1800 425 8030 toll free 10.00AM - 5.30PM
Except on Second Saturday,Sunday & GOVT.Holidays

ಕೆಎಂಎಫ್ ಕೇಂದ್ರ ಕಛೇರಿಗೆ ಭೇಟಿ ನೀಡಿದ ಆಂಧ್ರಪ್ರದೇಶದ ಸಚಿವೆ ಉಷಾಶ್ರೀ ಚರಣ

Date: 
17-Sep-2022
ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರದಂದು ಇಲ್ಲಿಯ ಕೆಎಮ್‍ಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.
ಕೆಎಮ್‍ಎಫ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ ಅವರು ಸಚಿವರನ್ನು ಸ್ವಾಗತಿಸಿದರು.
ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ವಾಯ್‍ಎಸ್‍ಆರ್ ಸಂಪೂರ್ಣ ಪೋಷಣ ಯೋಜನೆಯು ನವೆಂಬರ್-2016 ರಲ್ಲಿ 13 ಲಕ್ಷ ಲೀಟರ್ ಹಾಲಿನೊಂದಿಗೆ ಆರಂಭಗೊಂಡು ಹಂತ-ಹಂತವಾಗಿ 13 ಜಿಲ್ಲೆಗಳನ್ನು ಒಳಗೊಂಡ 55,600 ಅಂಗನವಾಡಿ ಕೇಂದ್ರಗಳಿಂದ 26 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು 1 ಕೋಟಿ ಲೀಟರ್ ಹಾಲನ್ನು ಕೆಎಮ್‍ಎಫ್‍ನಿಂದ ಪೂರೈಕೆ ಮಾಡಲಾಗುತ್ತಿದೆ. ಕೆಎಮ್‍ಎಫ್‍ನ ನಂದಿನಿ ಯುಎಚ್‍ಟಿ ಹಾಲನ್ನು ಆಂಧ್ರ ಪ್ರದೇಶಕ್ಕೆ ಸರಬುರಾಜು ಮಾಡಲಾಗುತ್ತಿದೆ.
ಕೆಎಮ್‍ಎಫ್ ಹಾಗೂ ಹಾಲು ಒಕ್ಕೂಟಗಳ ಕಾರ್ಯಚಟುವಟಿಕೆಗಳ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಮಹಾಮಂಡಳದ ಪ್ರಗತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಕೆಎಮ್‍ಎಫ್‍ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Address

Karnataka Co-operative Milk Producers’ Federation Ltd.
KMF Complex, P.B. No.2915, D.R.College Post, Dr.M.H.Marigowda Road, BANGALORE - 560 029. Karnataka.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105