1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಕರ್ನಾಟಕ ಸಹಕಾರ ಕ್ಷೇತ್ರದ ಹೈನೋದ್ಯಮದಲ್ಲಿ ಕರ್ನಾಟಕ ಹಾಲು ಮಹಾ ಮಂಡಳದ ಮೈಲಿಗಲ್ಲು

Date: 
25-ಮೇ -2022

ಕರ್ನಾಟಕ ಹಾಲು ಮಹಾ ಮಂಡಳ (ಕಹಾಮ) ೨೦೨೦ ನೇ ಸಾಲಿನಲ್ಲಿ ದಿನಾಂಕ: ೧೪/೦೭/೨೦೨೦ ರಂದು ೮೮.೩೦ ಲಕ್ಷ ಕೆ.ಜಿ. ಯಷ್ಟು ಗರಿಷ್ಟ ಪ್ರಮಾಣದ ಹಾಲನ್ನು ಶೇಖರಣೆ ಮಾಡಿ ಮೊದಲ ಮೈಲುಗಲ್ಲು ಸ್ಥಾಪಿಸಿರುತ್ತದೆ. 
ಕಹಾಮವು ಹಾಲು ಉತ್ಪಾದಕರಿಗೆ ಹಾಗು ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಎಲ್ಲಾ ೧೫ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಅನೇಕ ಸೌಲಭ್ಯಗಳಾದ ರಾಸುಗಳಿಗೆ ತುರ್ತು ಚಿಕಿತ್ಸೆ, ರಾಸುಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳ ವಿರುದ್ಧ ಲಸಿಕಾ ಕಾರ್ಯಕ್ರಮ, ಸಮತೋಲಿತ ಪಶು ಆಹಾರ ವಿತರಣೆ, ಕೊಟ್ಟಿಗೆಯ ನೆಲಹಾಸು ಬಳಕೆಗೆ ರಬ್ಬರ್ ಮ್ಯಾಟ್‌ಗಳ ವಿತರಣೆ, ಸಮರ್ಪಕ ಮೇವಿನ ಬಳಕೆಗಾಗಿ ಮೇವು ಕಟಾವು ಯಂತ್ರಗಳ ವಿತರಣೆ, ಶುದ್ಧ ಹಾಲು ಉತ್ಪಾದನೆ  ಮತ್ತು ಹೈನುರಾಸು ನಿರ್ವಹಣೆಗಾಗಿ ತರಬೇತಿ ಇತ್ಯಾದಿ ಕಾರ್ಯಕ್ರಮಗಳನ್ನು ಈ ಹಿಂದಿನಿAದಲೂ ಒದಗಿಸುತ್ತಾ ಬರುತ್ತಿದೆ.  ಈ ರೀತಿ ಸೌಲಭ್ಯಗಳ ಮೂಲಕ ಹಾಲುತ್ಪಾದನಾ ಹೆಚ್ಚಳಕ್ಕೆ ತನ್ನದೇ ಆದ ರೀತಿಯಲ್ಲಿ ಕಹಾಮ ಹೈನುಗಾರಿಕೆ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ.
೨೦೨೧ರಲ್ಲಿ ಕೋವಿಡ್ ಸಂಕಷ್ಟ ಇಡೀ ದೇಶವನ್ನೇ ಕಾಡುವ ಮೂಲಕ ಬಹುತೇಕ ಎಲ್ಲಾ ವಹಿವಾಟುಗಳು ಸ್ಥಗಿತಗೊಂಡಿದ್ದ ಅ ಸಂದರ್ಭದಲ್ಲಿಯೂ ಸಹಿತ ಕಹಾಮವು ಎಂದಿನAತೆ ಕಾರ್ಯವೈಖರಿಯನ್ನು ಮುಂದುವರೆಸಿತ್ತು ಜೊತೆಗೆ ದಿನಾಂಕ ೧೧/೦೬/೨೦೨೧ ರಂದು ೯೦.೬೨ ಲಕ್ಷಕೆ.ಜಿ.ಯಷ್ಟು ಗರಿಷ್ಟ ಪ್ರಮಾಣದ ಹಾಲನ್ನು ಶೇಖರಿಸಿ, ೨ ನೇ ಮೈಲಿಗಲ್ಲನ್ನು ಸ್ಥಾಪಿಸಲಾಗಿರುತ್ತದೆ.
ಹಾಲು ಉತ್ಪಾದನಾ ಹೆಚ್ಚಳಕ್ಕಾಗಿ ಕಹಾಮ ಹಾಲು ಉತ್ಪಾದಕರಿಗೆ ಒದಗಿಸುತ್ತಾ ಬಂದಿರುವ ಸೌಲಭ್ಯಗಳ ಪೈಕಿ ಅತಿ ಮುಖ್ಯವಾದ ಸೌಲಭ್ಯವೆಂದರೆ, ರಿಯಾಯಿತಿ ದರದಲ್ಲಿ ಸಮತೋಲಿತ ಪಶು ಆಹಾರದ ಪೂರೈಕೆ. ಗರಿಷ್ಟ ಪ್ರಮಾಣದಲ್ಲಿ ಸಮತೋಲಿತ ಪಶು ಆಹಾರವನ್ನು ಪೂರೈಕೆ ಮಾಡಲು ಕಹಾಮ ಕೈಗೊಂಡ ಕ್ರಮದಿಂದಾಗಿ ಇದೀಗ ದಿನಾಂಕ :೨೪/೦೫/೨೦೨೨ ರಂದು ೯೧.೦೭ ಲಕ್ಷಕೆ.ಜಿ. ಪ್ರಮಾಣದಷ್ಟು ಹಾಲನ್ನು ಶೇಖರಿಸಿ ೩ನೇ ಮೈಲಿಗಲ್ಲನ್ನು ಸ್ಥಾಪನೆ ಮಾಡಿರುತ್ತದೆ. ಕಹಾಮದ ಇತಿಹಾಸದಲ್ಲಿ ಇದುವರೆಗಿನ ಗರಿಷ್ಟ ಪ್ರಮಾಣದ ಹಾಲು ಶೇಖರಣೆ ಇದಾಗಿರುತ್ತದೆ.
ಸರಾಸರಿ ಲೆಕ್ಕಾಚಾರದಲ್ಲಿ ದಿನವಹಿ ೧೦೦ ಲಕ್ಷ ಕೆ.ಜಿ. ಪ್ರಮಾಣದಷ್ಟು ಹಾಲು ಶೇಖರಣೆ ಮಾಡುವಷ್ಟರ ಮಟ್ಟಿಗೆ ಹಾಲು ಉತ್ಪಾದನಾ ಹೆಚ್ಚಳದ ವೇಗವನ್ನು ವೃದ್ಧಿಸಿಕೊಳ್ಳಬೇಕೆಂಬುದು ಕಹಾಮದ ಗುರಿಯಾಗಿರುತ್ತದೆ.
ಗರಿಷ್ಟ ಪ್ರಮಾಣದ ಹಾಲು ಶೇಖರಣೆ ಮೂಲಕ ಇತಿಹಾಸ ನಿರ್ಮಿಸಿರುವ ಕಹಾಮ ಈ ಸಂದರ್ಭದಲ್ಲಿ ಹಾಲು ಉತ್ಪಾದಕರು, ಹಾಲು ಉತ್ಪಾದಕ ಸಹಕಾರ ಸಂಘಗಳು, ಜಿಲ್ಲಾ ಹಾಲು ಒಕ್ಕೂಟಗಳು, ಯೋಜನೆಗಳ ಮೂಲಕ ನೆರವು ನೀಡಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಅಧಿಕೃತ ಹಾಲು ವಿತರಕರು, ಸಗಟು ಹಾಲು ಮಾರಾಟಗಾರರು, ಫ್ರಾಂಚೈಸಿಗಳು, ವಾಹನಗಳ ಗುತ್ತಿಗೆದಾರರು, ಸಿಬ್ಬಂದಿ ವರ್ಗ, ವಿಶೇಷವಾಗಿ ನಮ್ಮ ಗ್ರಾಹಕರು ಜೊತೆಗೆ ಸುದ್ಧಿ ಮಾಧ್ಯಮದ ಮಿತ್ರರಿಗೆ ಹಾಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿರುವ ಪ್ರತಿಯೊಬ್ಬರಿಗೂ ಕಹಾಮವು ಈ ಸಂದರ್ಭದಲ್ಲಿ ಹೃತ್ಪೂವÀðಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತದೆ. 
ಅದುದರಿಂದ ಈ ಮಾಹಿತಿಯನ್ನು  ಸಾರ್ವಜನಿಕ ಗಮನಕ್ಕೆ ತರುವ ಸಲುವಾಗಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ರಾಜ್ಯದ ಸಮಸ್ತ ಹಾಲು ಉತ್ಪಾದಕರ ಪರವಾಗಿ ಕೋರಿದೆ.
 

 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105