1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಹಾಲಿನಲ್ಲಿರುವ ಅಗತ್ಯವಾದ ಪೋಷಕಾಂಶಗಳು :

ಶಕ್ತಿ (ಎನರ್ಜಿ) :

ದೈನಂದಿನ ಆಹಾರವು ಕ್ಯಾಲೋರಿಗಳ ರೂಪದಲ್ಲಿ ನಮಗೆ ಶಕ್ತಿಯನ್ನು ಒದಗಿಸುತ್ತದೆ (ಕಿಲೋ ಕ್ಯಾಲೋರಿ). ಇಂತಹ ಕ್ಯಾಲೋರಿಯು ಕಾರಿನ ಇಂಧನದಂತೆ, ಶಕ್ತಿ ನೀಡುವ ಇಂಧನವಾಗಿ ನಮ್ಮ ಶರೀರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ನಮ್ಮನ್ನು ಇತರೆ ಕಾರ್ಯಗಳಲ್ಲಿ ತೊಡಗಲು ಶಕ್ತಗೊಳಿಸುತ್ತವೆ.  

ಹಾಲು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದ್ದು, ತನ್ನ ಶಕ್ತಿಯ ಅಂಶಗಳಿಗೆ ಹೋಲಿಸಿದಾಗ ‘‘ಪೌಷ್ಟಿಕ ದಟ್ಟವಾದ’’ ಸಾಪೇಕ್ಷ ಎಂದು ವಿವರಿಸಬಹುದು. 

ಇಂತಹ ಹೆಚ್ಚಿನ ಕ್ಯಾಲೋರಿಯು ಅಧಿಕ ಶಕ್ತಿಯ ಅವಶ್ಯಕತೆಯುಳ್ಳವರಿಗೆ ಉದಾಹರಣೆಗೆ: ಮಕ್ಕಳು ಅಥವಾ ಹದಿಹರೆಯದರಿಗೆ ಅನುಕೂಲಕರವಾಗಿದ್ದು, ವಯಸ್ಸಾದವರು, ಕಡಿಮೆ ಹಸಿವುಳ್ಳವರಿಗೆ ಹೆಚ್ಚಿನ ಪೋಷಕಾಂಶ ಹಾಗೂ ಶಕ್ತಿಯನ್ನು ತಕ್ಕ ಮಟ್ಟಿಗೆ ಒದಗಿಸಲು ಅತ್ಯಮೂಲ್ಯವಾಗಿದೆ. ಕಡಿಮೆ ಕ್ಯಾಲೋರಿ ಹೊಂದಿರುವ ಹಾಲು ಬಹಳಷ್ಟು ಜನರ ಬೇಡಿಕೆಯಾಗಿದ್ದು, ತೂಕ ನಿಯಂತ್ರಣಕ್ಕಾಗಿ ಕ್ಯಾಲೋರಿ ಒದಗಿಸುವ ನಿಯಂತ್ರಿತ ಆಹಾರವಾಗಿ ಸೇವಿಸಲು ಪ್ರಯೋಜನಕಾರಿಯಾಗಿದೆ. 

ಪ್ರೋಟೀನ್ (ಸಸಾರಜನಕ) :

ಪ್ರೋಟೀನ್ ದೇಹಕ್ಕೆ ಅತಿಮುಖ್ಯವಾಗಿ ಬೇಕಾದ ಹಾಗೂ ದೇಹದ ಯಥಾವತ್ತಾದ ಕಾರ್ಯಚಟುವಟಿಕೆಗೆ ಅಗತ್ಯವಾದ ಬೆಳವಣಿಗೆ, ಅಂಗಾಂಶಗಳ ರಿಪೇರಿ, ಹಾರ್ಮೋನು ಮತ್ತು ಕಿಣ್ವಗಳ ಸೂಕ್ತ ಬೆಳವಣಿಗೆಗೆ ಅವಶ್ಯಕವಾಗಿದೆ. ಹಾಲು ‘‘ಹೆಚ್ಚಿನ ಜೈವಿಕ ಮೌಲ್ಯ’’ವುಳ್ಳ ಪ್ರೋಟೀನ್ ಮೂಲವಾಗಿದೆ. ಹಾಗೆಂದರೆ, ಹಾಲು ದೇಹ ಸ್ವತಃ ತಯಾರು ಮಾಡಲು ಸಾಧ್ಯವಿರದ ಪ್ರೋಟೀನ್ ಮೂಲವಾದ ಅಮೈನೋ ಆಸಿಡ್‍ಗಳನ್ನು ಒದಗಿಸುತ್ತದೆ. 

ಕಾರ್ಬೋಹೈಡ್ರೇಟ್ (ಶರ್ಕರಪಿಷ್ಠಗಳು) :

ಕಾರ್ಬೋಹೈಡ್ರೇಟ್ ದೇಹದ ಹಲವಾರು ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಹಾಲಿನಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್‍ನ ರೂಪವು ಲ್ಯಾಕ್ಟೋಸ್ ಆಗಿದ್ದು ದಂತಕ್ಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಹಾನಿಕಾರಕ ಸಕ್ಕರೆಯಾಗಿದೆ. ಈ ಕಾರಣಕ್ಕಾಗಿ, ಕಾಯಿಸಿದ ಹಾಲು ಮತ್ತು ನೀರು, ಎರಡೇ ಪಾನೀಯಗಳು ಊಟದ ನಡುವೆ ಸೇವಿಸುವ ಸುರಕ್ಷಿತ ಪಾನೀಯಗಳೆಂದು ದಂತವೈದ್ಯರು ಶಿಫಾರಸ್ಸು ಮಾಡುತ್ತಾರೆ.

ಫ್ಯಾಟ್ (ಹಾಲಿನ ಕೊಬ್ಬು) :

ಹಾಲಿನ ಕೊಬ್ಬು ದೇಹದ ಹಲವಾರು ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯ ಸಂಗ್ರಹ ಹಾಗೂ ಅಗತ್ಯವಾದ ಹಾರ್ಮೋನುಗಳ ಬೆಳವಣಿಗೆ, ರಕ್ಷಣೆ, ಉಷ್ಣತೆ ಹಾಗೂ ಕೊಬ್ಬಿನಲ್ಲಿ ಕರಗುವ ಹಲವಾರು ವಿಟಾಮಿನ್‍ಗಳನ್ನು ಒದಗಿಸುತ್ತದೆ.
ಹಾಲಿನ ಕೊಬ್ಬು ಡೇರಿ
   ಉತ್ಪನ್ನಗಳಿಗೆ ವಿಶೇಷ ಗುಣಲಕ್ಷಣಗಳಾದ ಪರಿಮಳ, ರಚನೆ, ರೂಪ ಹಾಗೂ ದೃಢತೆಯನ್ನು ಒದಗಿಸುವುದರ ಜೊತೆಗೆ ಕೊಬ್ಬು ಕರಗುವ ವಿಟಾಮಿನ್‍ಗಳನ್ನು, ಅಗತ್ಯ ಮೇದಾಮ್ಲಗಳನ್ನು ಮತ್ತು ಇತರೆ ಆರೋಗ್ಯ ಪ್ರಚಾರ ಸಂಯುಕ್ತಗಳನ್ನು ಒದಗಿಸುವ ಮೂಲವಾಗಿದೆ. 

 

ಕೊಬ್ಬಿನಲ್ಲಿ ಕರಗುವ ವಿಟಾಮಿನ್‍ಗಳು :
 

ವಿಟಾಮಿನ್ ಎ :
ವಿಟಾಮಿನ್ ಎ ಉತ್ತಮ ದೃಷ್ಟಿ, ಪ್ರತಿರಕ್ಷಣೆ
ಆರೋಗ್ಯ ಮತ್ತು ದೇಹದ ಅಂಗಾಂಶಗಳ ಸಾಮಾನ್ಯ ಬೆಳವಣೆಗೆಗೆ ಅಗತ್ಯವಾಗಿದೆ.
 

ವಿಟಾಮಿನ್ ಡಿ :
ವಿಟಾಮಿನ್ ಡಿ ದೇಹಕ್ಕೆ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಹೀರಿಕೊಳ್ಳಲು ಪ್ರಮುಖ ಪಾತ್ರವಹಿಸಿ ಹಾಗೂ ಆರೋಗ್ಯಕರ ಮೂಳೆಗಳು ಹಾಗೂ ಹಲ್ಲುಗಳ ರಚನೆಗೆ ಅಗತ್ಯವಾಗಿದೆ.

ನೀರಿನಲ್ಲಿ ಕರಗುವ ವಿಟಾಮಿನ್‍ಗಳು :

ವಿಟಾಮಿನ್ ಬಿ :
ಹಾಲು ಹಲವಾರು ವಿಟಾಮಿನ್ ಬಿ ಪ್ರಕಾರಗಳನ್ನು ಹೊಂದಿದ್ದು, ವಿಟಾಮಿನ್ ಬಿ12 ನಿಂದ ವಿಶೇಷವಾಗಿ ಸಮೃದ್ಧವಾಗಿದೆ.

ವಿಟಾಮಿನ್ ಬಿ12 :
ವಿಟಾಮಿನ್ ಬಿ12 ಆರೋಗ್ಯಕರ ನರಗಳ ನಿರ್ವಹಣೆಗೆ, ಕೆಂಪು ರಕ್ತಕಣಗಳು ಹಾಗೂ ಶಕ್ತಿ ಉತ್ಪಾದನೆಗೆ ಮತ್ತು ಸಾಮಾನ್ಯ ಕೋಶ ವಿಭಜನೆಗೆ ಅವಶ್ಯವಾಗಿದೆ. ಥೈಮಿನ್(ವಿಟಾಮಿನ್ ಬಿ1) ಹಾಗೂ ರೈಬೋಫ್ಲೇವಿನ್ (ವಿಟಾಮಿನ್ ಬಿ2) ಗಳು ಸಹ ಹಾಲಿನಲ್ಲಿ ಪ್ರಸ್ತುತವಿರುತ್ತವೆ.
ಥೈಮಿನ್(ವಿಟಾಮಿನ್ ಬಿ1) :
ವಿಟಾಮಿನ್ ಬಿ1 ಕಾರ್ಬೋಹೈಡ್ರೇಟ್‍ನ ಚಯಾಪಚಯ ಕ್ರಿಯೆಗೆ, ನರಗಳ ಹಾಗೂ ಹೃದಯದ ವಿವಿಧ ಕಾರ್ಯಗಳಿಗೆ ಅವಶ್ಯಕ.
ರೈಬೋಫ್ಲೇವಿನ್ (ವಿಟಾಮಿನ್ ಬಿ2) :
ವಿಟಾಮಿನ್ ಬಿ2 ಸೇವಿಸಿದ ಆಹಾರದಿಂದ ಶಕ್ತಿಯ ಬಿಡುಗಡೆಗೆ ಹಾಗೂ ಆರೋಗ್ಯಕರ ಚರ್ಮ ಹಾಗೂ ಚರ್ಮದ ಪದರಗಳ ನಿರ್ವಹಣೆಗೆ ಅವಶ್ಯಕ.
ನಿಯಾಸಿನ್ :
ನಿಯಾಸಿನ್ ಚಯಾಪಚಯ ಕ್ರಿಯೆಗಳಿಂದ ಉತ್ಪತ್ತಿಯಾಗುವ ಶಕ್ತಿಯ ನಿರ್ವಹಣೆಗೆ ಅವಶ್ಯಕ. ಮಕ್ಕಳಿಗೆ ಹಾಗೂ ವಯಸ್ಕರಿಗೆ ದಿನಕ್ಕೆ 6.6 ಮಿ.ಗ್ರಾಂ/1000 ಕಿಲೋ ಕ್ಯಾಲೋರಿ ನಿಯಾಸಿನ್ ಅವಶ್ಯಕವಾಗಿದ್ದು, ಹಾಲು ಈ ಅವಶ್ಯಕತೆಯ ಸುಮಾರು 3% ರಷ್ಟು ಒದಗಿಸುತ್ತದೆ.
ಫೋಲೇಟ್ :
ಫೋಲೇಟ್ ಜೀವಕೋಶಗಳ ವಿಭಜನೆಗೆ ಮತ್ತು ಅಂಗಾಂಶಗಳ ಸರಿಯಾದ ಅಭಿವೃದ್ಧಿಗೆ ಅಗತ್ಯವಾದ ಪ್ರಮುಖ ವಿಟಾಮಿನ್ ಆಗಿದೆ.

ಪಿರಿಡೋಕ್ಸಿನ್(ವಿಟಾಮಿನ್ ಬಿ6) :
ವಿಟಾಮಿನ್ ಬಿ6 ಒಂದು ಅವಶ್ಯಕ ವಿಟಾಮಿನ್ ಆಗಿದ್ದು, ಹಾಲಿನಲ್ಲಿ ಅಲ್ಪ ಪ್ರಮಾಣದಲ್ಲಿದ್ದು
, ಪ್ರೋಟೀನ್‍ನ ಚಯಾಪಚಯ ಕ್ರಿಯೆಗೆ, ಕೆಂಪು ರಕ್ತ ಕಣಗಳ ರಚನೆಗೆ, ಜೀವನಿರೋಧಕ ಶಕ್ತಿಯ ಬೆಳವಣಿಗೆಗೆ ಹಾಗೂ ನರಮಂಡಳಗಳ ನಿರ್ವಹಣೆಗೆ ಅಗತ್ಯವಾಗಿದೆ.
ವಿಟಾಮಿನ್ ಸಿ :
ವಿಟಾಮಿನ್ ಸಿ ರಕ್ತನಾಳಗಳ, ಮೃದ್ವಸ್ಥಿ, ಸ್ನಾಯು ಮತ್ತು ಮೂಳೆಗಳ ನಿರ್ವಹಣೆ ಹಾಗೂ ಸೂಕ್ತ ರಚನೆಗೆ ಅವಶ್ಯಕ. 
ಕ್ಯಾಲ್ಸಿಯಂ :
ಹಾಲು ಕ್ಯಾಲ್ಸಿಯಂನ ಮೂಲವಾಗಿದ್ದು, ಹಲ್ಲು ಮತ್ತು ಮೂಳೆಗಳ ಆರೋಗ್ಯಕರ ಬೆಳವಣಿಗೆ ಮತ್ತು ನಿರ್ವಹಣೆಗೆ, ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಸ್ನಾಯುಗಳ ಸಂಕುಚನ ಕ್ರಿಯೆಗಳಿಗೆ ಅತ್ಯಗತ್ಯ.
ಝಿಂಕ್ (ಸತುವು) :
ಝಿಂಕ್ ದೇಹದ ಅನೇಕ ಕಿಣ್ವಗಳ(ಎನ್‍ಜೈಮ್ಸ್) ಒಂದು ಘಟಕವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು, ಬೆಳವಣಿಗೆಗೆ, ಗಾಯ ಗುಣವಾಗಲು ಹಾಗೂ ನಾಲಗೆಯ ರುಚಿಯ ಗೃಂಥಿಗಳ ರಚನೆಗೆ ಅವಶ್ಯಕ.
ಫಾಸ್ಪರಸ್ (ರಂಜಕ) :
ರಂಜಕದ ಪ್ರಮುಖ ಮೂಲಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಬರುತ್ತವೆ. ಇದು ದೇಹದ ಎರಡನೇ ಪ್ರಮುಖ ಖನಿಜವಾಗಿದ್ದು, ಕ್ಯಾಲ್ಸಿಯಂ ಹಾಗೂ ಪ್ರೋಟೀನ್‍ನ ಚಯಾಪಚಯ ಕ್ರಿಯೆಗೆ ಪ್ರಮುಖ ಪಾತ್ರ ವಹಿಸುತ್ತದೆ. ರಂಜಕ ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳು ಹಾಗೂ ಜೀವಕೋಶ, ಒಳಚರ್ಮದ ರಚನೆ, ಅಂಗಾಂಶಗಳ ಬೆಳವಣಿಗೆ ಹಾಗೂ ದೇಹದ ಆಮ್ಲೀಯತೆ ಸಮದೂಗಲು ಅವಶ್ಯಕ.
ಮೆಗ್ನೀಷಿಯಂ :
ದೇಹದ ಅಧಿಕ ರಕ್ತದೊತ್ತಡ, ಹೃದಯಾಘಾತವಾಗದಂತೆ ನೋಡಿಕೊಳ್ಳುತ್ತದೆ. 

ಪೊಟ್ಯಾಸಿಯಮ್ :
ಪೊಟ್ಯಾಸಿಯಮ್ ಮುಖ್ಯವಾಗಿ ದೇಹದ ಜೀವಕೋಶಗಳ ದ್ರವವಾಗಿ ಇರುತ್ತದೆ. ದೇಹದ ದ್ರವ ಸಮತೋಲನ, ಸ್ನಾಯು ಸಂಕುಚನ, ನರಗಳ ನಿರ್ವಹಣೆ, ಹಾಗೆಯೇ ಹೃದಯದ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕ.
ಇತರೆ ಖನಿಜಗಳು :
ಸೋಡಿಯಂ, ಸೆಲೆನಿಯಂ ಹಾಗೂ ಕಬ್ಬಿಣದಂತಹ ಖನಿಜಗಳು ಸಹ  ಕಡಿಮೆ ಪ್ರಮಾಣದಲ್ಲಿ ಹಾಲಿನಲ್ಲಿ ಇರುತ್ತವೆ. 

ಹಾಲಿನಿಂದಾಗುವ ಆರೋಗ್ಯಕಾರಿ ಪರಿಣಾಮಗಳು :
 

ಮೂಳೆಗಳ ಆರೋಗ್ಯ :
ಹಾಲು ಮತ್ತು ಹಾಲಿನ ಉತ್ಪನ್ನಗಳು ಆರೋಗ್ಯಕಾರಿ ಮೂಳೆಗಳ ಬೆಳವಣೆಗೆ ಹಾಗೂ ದೃಢತೆಗೆ ಅವಶ್ಯಕವಾದ ಕ್ಯಾಲ್ಸಿಯಂ, ರಂಜಕ, ಮೆಗ್ನೇಷಿಯಂ ಮತ್ತು ಪ್ರೋಟೀನ್‍ನ್ನು ಪೂರೈಕೆ ಮಾಡುತ್ತದೆ.
ಬಾಲ್ಯದಿಂದ ನಿರಂತರವಾಗಿ
ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದಾಗಿ ಬಲವಾದ ಮೂಳೆಗಳ ಸೂಕ್ತ ಬೆಳವಣಿಗೆಯಾಗುವುದಲ್ಲದೇ ಆಸ್ಟಿಯೋಪೊರೋಸಿಸ್ ನಂತಹ ರೋಗಗಳ ವಿರುದ್ಧ  ಹೋರಾಡಲು ನೆರವಾಗುತ್ತದೆ. ಇದು ನಂತರದ ದಿನಗಳಲ್ಲಿ ನಿತ್ರಾಣ, ಮೂಳೆಗಳ ಅಸ್ವಸ್ಥತೆ ಉಂಟು ಮಾಡುವ ರೋಗವಾಗಿದೆ.
ಹಲ್ಲು:
 ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕಾಂಶವು ಹಲ್ಲುಗಳ ಬೆಳವಣಿಗೆ ಹಾಗೂ ಸಧೃಡತೆಗೆ ಪರಿಣಾಮಕಾರಿ.
ಹಲ್ಲಿನ ತತ್ಞರ ಪ್ರಕಾರ ನೀರನ್ನು ಹೊರತುಪಡಿಸಿ ಹಾಲು ಒಂದೇ ಊಟದ ಮಧ್ಯೆ ಸೇವಿಸಬಹುದಾಗಿರುವಂತಹ ಪಾನೀಯವಾಗಿದ್ದು, ಹಲ್ಲು ಹಾಳಾಗಲು ಸಮಂಜಸ ಪರಿಸರವಿದ್ದರೂ ಹಲ್ಲು ಹಾಳಾಗುವುದಿಲ್ಲ.

ಹಾಲು ಮತ್ತು ರಕ್ತದೊತ್ತಡ :
ಹೆಚ್ಚಿನ ಅಧ್ಯಯನಗಳ ಪ್ರಕಾರ ಕಡಿಮೆ ಉಪ್ಪಿರುವ ಸಮತೋಲಿತ ಆಹಾರದಂತೆ ದಿನನಿತ್ಯ 3 ಭಾಗ ಹಾಲು/ಹಾಲಿನ ಉತ್ಪನ್ನಗಳು ಹಾಗೂ 5 ಭಾಗ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದಾಗಿದೆ.
ಬೊಜ್ಜು :
ಜನಪ್ರಿಯ ನಂಬಿಕೆಯ ವಿರುದ್ಧವಾಗಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವ ಜನರು ಇದನ್ನು ಸೇವಿಸದೇ ಇರುವವರಿಗಿಂತ ತೆಳ್ಳಗಿದ್ದು, ಆರೋಗ್ಯದಲ್ಲಿ ಸಧೃಡರಾಗಿರುತ್ತಾರೆ ಎಂದು ವಿಜ್ಞಾನ ತಿಳಿಸಿದೆ.
ಸಂಶೋಧನೆಯ ಪ್ರಕಾರ ಹಾಲು ಮತ್ತು ಹಾಲಿನ ಉತ್ಪನ್ನಗಳ ದಿನಂಪ್ರತಿ ಸೇವನೆಯು ಹೆಚ್ಚಿನ ತೂಕ ನಷ್ಟಕ್ಕೆ ಸಂಬಂಧಿಸಿರುತ್ತದೆ.
ಟೈಪ್ 2 ಮಧುಮೇಹ :
ಅಧ್ಯಯನದ ಪ್ರಕಾರ ಕಡಿಮೆ ಕೊಬ್ಬಿರುವ ಹಾಲಿನ ಉತ್ಪನ್ನಗಳ ದಿನಂಪ್ರತಿ ಸೇವನೆಯಿಂದಾಗಿ ಟೈಪ್ 2 ಮಧುಮೇಹ ರೋಗದಿಂದ ದೂರವುಳಿಯಬಹುದಾಗಿದೆ. ಇದು ವಯಸ್ಕರಲ್ಲಿ ಬಹಳ ಕಾಲ ಉಳಿಯುವಂತಹ ಸಮಸ್ಯೆಯಾಗಿದ್ದು, ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಾಮನ್ಯವಾಗಿ ಕಾಣಿಸಿಕೊಳ್ಳುವ
ರೋಗವಾಗುತ್ತಿದೆ.
ಜಲಸಂಚಯನ (ಹೈಡ್ರೇಷನ್):
ಹಾಲು ದೇಹಕ್ಕೆ ಒಂದು ಅತ್ಯುತ್ತಮ ದ್ರವವಾಗಿದ್ದು, ದೇಹಕ್ಕೆ ನೀರಿನಾಂಶವನ್ನು ಒದಗಿಸುವುದಲ್ಲದೇ ದೇಹಕ್ಕೆ ಅವಶ್ಯಕವಾದ ಪ್ರಯೋಜನಕಾರಿ ಪೋಷಕಾಂಶಗಳನ್ನು ಹಾಗೂ ಹಲ್ಲುಗಳ ರಕ್ಷಣೆಗೆ ನೆರವಾಗುತ್ತದೆ.

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105