1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಹಾಲಿನ ಪ್ರಾಮುಖ್ಯತೆಗಳು :

ಹಾಲು,ಬೆಳೆಯುತ್ತಿರುವ ಮಕ್ಕಳಿಗೆ ಪೂರ್ಣ ಆಹಾರ. ಇದು ಸಾಮನ್ಯ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿದೆ. ನಮ್ಮ ಆಹಾರದಲ್ಲಿ ಹಾಲಿನ ಪ್ರಾಮುಖ್ಯತೆಯನ್ನು ವೇದಗಳ ಕಾಲದಿಂದಲೂ ಗುರುತಿಸಲ್ಪಟ್ಟಿದೆ ಹಾಗೂ ಎಲ್ಲಾ ಆಧುನಿಕ ಸಂಶೋಧನೆಗಳು ಈ ದೃಷ್ಠಿಯನ್ನು ಬಲಪಡಿಸಿ ಬೆಂಬಲಿಸಿದೆ. ಇದು ಎಲ್ಲಾ ಗಮನಾರ್ಹ ಪ್ರಮಾಣದಲ್ಲಿ ಅಗತ್ಯ ಪೋಷಕಾಂಶಗಳನ್ನು ಯಾವುದೇ ಏಕ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ಇದು ಬೆಳವಣಿಗೆ ಹಾಗೂ ಶಿಶುಗಳ ಅಭಿವೃದ್ಧಿಗೆ ಅತ್ಯಗತ್ಯ. ಇದು ಕೇವಲ ಬಾಲ್ಯದಲ್ಲಿ ಬೇಕಾದ ಮುಖ್ಯ ಆಹಾರವಾಗಿರದೇ, ಒಂದು ಅಥವಾ ಇತರೆ ರೀತಿಯಲ್ಲಿ ಜೀವನದುದ್ದಕ್ಕೂ ಹಲವಾರು ಪ್ರಯೋಜನೆಗಳನ್ನು ಒದಗಿಸುತ್ತದೆ. ಮಗುವಿಗೆ ಕೆಲವು ಆಯಸ್ಸಿನ ತನಕ ಎದೆಯ ಹಾಲಿನಿಂದ ಪೋಷಕಾಂಶಗಳು ಒದಗುತ್ತವೆ, ಆದರೆ ತದನಂತರ ಅವನು/ಅವಳಿಗೆ 12 ವರ್ಷಗಳವರೆಗೆ ಹಸು/ಎಮ್ಮೆ/ಮೇಕೆ ಹಾಲನ್ನು ಕುಡಿಸಿ ಬೆಳೆಸಲು ಸಲಹೆ ನೀಡಲಾಗುತ್ತದೆ. 
ವಿಶೇಷವಾಗಿ ಸಸ್ಯಹಾರದಲ್ಲಿ ಹಾಲು ಒಂದು ಸಮತೋಲಿತ ಆಹಾರವಾಗಿದೆ. ಸೂಕ್ತ ಪ್ರಮಾಣದಲ್ಲಿ ಪ್ರೋಟೀನ್, ಸಾಕಷ್ಟು ಕ್ಯಾಲ್ಸಿಯಂ ಮತ್ತು ರೈಬೋಫ್ಲೇವಿನ್ ಅಂಶವನ್ನು ಕೇವಲ ಸಸ್ಯಗಳಿಂದ ಪಡೆಯಲು ಸಾಧ್ಯವಿಲ್ಲ, ಇದಕ್ಕಾಗಿ ಹಾಲಿನಂತಹ ಸಸ್ಯಹಾರ ಅತ್ಯಗತ್ಯ. ರಾಷ್ಟ್ರೀಯ ಪೌಪ್ಟಿಕತೆ ಸಂಸ್ಥೆಯು 1-3 ವರ್ಷದೊಳಗಿನ ಮಕ್ಕಳಿಗೆ ದಿನನಿತ್ಯ ಕನಿಷ್ಠ 300 ಗ್ರಾಂ ನಷ್ಟು ಹಾಲು ಹಾಗೂ 10-12 ವರ್ಷದೊಳಗಿನ ಮಕ್ಕಳಿಗೆ ದಿನ ನಿತ್ಯ 250 ಗ್ರಾಂ ನಷ್ಟು ಹಾಲು ಸೇವಿಸುವುದು ಅಗತ್ಯ ಎಂದು ಘೋಷಿಸಿದೆ.  

 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

Phone

080-260 96800

Customer Care Number:

1800 425 8030 toll free 10.00AM - 5.30PM

(Except on Second Saturday,Fourth Saturday, Sunday & GOVT.Holidays)

Nandini Neravu Number(24*7):

080-66660000

Fax: 080-255 36105