1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಕಹಾಮ ಸಾಧನೆಗಳು

  • ರಾಜ್ಯದ ಬಹುತೇಕ ಪ್ರದೇಶಗಳನ್ನು ಹೈನುಗಾರಿಕೆ ಅಭಿವೃದ್ಧಿಯಡಿಯಲ್ಲಿ ತರಲಾಗಿದೆ.

  • ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಮತ್ತು ಮಹಾಮಂಡಳಿಯಲ್ಲಿ ಚುನಾಯಿತ ಮಂಡಳಿಗಳ ಕಾರ್ಯನಿರ್ವಹಣೆಯಾಗುತ್ತಿದೆ.

  • ಹಾಲು ಶೇಖರಣೆ ದರ ಮತ್ತು ಮಾರಾಟ ಬೆಲೆಗಳ ನಡುವೆ ಕಡಿಮೆ ಬೆಲೆ ಅಂತರದಿಂದಾಗಿ (Low price spread) ಗ್ರಾಹಕ ಮಾರಾಟ ಬೆಲೆಯ ಗರಿಷ್ಟ ಪಾಲು ಹಾಲು ಉತ್ಪಾದಕರಿಗೆ ತಲುಪುತ್ತಿರುವುದರಿಂದ, ಕಹಾಮ ಒಕ್ಕೂಟಗಳ ಹಾಲು ಖರೀದಿ ಬೆಲೆ ದೇಶದಲ್ಲಿಯೇ ಉತ್ತಮ ಪ್ರತಿಫಲದ ಬೆಲೆಯನಿಸಿಕೊಂಡಿದೆ.

  • 97% ಗೂ ಅಧಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಲಾಭದಲ್ಲಿವೆ.

  • ರಾಜ್ಯದಲ್ಲಿ ಮಹಾಮಂಡಳಿಯ ಹೈನು ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ಮಿಶ್ರತಳಿ ರಾಸುಗಳು (cross-breed) ರಾಜ್ಯಾದ್ಯಂತ ವ್ಯಾಪಕವಾಗಿವೆ.

     ಗ್ರಾಮೀಣಾಭಿವೃದ್ಧಿಗಾಗಿ ಉತ್ಪಾದಕರ ಸಭಲೀಕರಣ

  • ರಾಜ್ಯದ ಸಹಕಾರ ಹೈನೋದ್ಯಮ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಫಲಾನುಭವಿಗಳು ಗ್ರಾಮೀಣ  ಪ್ರದೇಶದ ಬಡವರ್ಗಕ್ಕೆ  ಸೇರಿದವರಾಗಿರುತ್ತಾರೆ.
    ಯೋಜನೆಯಡಿಯಲ್ಲಿರುವ ಒಟ್ಟು 24.36 ಲಕ್ಷ ಸದಸ್ಯರಲ್ಲಿ ಸುಮಾರು 4.34 ಲಕ್ಷ ಸಂಖ್ಯೆಯ ಭೂರಹಿತ ಕಾರ್ಮಿಕರು (20%) ಹಾಗೂ 9.01 ಲಕ್ಷ (40%) ಲಕ್ಷ ಸಣ್ಣ ರೈತರು, 7.11 ಲಕ್ಷ (32%) ಅತಿ ಸಣ್ಣ ರೈತ್ಯರು
    ಮತ್ತು ಇತರರು ​ 3.90 ಲಕ್ಷ (18%) ಒಳಗೊಂಡಿರುತ್ತಾರೆ. ಮೇಲಿನ ಒಟ್ಟು ಸದಸ್ಯರಲ್ಲಿ, 8.66 ಲಕ್ಷ ಸಂಖ್ಯೆಯ ಮಹಿಳಾ ಸದಸ್ಯರು (39%) ಮತ್ತು 3.94 ಲಕ್ಷ ಸಂಖ್ಯೆಯ (17%) ಪರಿಶಿಷ್ಟ ಜಾತಿ / ಪಂಗಡಕ್ಕೆ ಸೇರಿದ ರೈತರಿದ್ದಾರೆ.

  • ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ಉತ್ತೇಜಿತ ಖರೀದಿ ದರ ನೀಡುತ್ತಿರುವುದಲ್ಲದೇ ಕೃತಕ ಗರ್ಭಧಾರಣೆ, ಪ್ರಥಮ ಚಿಕಿತ್ಸೆ, ರಾಸುಗಳಿಗೆ ತುರ್ತು ಚಿಕಿತ್ಸೆ ಸೇವೆಯನ್ನು ನೀಡುತ್ತಿರುವುದಲ್ಲದೆ ಪೌಷ್ಟಿಕಾಂಶ ಭರಿತ ಪಶು ಆಹಾರ ಮತ್ತು ಖನಿಜ ಮಿಶ್ರಣಗಳನ್ನು ಹಾಲು ಉತ್ಪಾದಕರ ಬೇಡಿಕೆಗನುಗುಣವಾಗಿ ರೈತರ ಮನೆ ಬಾಗಿಲಿಗೆ ಒದಗಿಸಿರುತ್ತಾರೆ. ರಾಜ್ಯ ಸರ್ಕಾರವು ಕಹಾಮ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ರೂ.5.00 ಪ್ರೋತ್ಸಾಹಧನ ನೀಡುತ್ತಿದ್ದು, ಇದರಿಂದಾಗಿ ರೈತರು ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ಕೊಟ್ಟು ಆರ್ಥಿಕವಾಗಿ ಸಧೃಢವಾಗಿರಲು ಸಹಕಾರಿಯಾಗಿದ್ದು, ಗಣನೀಯ ಪ್ರಮಾಣದಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿರುತ್ತದೆ. 

  • ಕಳೆದ ನಾಲ್ಕು ದಶಕಗಳಿಂದ ರೂ.134.25(ನವೆಂಬರ್'17) ಕೋಟಿಗಳು ರೈತರಿಗೆ ಸಂದಾಯವಾಗಿದ್ದು ಹಳ್ಳಿಗಳ ಆರ್ಥಿಕ ಅಭ್ಯುದಯಕ್ಕೆ ಕಾರಣವಾಗಿದೆ. 

  • ಪ್ರಸ್ತುತದಲ್ಲಿ ಹಾಲು ಉತ್ಪಾದಕರಿಗೆ ದಿನವೊಂದಕ್ಕೆ ಸರಾಸರಿ ರೂ.19 ಕೋಟಿಗಳ ಹಣ ಸಂದಾಯವಾಗುತ್ತಿದೆ.

  • ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದಕರನ್ನು 'ಯಶಸ್ವಿನಿ' ವಿಮಾ ಯೋಜನೆಯಡಿಯಲ್ಲಿ ನೋಂದಾಯಿಸುವುದರ ಮೂಲಕ ಹಾಲು ಉತ್ಪಾದಕರ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಮಹಾಮಂಡಳಿಯು ಕ್ರಿಯಾತ್ಮಕವಾಗಿ ಸಹಕಾರಿಯಾಗಿದೆ.

ಕರ್ನಾಟಕ ಹಾಲು ಮಹಾಮಂಡಳಿಯ ಬಹುಪಾಲು ಉತ್ಪಾದಕ ಸದಸ್ಯರು ಭೂರಹಿತ ಕಾರ್ಮಿಕರು, ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು, ಶೋಷಿತ ಹಾಗೂ ಹಿಂದುಳಿದ ಬಡವರ್ಗದವರಾಗಿರುವುದರಿಂದ, ಇವರ ಸಂಕಷ್ಟಗಳನ್ನು ಪರಿಹರಿಸುವಲ್ಲಿ ಜೀವನಾಧಾರವಾಗುವಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಾದ –
1. ರೂ.5/- ಪ್ರೋತ್ಸಾಹಧನ (ಪ್ರತೀ ಲೀಟರ್ ಹಾಲಿಗೆ)
2. ಸಂಘಗಳ ಸಿಬ್ಬಂದಿಗೆ 20 ಪೈಸೆ ಪ್ರೋತ್ಸಾಹಧನ
3. ರಾಷ್ಟ್ರೀಯ ವಿಮಾ ಯೋಜನೆ
4. ಶುದ್ಧ ಹಾಲು ಉತ್ಪಾದನೆ
5. RKVY
6. NPDD ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಸಹಕಾರಿ ಕ್ಷೀರೋಧ್ಯಮದಲ್ಲಿ ರೈತರಿಗೆ ತನ್ನದೇ ಆದ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.

  • ಕರ್ನಾಟಕ ಹಾಲು ಮಹಾಮಂಡಳಿಯು ಕೇಂದ್ರ ಸರ್ಕಾರದ ಯೋಜನೆಗಳಾದ ಶುದ್ಧ ಹಾಲು ಉತ್ಪಾದನೆ ಯೋಜನೆ, ಆಧ್ಯ ಜಿಲ್ಲೆಗಳಲ್ಲಿ ರೂಪಿಸಲಾದ ವಿಶೇಷ ಪ್ಯಾಕೇಜ್, ಮೇವು ಅಭಿವೃದ್ಧಿ, RKVY, ಗುಲ್ಬರ್ಗಾ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ National Programme for Dairy Development(NPDD) ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.
  • ತರಬೇತಿ ಕೇಂದ್ರಗಳ ಬಲವರ್ಧನೆ – ಕರ್ನಾಟಕ ಹಾಲು ಮಹಾಮಂಡಳಿಯು ಹಳ್ಳಿಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ದಕ್ಷ ನಿರ್ವಹಣೆಯಿಂದ ಲಾಭದಾಯಕವಾಗಿ ಕಾರ್ಯನಿರ್ವಹಿಸಲು ಹಾಗೂ ಉತ್ಪಾದಕ ಸದಸ್ಯರು ಸಂಘಗಳ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವಂತೆ ಮಾಡಲು ಶ್ರಮವಹಿಸುತ್ತಿದೆ. ಇದಕ್ಕಾಗಿ ಸದಸ್ಯರ ನಿರ್ವಹಣಾ ಸಾಮರ್ಥ್ಯಗಳ ಅಭಿವೃದ್ಧಿಗಾಗಿ ಅವಶ್ಯಕವಾಗಿರುವ ತರಬೇತಿ ಕೇಂದ್ರಗಳ ಸೌಲಭ್ಯಗಳ ಬಲವರ್ಧನೆ ಮಾಡುತ್ತಿದ್ದು, ಈ ಕೇಂದ್ರಗಳಲ್ಲಿ ಹೈನುರಾಸುಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ, ಕೃತಕ ಗರ್ಭಧಾರಣೆ, ಶುದ್ಧ ಹಾಲು ಉತ್ಪಾದನೆ ಹಾಗೂ ಇತರೆ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

       ಉತ್ಪಾದಕರಿಗೆ ತಾಂತ್ರಿಕ ಪರಿಕರ ಸೇವೆಗಳು:

  • ಪಶು ಆಹಾರ ಉತ್ಪಾದನೆ ಮತ್ತು ಮಾರಾಟ - ಹಾಲು ಉತ್ಪಾದನೆಯ ವೃದ್ಧಿಗೆ ಸಮತೋಲನ ಪಶುಆಹಾರ ಉತ್ಪಾದಿಸಿ, ಸ್ಪರ್ಧಾತ್ಮಕ ದರಗಳಲ್ಲಿ ಉತ್ಪಾದಕರಿಗೆ ಸರಬರಾಜು ಮಾಡುವುದು ಪ್ರಮುಖವಾಗಿದೆ.  

  • ಕಹಾಮದ ದಕ್ಷ ನಿರ್ವಹಣೆಯಿಂದಾಗಿ ಪಶುಆಹಾರ ಘಟಕಗಳಲ್ಲಿ ಉತ್ಪಾದಕತೆಯು ಗರಿಷ್ಠ ಮಟ್ಟ ಮೀರಿದ್ದು, ನಿರಂತರವಾಗಿ ಹೆಚ್ಚುತ್ತಿರುವ ಪಶುಆಹಾರ ಬೇಡಿಕೆಯನ್ನು ಪೂರೈಸಲು ಸಹಕಾರಿಯಾಗಿದೆ. ಗುಣಮಟ್ಟದ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಕಹಾಮದ ಐದು ಪಶುಆಹಾರ ಘಟಕಗಳಿಗೆ ISO – 9001:2008 ದೃಢೀಕರಣ ಪ್ರಮಾಣ ಪತ್ರ ಲಭಿಸಿದೆ ಹಾಗೂ ISO – 9001:2015 ದೃಢೀಕರಣ ಪ್ರಮಾಣ ಪತ್ರವನ್ನು ಪಡೆಯುವ ಪ್ರಕ್ರಿಯೆಯಲ್ಲಿವೆ.

  • ರಾಷ್ಟ್ರೀಯ ಪಶು ಆಹಾರ ಹಾಗೂ ಜೈವಿಕ ವಿಜ್ಞಾನ ಸಂಸ್ಥೆ, ಬೆಂಗಳೂರು ಅವರ ಸಹಯೋಗದೊಂದಿಗೆ ಪ್ರದೇಶಕ್ಕನುಗುಣವಾದ ಖನಿಜ ಮಿಶ್ರಣವನ್ನು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಪ್ರಾರಂಭಿಸಲಾಯಿತು. ಈಗ ಇದು ದೇಶಾದ್ಯಂತ ಜನಪ್ರಿಯವಾಗಿ, ಹೈನು ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಿದೆ.

  • ಗುಬ್ಬಿ, ಧಾರವಾಡ ಮತ್ತು ಹಾಸನ ಪಶು ಆಹಾರ ಘಟಕಗಳಲ್ಲಿ ಖನಿಜ ಮಿಶ್ರಣ ತಯಾರಿಕಾ ಘಟಕಗಳನ್ನು ಪ್ರಾರಂಭಿಸಲಾಗಿದೆ.

        ಮೇವು ಸಾಂದ್ರೀಕರಣ ಘಟಕ :-

  • ಗುಬ್ಬಿ ಹಾಗೂ ಧಾರವಾಡ ಪಶುಆಹಾರ ಘಟಕಗಳಲ್ಲಿ ಕ್ರಮವಾಗಿ 2500 ಮೆಟ್ರಿಕ್ ಟನ್‍ಗಳ ಮತ್ತು 5000 ಮೆಟ್ರಿಕ್ ಟನ್‍ಗಳ ಸಾಮರ್ಥ್ಯದ ಪಶುಆಹಾರ ಕಚ್ಚಾ ಪದಾರ್ಥಗಳ ಗೋದಾಮುಗಳನ್ನು ನಿರ್ಮಿಸಲಾಗಿದೆ.

  • ಹೈನುರಾಸುಗಳಲ್ಲಿ ಹಾಲಿನ ಉತ್ಪಾದಕತೆ ಹೆಚ್ಚಿಸಲು ಕೃತಕ ಗರ್ಭಧಾರಣೆ  ಕಾರ್ಯಗಳ ಕಾರ್ಯವ್ಯಾಪ್ತಿ ಹೆಚ್ಚಳ, ಉತ್ತಮ ಗುಣಮಟ್ಟದ ವೀರ್ಯನಳಿಕೆಗಳ ಉತ್ಪಾದನೆಗಾಗಿ ಜೈವಿಕ ಭದ್ರತೆ, ರೋಗಮುಕ್ತ ಪ್ರದೇಶಗಳ ಸ್ಥಾಪನೆಕಾರ್ಯ, ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ.

  • ರಾಜ್ಯದಲ್ಲಿ ಕೃತಕ ಗರ್ಭಧಾರಣಾ ಕಾರ್ಯಕ್ರಮಗಳು ಯಶಸ್ವಿಯಾಗಲು ಕಹಾಮದ ನಂದಿನಿ ವೀರ್ಯಾಣು ಕೇಂದ್ರದಲ್ಲಿ ಉತ್ಪಾದನೆಯಾಗುತ್ತಿರುವ ಉತ್ಕೃಷ್ಟ ಗುಣಮಟ್ಟದ ವೀರ್ಯನಳಿಕೆಗಳು ಪ್ರಮುಖ ಕಾರಣವಾಗಿದೆ. ಗುಣಮಟ್ಟದ ವೀರ್ಯನಳಿಕೆಗಳ ಉತ್ಪಾದನೆಗಾಗಿ ನಂದಿನಿ ವೀರ್ಯಾಣು ಕೇಂದ್ರಕ್ಕೆ ISO – 9001:2008 ಪ್ರಮಾಣ ಪತ್ರ ಲಭಿಸಿದ್ದು, ಭಾರತ ಸರ್ಕಾರದ ಕೃಷಿ ಸಚಿವಾಲಯವು 2005-06ರಲ್ಲಿ ರಾಷ್ಟ್ರದ ಎರಡನೇ ಅತ್ಯುತ್ತಮ ಎ ಗ್ರೇಡ್ ವೀರ್ಯಾಣು ಕೇಂದ್ರವೆಂದು ಗುರುತಿಸಿ ಪ್ರಶಸ್ತಿ ನೀಡಿದೆ.

  • ಪಶು ಆಹಾರ ಗುಣಮಟ್ಟದಲ್ಲಿ ಮುಖ್ಯವಾಗಿ ಶಕ್ತಿ ಮತ್ತು ಪೌಷ್ಠಿಕತೆಯನ್ನು ಹೆಚ್ಚಿಸಲು ಮೆಕ್ಕೆಜೋಳದ ಹಾಲಿ ಪ್ರಮಾಣವನ್ನು ದ್ವಿಗುಣಗೊಳಿಸಿ ಪಶು ಆಹಾರವನ್ನು ತಯಾರಿಸಲಾಗುತ್ತಿದ್ದು ಇದರಿಂದ ಪಶು ಆಹಾರದಲ್ಲಿ ಶಕ್ತಿ, ಹೆಚ್ಚಿನ ಜಿಡ್ಡಿನಾಂಶ ಹಾಗೂ ಪಚನವಾಗುವ ಪೌಷ್ಠಿಕಾಂಶಗಳು ಹೆಚ್ಚಿಗೆ ಲಭ್ಯವಿರುವ ಕಾರಣ ರಾಸುಗಳು ಆರೋಗ್ಯವಾಗಿರಲು ಹಾಗೂ ಗುಣಮಟ್ಟದ ಹಾಲನ್ನು ಉತ್ಪಾದಿಸಲು ನಂದಿನಿ ಗೋಲ್ಡ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

        ಉತ್ತಮ ಗುಣಮಟ್ಟ ಹಾಗೂ ಕನಿಷ್ಠ ಸಾಧ್ಯ ವೆಚ್ಚಗಳಿಗಾಗಿ ಸಂಸ್ಕರಣಾ ಉತ್ಕೃಷ್ಟತೆ :-

  • ಧಾರವಾಡ, ಬೆಳಗಾವಿ, ಚಾಮರಾಜನಗರ ಒಕ್ಕೂಟಗಳು ಹಾಗು ಬಳ್ಳಾರಿ  ಐಸ್ ಕ್ರೀಂ ಘಟಕ ಹೊರತು ಪಡಿಸಿ,  ಎಲ್ಲಾ ಹಾಲು ಒಕ್ಕೂಟಗಳು ಹಾಗು ನಂದಿನಿ ಹಾಲು ಉತ್ಪನ್ನ ಘಟಕ,  ISO – 22000:2005 ದೃಢೀಕರಣ ಪ್ರಮಾಣ ಪತ್ರವನ್ನು ಪಡೆದಿರುತ್ತವೆ.    

  • ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕಾಗಿ ಬೆಂಗಳೂರಿನ ಮದರ್ ಡೇರಿಗೆ ಭಾರತ ಸರ್ಕಾರದ ರಫ್ತು ಪರವಾನಗಿ ದೊರೆತಿದೆ.

  • ಉತ್ಪಾದಕ ಸದಸ್ಯರಿಗೆ ಗ್ರಾಹಕ ಬೆಲೆಯ ಗರಿಷ್ಟ ಪಾಲನ್ನು ನೀಡಲು ಸಂಸ್ಕರಣಾ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕಹಾಮ ಒಕ್ಕೂಟ/ ಘಟಕಗಳಲ್ಲಿ ಶಕ್ತಿ ಸಂರಕ್ಷಣೆ ಕಾರ್ಯಕ್ರಮವನ್ನು NDDB ಮತ್ತು IRMA ಅವರ ಸಹಯೋಗದೊಂದಿಗೆ ವಿವಿಧ ಹಂತಗಳಲ್ಲಿ ಅಳವಡಿಸಿದ್ದರಿಂದ ಗಮನಾರ್ಹ ಉಳಿತಾಯವಾಗುತ್ತಿದೆ. ಈ ಸಾಧನೆಯನ್ನು ಗಮನಿಸಿ ಭಾರತ ಹಾಗು ರಾಜ್ಯ ಸರ್ಕಾರದಿಂದ ಹೈನೋದ್ಯಮದಲ್ಲಿ ಇಂಧನ ಉಳಿತಾಯ ಪ್ರಶಸ್ತಿಗಳು ಲಭಿಸಿವೆ.

  • ಕಹಾಮ ಒಕ್ಕೂಟಗಳು ಹಾಗೂ ಘಟಕಗಳು ಭಾರತ ಸರ್ಕಾರದ ಉತ್ಪಾದಕತಾ ಪ್ರಶಸ್ತಿಗಳಿಂದ ಕೂಡ ಹಲವಾರು ಬಾರಿ ಪುರಸ್ಕೃತಗೊಂಡಿವೆ.

  • “ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟ ಉತ್ಕೃಷ್ಟತೆ” ಕಾರ್ಯಕ್ರಮದ ಅಡಿಯಲ್ಲಿ ಹಾಲು ಶೇಖರಣೆ, ಹಾಲು ಸಂಸ್ಕರಣೆ ಮತ್ತು ಹಾಲು ಮಾರಾಟದ ವಿವಿಧ ಹಂತಗಳಲ್ಲಿ ಉತ್ಕೃಷ್ಟ ಗುಣಮಟ್ಟದ ವಿಧಿವಿಧಾನಗಳನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಕಹಾಮದ ಒಕ್ಕೂಟಗಳಲ್ಲಿ 1020 ಬಲ್ಕ್ ಮಿಲ್ಕ್ ಕೂಲರ್‍ಗಳು, 5711 ಸ್ವಯಂಚಾಲಿತ ಗಣಕೀಕೃತ ಹಾಲು ಶೇಖರಣಾ ಯಂತ್ರಗಳು ಮತ್ತು 92 ಸಮೂಹ ಹಾಲು ಕರೆಯುವ ಪಾರ್ಲರ್‍ಗಳು  ಕಾರ್ಯನಿರ್ವಹಿಸುತ್ತಿವೆ.

  • ಮಹಾಮಂಡಳಿಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಾಲು ಶೇಖರಣೆಯ ಪ್ರಮಾಣವನ್ನು ಸಮರ್ಥವಾಗಿ ಸಂಸ್ಕರಿಸಲು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅವಶ್ಯಕವಾದ ಸಂಸ್ಕರಣಾ ಸೌಲಭ್ಯಗಳನ್ನು ದೂರದೃಷ್ಟಿಯಿಂದ ಸಕಾಲದಲ್ಲಿ ಯೋಜಿಸಿ ಕಾಲಕಾಲಕ್ಕೆ ಅಳವಡಿಸುತ್ತಾ ಬಂದಿದೆ.

  • ಬೆಂಗಳೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ದಿನವಹಿ 6 ಲಕ್ಷ ಸಾಮರ್ಥ್ಯವುಳ್ಳ ಸ್ವಯಂಚಾಲಿತ ಗಣಕೀಕೃತ ಮೆಗಾ ಡೇರಿಯನ್ನು ಸ್ಥಾಪಿಸಿದ್ದು, ಈಗ ದಿನವಹಿ 10 ಲಕ್ಷ ಸಾಮರ್ಥ್ಯಕ್ಕೆ ವಿಸ್ತರಿಸಲಾಗಿದೆ.

  • ಬೆಂಗಳೂರಿನ ಮದರ್ ಡೇರಿಯನ್ನು ದಿನವಹಿ 4 ಲಕ್ಷ ಲೀಟರ್‍ಗಳ ಸಾಮರ್ಥ್ಯದಿಂದ ರೂ.35 ಕೋಟಿಗಳ ವೆಚ್ಚದಲ್ಲಿ 7 ಲಕ್ಷ ಲೀಟರ್‍ಗಳಿಗೆ ವಿಸ್ತರಿಸಲಾಗಿದೆ. ಈ ಡೇರಿಯ ಆವರಣದಲ್ಲಿ ದಿನವಹಿ 30 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲು ಪುಡಿ ಘಟಕವನ್ನು ಹಾಗೂ 1 ಲಕ್ಷ ಲೀಟರ್ ಸಾಮರ್ಥ್ಯದ ಯುಹೆಚ್‍ಟಿ ಹಾಲಿನ ಘಟಕವನ್ನು ಸ್ಥಾಪಿಸಲಾಗಿದೆ.

  • ಚನ್ನರಾಯಪಟ್ಟಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೈ-ಟೆಕ್ ಉತ್ಪನ್ನ ಘಟಕ ಹಾಗೂ ದಿನವಹಿ 1 ಲಕ್ಷ ಲೀಟರ್ ಸಾಮರ್ಥ್ಯದ ಯುಹೆಚ್‍ಟಿ ಹಾಲಿನ ಘಟಕ ಸ್ಥಾಪಿಸಲಾಗಿದ್ದು, ಜೊತೆಗೆ ದಿನವಹಿ 60 ಮೆಟ್ರಿಕ್ ಟನ್ ಸಾಮರ್ಥ್ಯದ ಇನ್ನೊಂದು ಹೆಚ್ಚುವರಿ ಹಾಲು ಪುಡಿ ಘಟಕವನ್ನು ಸ್ಥಾಪಿಸಲಾಗಿದೆ.

  • ಬೆಂಗಳೂರಿನ ಮದರ್ ಡೇರಿಯಲ್ಲಿರುವ ಐಸ್‍ಕ್ರೀಂ ಘಟಕದ ಸಾಮರ್ಥ್ಯವನ್ನು ದಿನವಹಿ 3000 ಲೀಟರ್‍ಗಳಿಂದ 10,000 ಲೀಟರ್‍ಗಳಿಗೆ ವಿಸ್ತರಿಸಲಾಗಿದೆ. ಉತ್ತರ ಕರ್ನಾಟಕದ ಬೇಡಿಕೆಯನ್ನು ಪೂರೈಸಲು ಬಳ್ಳಾರಿಯಲ್ಲಿ ರೂ. 10 ಕೋಟಿಗಳ ವೆಚ್ಚದಲ್ಲಿ ದಿನವಹಿ 10,000 ಲೀಟರ್‍ಗಳ ಸಾಮರ್ಥ್ಯದ ನೂತನ ಐಸ್‍ಕ್ರೀಂ ಘಟಕ ಸ್ಥಾಪಿಸಲಾಗಿದೆ.

  • ಹೊಸ ಫ್ಲೆಕ್ಸಿ ಪ್ಯಾಕ್ ಘಟಕ ದಕ್ಷಿಣ ಕನ್ನಡ ಹಾಗು ತುಮಕೂರು ಹಾಲು ಒಕ್ಕೂಟದಲ್ಲಿ ಸ್ಥಾಪಿಸಿ ಕಾರ್ಯಾಚರಣೆಯಲ್ಲಿವೆ. ಇದರ ಜೊತೆಗೆ, ಬೆಳಗಾವಿ ಹೊಸ ಫ್ಲೆಕ್ಸಿ ಪ್ಯಾಕ್ ಘಟಕ ಪ್ರಗತಿಪರ ಹಂತದಲ್ಲಿದೆ.

    ರೈತರು ಉತ್ಪಾದಿಸಿದ  ಹಾಲಿನ ಲಾಭದಾಯಕ ವಿಲೇವಾರಿ :-

  • ಮಹಾಮಂಡಳಿಯು ಸ್ಯಾಚೆಟ್  ಹಾಲು ಮಾರಾಟ ಅಭಿವೃದ್ಧಿಗಾಗಿ ಅವಿರತ ಶ್ರಮಪಡುತ್ತಿದ್ದು, ಇಂದು ಸಹಕಾರಿ ರಂಗದಲ್ಲಿಯೇ ಅತಿ ಹೆಚ್ಚೆಂಬ ಹೆಗ್ಗಳಿಕೆ ರಾಜ್ಯಾದ್ಯಂತ ಪಟ್ಟಣ ಪ್ರದೇಶಗಳಲ್ಲಿ ಗಳಿಸಿದೆ.

  • ಮಹಾಮಂಡಳಿಯು ದೇಶದಲ್ಲಿಯೇ ಅಮುಲ್ ಸೇರಿದಂತೆ ಇನ್ನಿತರ ಯಾವುದೇ ಸಂಸ್ಥೆಯ ಮಾರಾಟಕ್ಕಿಂತ ಅತಿ ಹೆಚ್ಚು ಪ್ರಮಾಣದ ಮೊಸರು ಮಾರಾಟ ಮಾಡುತ್ತಿದೆ.

  • ನಗರೀಕರಣ ಹಾಗೂ ಜನರ ಹವ್ಯಾಸಗಳು ಬದಲಾದಂತೆ ಮೌಲ್ಯವರ್ಧಿತ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಪ್ರವೃತ್ತಿಗಳನ್ನು ಗಮನಿಸಿ, ಮಹಾಮಂಡಳಿಯು ವಿಸ್ತೃತ ಶ್ರೇಣಿಯ ವೈವಿಧ್ಯಮಯ ಉತ್ಪನ್ನಗಳಾದ ವಿವಿಧ ಸ್ವಾದಗಳಲ್ಲಿ ಯೋಗಾರ್ಟ್, ಚೆಡ್ಡಾರ್ ಚೀಸ್, ಪ್ರೋಸೆಸ್ಡ್ ಚೀಸ್, ಚಾಕೋಲೇಟ್‍ಗಳು, ಬಹುದಿನದ ಬಾಳಿಕೆ ಬರುವ ರೆಟಾರ್ಟ್ ಪ್ಯಾಕ್‍ಗಳಲ್ಲಿ ಕುಂದಾ ಮುಂತಾದವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ನಂದಿನಿ ಬ್ರಾಂಡ್ ಅಡಿಯಲ್ಲಿ ಎಲ್ಲ ವರ್ಗದ ಗ್ರಾಹಕರ ಅಭಿರುಚಿಗೆ ತಕ್ಕಂತೆ 66 ಕ್ಕೂ ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು 246 SKU (Stock Keeping Unit – SKU) ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

  • ಟೆಟ್ರಾ ಫಿನೋ ಯುಹೆಚ್‍ಟಿ ಹಾಲು ಮಾರಾಟದಲ್ಲಿ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಎಲ್ಲ ವರ್ಗದ ಜನರಿಗೆ ಯುಹೆಚ್‍ಟಿ ಹಾಲು ಕೈಗೆಟುಕುವಂತಾಗಲು, ದೇಶದಲ್ಲಿಯೇ ಮೊಟ್ಟಮೊದಲ ಭಾರಿಗೆ 100ಮಿ.ಲಿ. ಟೆಟ್ರಾ ಫಿನೋ ಯುಹೆಚ್‍ಟಿ ಹಾಲು ಬಿಡುಗಡೆ ಮಾಡಲಾಗಿದೆ.

  • ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಅನೇಕ ಮಾರಾಟ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳಲ್ಲಿ ಪ್ರಮುಖವಾದವುಗಳು – ರಾಜ್ಯಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ನೂತನ ಡಿಪೋಗಳ ಪ್ರಾರಂಭ, ಆಕರ್ಷಕವಾಗಿ ವಿನ್ಯಾಸಗೊಳಿಸಿದ ನೂತನ ಪ್ಯಾಕ್‍ಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳು, ಹೆಚ್ಚಿನ ಮೌಲ್ಯವರ್ಧಿತ ಉತ್ಪನ್ನಗಳ ಬಿಡುಗಡೆ ಮುಂತಾದವುಗಳು. 

  • ತಿರುಮಲ ತಿರುಪತಿ ದೇವಸ್ಥಾನಕ್ಕೆ 2001 ರಿಂದ ಆಗಸ್ಟ್ 2015ರ ಅವಧಿಯಲ್ಲಿ 17,680 ಮೆಟ್ರಿಕ್ ಟನ್ ತುಪ್ಪ ಸರಬರಾಜು ಮಾಡಲಾಗಿದೆ.

  • ಹಾಲು ಮಹಾ ಮಂಡಳಿಯು ಕೆನೆರಹಿತ ಹಾಲಿನ ಪುಡಿ, ಬೆಣ್ಣೆ ಹಾಗೂ ಸಿಹಿ ಉತ್ಪನ್ನಗಳನ್ನು ನೇಪಾಳ, ಬಾಂಗ್ಲಾದೇಶ, ಓಮೆನ್, ಮಡಗಾಸ್ಕರ್, ಬರ್ಮಾ, ಸಿಂಗಪುರ್, ಥೈಲ್ಯಾಂಡ್ ಹಾಗೂ ಫಿಲಿಫೈನ್ಸ್ ದೇಶಗಳಿಗೆ ರಫ್ತು ಮಾಡಲಾಗಿದೆ.

  • ನಂದಿನಿ ಕೆನೆರಹಿತ ಹಾಲಿನ ಪುಡಿಯನ್ನು ರಾಜ್ಯ ಸರ್ಕಾರದ ಪೌಷ್ಟಿಕ ಕಾರ್ಯಕ್ರಮದಡಿಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುತ್ತಿದೆ.

  • ಕರ್ನಾಟಕ ರಾಜ್ಯ ಸರ್ಕಾರವು    “ ಕ್ಷೀರ ಭಾಗ್ಯ ” ಎಂಬ ದೇಶದಲ್ಲಿಯೇ ವಿನೂತನವಾಗಿ ಪರಿಕಲ್ಪಿಸಿಕೊಂಡ ಒಂದು ಅಪೂರ್ವ ಮಹತ್ತರ ಯೋಜನೆಗೆ 1 ನೇ ಯ ಆಗಸ್ಟ್ 2013 ರಿಂದ ಚಾಲನೆ ನೀಡಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 64 ಲಕ್ಷ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿಗಳಲ್ಲಿರುವ 40 ಲಕ್ಷ ಮಕ್ಕಳಿಗೆ  ಉಚಿತವಾಗಿ ವಾರದಲ್ಲಿ ಐದು ದಿನ, ತಲಾ 150ಮಿ.ಲಿ. ಹಾಲನ್ನು ವಿತರಿಸಲಾಗುತ್ತಿದೆ.

  • ಈ ಕಾರ್ಯಕ್ರಮದಡಿಯಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚಿನ ಶಾಲಾ ಮಕ್ಕಳಿಗೆ ಕೆ ಎಂ ಎಫ್ ಒಳ್ಳೆಯ ಗುಣಮಟ್ಟದ ಹಾಗೂ ಪೌಷ್ಟಿಕವಾದ ನಂದಿನಿ ಹಾಲಿನಪುಡಿಯನ್ನು ವಿತರಿಸುತ್ತಿದ್ದು ಇದರಿಂದ ರಾಜ್ಯದ ಮಕ್ಕಳ ಆರೋಗ್ಯಾಭಿವೃದ್ಧಿಯಾಗುವುದಲ್ಲದೆ ಕೆಎಂಎಫ್ ನ 14 ಹಾಲು ಒಕ್ಕೂಟಗಳ ಮೂಲಕ ಸುಮಾರು ದಿನವಹಿ ಸರಾಸರಿ 8 ಲಕ್ಷ ಲೀಟರ್‍ಗಳ ಹೆಚ್ಚುವರಿ ಹಾಲಿನ ವಿಲೇವಾರಿಯಾಗುತ್ತಿದ್ದು ರೈತರಿಗೆ ಸಹಾಯವಾಗಿದೆ. 

  • ದೇಶದ ರಕ್ಷಣಾ ಇಲಾಖೆಯ ಗಡಿ ರಕ್ಷಣೆಯಲ್ಲಿರುವ ಯೋಧರಿಗೆ ಟೆಟ್ರಾಪ್ಯಾಕ್ ಹಾಲು ಸರಬರಾಜು ಮಾಡಲಾಗುತ್ತಿದೆ. 

  • ಕರ್ನಾಟಕದ ಅತಿ ಹೆಚ್ಚು ಮೌಲ್ಯವರ್ಧಿತ ಬ್ರಾಂಡ್ ಎಂಬ ಹೆಗ್ಗಳಿಕೆಯನ್ನು ನಂದಿನಿ ಬ್ರಾಂಡ್ ಗಳಿಸಿದೆ.

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105