ಹಾಲಿನ ಇತಿಹಾಸ

ಹಾಲು - ಹುಟ್ಟು, ವಿಕಾಸ, ಬೆಳವಣಿಗೆಯ ಹಾದಿ

ಹಾಲಿನ ಪ್ರಾಚೀನತೆಯು ಹಾಗೂ ಇತಿಹಾಸವು ಮಾನವನ ವಿಕಾಸ , ನಾಗರಿಕತೆ ಮತ್ತು ಪ್ರಾಣಿಗಳನ್ನು ಪಳಗಿಸಿ ಸಾಕಾಣಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಆದಿ ಮಾನವರು ಅಲೆಮಾರಿ ಜೀವನಶೈಲಿಯಿಂದ ಸ್ಥಿರ ನೆಲೆಸಿದ ಕೃಷಿ ಸಮುದಾಯಗಳಿಗೆ ಪರಿವರ್ತನೆಯಾದಾಗ, ಕೆಲವು ಪ್ರಾಣಿಗಳು ಹಾಲಿನ ಸ್ಥಿರ ಪೂರೈಕೆಯನ್ನು ಒದಗಿಸಬಹುದು ಎಂಬ ಅರಿವು ಪ್ರಮುಖವಾದುದು.

ಕ್ಷೀರ ಪಿತಾಮಹ - ಡಾ. ವರ್ಗೀಸ್ ಕುರಿಯನ್

ವರ್ಗೀಸ್ ಕುರಿಯನ್ (26 ನವೆಂಬರ್ 1921 - 9 ಸೆಪ್ಟೆಂಬರ್ 2012) ಒಬ್ಬ ಭಾರತೀಯ ಡೈರಿ ಎಂಜಿನಿಯರ್ ಮತ್ತು ಸಾಮಾಜಿಕ ಉದ್ಯಮಿಯಾಗಿದ್ದು, ಭಾರತೀಯ ಶ್ವೇತ ಕ್ರಾಂತಿಯ ಪಿತಾಮಹನೆಂದು ಕರೆಯಲ್ಪಡುವ ಕುರಿಯನ್ ರವರು ಭಾರತದಲ್ಲಿ ಅತಿ ಹೆಚ್ಚು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಹಲವಾರು ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಂಡರು. 1949 ರಲ್ಲಿ ಭಾರತ ಸರ್ಕಾರವು ಗುಜುರಾತಿನ ಆನಂದನಲ್ಲಿ ಪ್ರಾಯೋಗಿಕವಾಗಿ ಹಾಲು ಡೇರಿಯೊಂದನ್ನು ವರ್ಗೀಸ್ ಕುರಿಯನ್ ರವರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಮುಂದುವರೆದು, ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾದ ಹಾಲು ಡೇರಿಯೊಂದನ್ನು ಕುರಿಯನ್ ರವರ ಮಾರ್ಗದರ್ಶನದಂತೆ 1950 ರಲ್ಲಿ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವಾಗಿ ಸ್ಥಾಪಿತವಾಯಿತು. ಇದೇ ಮುಂದೆ “ಅಮುಲ್” ಆಗಿ ಮಾರ್ಪಟ್ಟಿತು. ಅಮುಲ್ ಸಹಕಾರಿ ತತ್ವದಡಿಯಲ್ಲಿ ಹಳ್ಳಿಗಳಲ್ಲಿ ಹೈನುಗಾರರು ಮತ್ತು ಗ್ರಾಹಕರ ನಡುವೆ ಸಂಪರ್ಕವನ್ನು ಏರ್ಪಡಿಸಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆ, ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಸಹಕಾರಿ ಸಂಘದ ಮಾಲೀಕರಾಗಿ ನಿಯಂತ್ರಿಸುವ ಹಾಲು ಉತ್ಪಾದಕ ರೈತರಿಗೆ ಗ್ರಾಹಕರು ನಗದು ರೂಪದಲ್ಲಿ ಪಾವತಿಸಿದ್ದರಿಂದ ಡೇರಿ ಸಹಕಾರಿಯು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. 1964 ರಲ್ಲಿ ಕುರಿಯನ್ ರವರು ಅಂದಿನ ಪ್ರಧಾನಮಂತ್ರಿಗಳಾದ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು ಕೈರಾದ ಆನಂದಗೆ ಭೇಟಿ

ಕರ್ನಾಟಕ ಕ್ಷೀರ ಬ್ರಹ್ಮ - ಶ್ರೀ. ಎಂ.ವಿ. ಕೃಷ್ಣಪ್ಪ

ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಇವರು ಮೂಲತಃ ಕೋಲಾರ ಜಿಲ್ಲೆಯವರು. ಇವರು ಜನಿಸಿದ್ದು ಮುಳಬಾಗಿಲು ತಾಲ್ಲೂಕಿನ ಮೋತಕಪಲ್ಲಿ ಎಂಬ ಕುಗ್ರಾಮದಲ್ಲಿ. ದಿನಾಂಕ 01.06.1918 ಇವರ ಜನ್ಮದಿನ. ಒಂದು ಘಟ್ಟದಲ್ಲಿ ರಾಜಕೀಯ ಪ್ರವೇಶ ಮಾಡಿದ ಇವರು 1952 ರಲ್ಲಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜವಹರಲಾಲ್ ನೆಹರು ನೇತೃತ್ವದ ಕೇಂದ್ರ ಸರ್ಕಾರ ಎಂ.ವಿ.ಕೆ. ರವರಿಗೆ “ಕೃಷಿ ಹಾಗು ಆಹಾರ ಸಚಿವ”ರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿ ಕೊಟ್ಟಿತ್ತು. ರಾಜ್ಯದ ಹೈನುಗಾರರು ಹೈನುಗಾರಿಕೆಗಾಗಿ ನಾಡ ತಳಿ ಪಶುಗಳನ್ನು ನೆಚ್ಚಿಕೊಂಡಿದ್ದ ಕಾಲ ಅದಾಗಿತ್ತು. ಇಲ್ಲಿನ ಹೈನುಗಾರಿಕೆ ಹೀಗೆಯೇ ಮುಂದುವರೆದರೆ ನಗರ/ಪಟ್ಟಣಗಳಿಂದ ಹಾಲಿಗೆಂದು ಸೃಷ್ಟಿಯಾಗುವ ಬೇಡಿಕೆಯನ್ನು ನೀಗಿಸುವುದು ಕಷ್ಟ ಎಂಬುದನ್ನು ಶ್ರೀಯುತ ಎಂ.ವಿ.ಕೆ. ರವರು ಆ ದಿನಗಳಲ್ಲೇ ಯೋಚಿಸಿದ್ದರು. ಕೇಂದ್ರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದಾಗ ಸಾಕಷ್ಟು ವಿದೇಶಗಳನ್ನು ಸುತ್ತಿ ಬಂದಿದ್ದ ಅವರು ಅಲ್ಲಿನ ತಳಿಗಳ ಹಾಲುತ್ಪಾದನಾ ಸಾಮರ್ಥ್ಯವನ್ನು ಕಂಡು ಬೆರಗಾಗಿದ್ದರು. ಮಾತ್ರವಲ್ಲ, ಹಾಲೆಂಡ್ ದೇಶದಿಂದ ಹೆಚ್.ಎಫ್ ತಳಿ ರಾಸುಗಳನ್ನು ಆಮದು ಮಾಡಿಕೊಂಡು ಇಲ್ಲಿನ ರೈತರಿಗೆ ಹಂಚಿಕೆ ಮಾಡಿದ್ದರು. ದೇಶದ ನಾಡ ತಳಿ ರಾಸುಗಳನ್ನು ಕೃತಕಗರ್ಭಧಾರಣೆ ಮೂಲಕ ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರದಿಂದÀ ನೆರವು ಪಡೆದ ಅವರು 8 ರಿಂದ 10 ವಿದೇಶಿ ತಳಿ ಹೋರಿಗಳನ್ನು ಸಹಿತ ಕರ್ನಾಟಕಕ್ಕೆ

ಹಾಲಿನ
ಇತಿಹಾಸ

ಹಾಲಿನ ಪ್ರಾಚೀನತೆಯು ಹಾಗೂ ಇತಿಹಾಸವು ಮಾನವನ ವಿಕಾಸ , ನಾಗರಿಕತೆ ಮತ್ತು

ಕಹಾಮ
ರಾಯಭಾರಿಗಳು

ಕರ್ನಾಟಕ ಹಾಲು ಮಹಾಮಂಡಳವು ತನ್ನ ಉತ್ಪನ್ನಗಳ ಮಾರುಕಟ್ಟೆ ವ್ಯಾಪ್ತಿಯನ್ನು

ಕಹಾಮ
ಸಾಧನೆಗಳು

‘‘ಗೋವಿನಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಕೃಷ್ಟತೆ” ಎಂಬ ಪರಿಕಲ್ಪನೆಯಡಿಯಲ್ಲಿ ಕರ್ನಾಟಕದ

ಪ್ರಾಯೋಜಕತ್ವ

ಪ್ರಾಯೋಜಕತ್ವದ ಮೂಲಕ “ನಂದಿನಿ” ತನ್ನ ಬ್ರಾಂಡ್ ಇಮೇಜ್ ಹೆಚ್ಚಿಸಿಕೊಂಡು. ಮಾರಾಟಜಾಲ..

ಕ್ಷೀರಸಾಗರ ಮಾಸಪತ್ರಿಕೆ

Follow us:

ವಿಳಾಸ

ದೂರವಾಣಿ

ಮಿಂಚಂಚೆ

©

All rights reserved to KMF-MIS (CENTRAL OFFICE).

Created with passion by Velozity Global