ಸಂಕಲನ ಕೇಂದ್ರಗಳಲ್ಲಿ ಬಳಸಿಕೊಳ್ಳಲಾಗುವುದು.  ಸದರಿ ಯೋಜನೆಯು ರೂ 2055 ಲಕ್ಷಗಳ ವಿಶ್ವಬ್ಯಾಂಕ್ ನೆರವಿನೊಂದಿಗೆ 2012-13ರಂದು  ಪ್ರಾರಂಭಗೊಂಡಿದ್ದು 2017-18ರವರೆಗೂ ಅಂದರೆ 6 ವರ್ಷಗಳ ಅವಧಿವರಿಗೂ ಕಾರ್ಯಚರಣೆಯಲ್ಲಿರುತ್ತದೆ.

ಯೋಜನೆಯ ಉದ್ದೇಶ:
ಉತ್ತಮ ಗುಣಮಟ್ಟದ ಹೆಚ್.ಎಫ್. ತಳಿಯ ಹೋರಿಗಳನ್ನು ಉತ್ಪಾದನೆ ಮಾಡಿ ವೀರ್ಯ ಸಂಕಲನಾ ಕೇಂದ್ರಗಳಿಗೆ ಸರಬರಾಜು ಮಾಡುವುದು.
ಮುಂದೆ ಹುಟ್ಟುವ ಪ್ರತಿ ಸಂತತಿಯಲ್ಲಿ ಈಗ ಇರುವ ರಾಸುಗಳಿಗಿಂತ ಹೆಚ್ಚು ಹಾಲು, ಹಾಲಿನ ಜಿಡ್ಡಿನಾಂಶ ಮತ್ತು ಸಸಾರಜನಕ ಇರುವಂತೆ ಮಾಡುವುದು.
 
ಕಾರ್ಯವ್ಯಾಪ್ತಿ:
ರಾಜ್ಯದಲ್ಲಿ ಹೆಚ್.ಎಫ್. ತಳಿಯ ರಾಸುಗಳ ಪೀಳಿಗೆ ಪರೀಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸಲು ಹೆಚ್.ಎಫ್. ತಳಿಯ ರಾಸುಗಳ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರು ಮತ್ತು ಕೋಲಾರ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಬರುವ 96 ಆಯ್ದ ಕೃತಕ ಗರ್ಭಧಾರಣೆ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಕಾರ್ಯಕ್ಷೇತ್ರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳಲ್ಲಿಯೂ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ತಾಲ್ಲೂಕು ಹಾಗೂ ಆನೇಕಲ್ ತಾಲ್ಲೂಕಗಳಲ್ಲಿಯೂ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕು ಹಾಗೂ ಕೋಲಾರ ಜಿಲ್ಲೆಯ ಕೋಲಾರ  ತಾಲ್ಲೂಕುಗಳಲ್ಲಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ ಬೆಂಗಳೂರು ಮತ್ತು ಕೋಲಾರ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಬರುವ 4 ಜಿಲ್ಲೆಗಳು 12 ತಾಲ್ಲೂಕುಗಳು ಹಾಗೂ 924 ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಈ ಯೋಜನೆಯನ್ನು ಅಡವಡಿಸಕೊಳ್ಳಲಾಗಿದೆ.  ಸದರಿ ಯೋಜನೆಯಲ್ಲಿ ಒಳಪಡಿಸುವ ರಾಸುಗಳ ಅಭಿವೃದ್ಧಿ ಉತ್ಪಾದನೆಯ ವಿವರಗಳನ್ನು ಹಾಗೂ ಮಾಹಿತಿಯನ್ನು ಇನಾಫ್(INAPH) ತಂತ್ರಾಶದ ಮೂಲಕ ದಾಖಲಾತಿ ಮಾಡಲಾಗುವುದು.
 
ಯೋಜನೆಯ ಕಾರ್ಯಕ್ರಮಗಳು ಹಾಗೂ ವಾರ್ಷಿಕ ಗುರಿ
 

ಕ್ರಮ

ಸಂಖ್ಯೆ
 

ವಿವರಗಳು/ವಾರ್ಷಿಕ 2012 -  2013 2013 - 2014 2014 - 2015 2015 - 2016 2016 - 2017 2017- 2018 ಒಟ್ಟು
1 ಒಟ್ಟು ಹೋರಿಗಳ ಅಳವಡಿಕೆ 25 25 30 30 40 40 190
2 ಒಂದು ಹೋರಿಯಿಂದ ಕನಿಷ್ಟ ಕೃತಕ ಗರ್ಭಧಾರಣೆ  2000 2000 2000 2000 2000 2000 -
3 ಪ್ರತಿ ಹೋರಿಯ ವೀರ್ಯನಳಿಕೆಗಳ ದಾಸ್ತಾನು 3000 3000 3000 3000 3000 3000 -
4 ಪ್ರತಿ ಹೋರಿಯಿಂದ ಕನಿಷ್ಟ ಹೆಣ್ಣುಕರುಗಳ ನೊಂದಣಿ 216 216 216 216 216 216 -
5 ಕನಿಷ್ಟ ಹೆಣ್ಣುಕರುಗಳ ಹಾಲು ಇಳುವರಿ ದಾಖಲಾತಿ 0 0 76 76 76 76 -
6 ಒಟ್ಟಾರೆ ಹೆಚ್.ಜಿ. ಎಮ್. ಹೆಚ್.ಎಫ್ ಗಂಡು ಕರುಗಳ ವಿತರಣೆ 7 18 34 45 62 66 232

 

ಪೀಳಿಗೆ ಪರೀಕ್ಷಾ ಯೋಜನೆಯ ಪ್ರಗತಿ ವಿವರಗಳು
 
ಒಟ್ಟು ಕೃತಕ ಗರ್ಭಧಾರಣೆ 322250
ಒಟ್ಟು ಹೆಣ್ಣು ಕರುಗಳ ನೊಂದಣಿ 30634
ಒಟ್ಟು ಯೋಜನೆ ಅಡಿ ಜನಿಸಿದ ಹೆಣ್ಣು ಕರುಗಳು 5812
ಹಾಲಿನ ಇಳುವರಿ ದಾಖಲಾತಿ ಅಡಿ ಇರುವ ಹೆಣ್ಣು ಕರುಗಳು 4511
ಹಾಲಿನ ಇಳುವರಿ ದಾಖಲಾತಿ ಪೂರ್ಣಗೊಂಡಿರುವ ಹೆಣ್ಣು ಕರುಗಳು 1988
ಹಾಲಿನ ಇಳುವರಿ ದಾಖಲಾತಿಗೆ ಅಳವಡಿಸಿರುವ ರಾಸುಗಳು 9021
ಹಾಲಿನ ಇಳುವರಿ ದಾಖಲಾತಿ ಪೂರ್ಣಗೊಂಡಿರುವ ರಾಸುಗಳು 2665
ಒಟ್ಟು ಹೆಚ್ ಜಿ ಮ್ (ಹೆಚ್ ಎಫ್ ) ಗಂಡು ಕರುಗಳ ನೊಂದಣಿ 347

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105