1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ವೀರ್ಯಾಣು ಕೇಂದ್ರ

ಕರ್ನಾಟಕ ಹಾಲು ಮಹಾಮಂಡಳಿಯು 1984ರಲ್ಲಿ ನಂದಿನಿ ವೀರ್ಯಾಣು ಕೇಂದ್ರವನ್ನು ಸ್ಥಾಪಿಸಿತು.  ಈ ವೀರ್ಯಾಣು ಕೇಂದ್ರವು ISO 9001:2008 ಪ್ರಮಾಣಪತ್ರವನ್ನು ಪಡೆದಿದ್ದು, ಭಾರತ ಸರ್ಕಾರದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯ ಕೇಂದ್ರೀಯ ಪರಿವೀಕ್ಷಣಾ ಘಟಕದಿಂದ 2005ರಿಂದ ಸತತವಾಗಿ “ಎ” ಶ್ರೇಣಿಯ ಉತ್ಪಾದನಾ ಕೇಂದ್ರವೆಂದು ಗುರುತಿಸಲ್ಪಟ್ಟಿದೆ.  

ನಂದಿನಿ ವೀರ್ಯಾಣು ಕೇಂದ್ರವು, ಉತ್ತಮ ವಂಶಾವಳಿ ಹೊಂದಿರುವ ಉತ್ಕೃಷ್ಟ ಹಾಗೂ ರೋಗಮುಕ್ತ ಹೋರಿಗಳಿಂದ ಉತ್ಪಾದಿಸಿ, ಸಂಸ್ಕರಿಸಲಾದ ಉತ್ತಮ ಗುಣಮಟ್ಟದ ಘನೀಕೃತ ವೀರ್ಯನಳಿಕೆಗಳನ್ನು ಕರ್ನಾಟಕ ಹಾಲು ಮಹಾಮಂಡಳಿಯ ಕಾರ್ಯಕ್ಷೇತ್ರದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆಯಾ ಹಾಲು ಒಕ್ಕೂಟಗಳ ಮುಖೇನ ಕಳೆದ ಮೂರು ದಶಕಗಳಿಂದಲೂ ಯಶಸ್ವಿಯಾಗಿ ಸರಬರಾಜು ಮಾಡುತ್ತಲಿದೆ.  

ಈ ವೀರ್ಯಾಣು ಕೇಂದ್ರವು 2016-17ರ ಸಾಲಿನಲ್ಲಿ ಸುಮಾರು 3.7 ದಶಲಕ್ಷ ಘನೀಕೃತ ವೀರ್ಯನಳಿಕೆಗಳನ್ನು ಉತ್ಪಾದಿಸಿ, ಸುಮಾರು 3.7 ದಶಲಕ್ಷ ಘನೀಕೃತ ವೀರ್ಯನಳಿಕೆಗಳನ್ನು  ಮಾರಾಟಮಾಡಿದೆ.

National Dairy Plan-1  ಯೋಜನೆ ಅಡಿಯಲ್ಲಿ ನಂದಿನಿ ವೀರ್ಯಾಣು ಕೇಂದ್ರಕ್ಕೆ 13 Genomics  ಹೆಚ್.ಎಪ್ ಹೋರಿಗಳನ್ನು ಜರ್ಮನಿ ದೇಶದಿಂದ ಹಾಗೂ 8 ಜೆರ್ಸಿ ಹೋರಿಗಳನ್ನು ಡೆನ್ಮಾರ್ಕ ದೇಶದಿಂದ ಆಮದು ಮಾಡಿಕೂಳ್ಳಲಾಗಿದ್ದು, ತಳಿ ಸಂವರ್ದನೆಗೆ ಬಳಸಿಕೂಳ್ಳಲಾಗಿದೆ.

National Dairy Plan-1  ಯೋಜನೆ ಅಡಿಯಲ್ಲಿ ವೀರ್ಯಾಣು ಕೇಂದ್ರದ 10 ಕಿ.ಮಿ. ಸುತ್ತಳೆಯ ಸಂಘಗಳಲ್ಲಿ Environment and Social aspects  ಕಾರ್ಯಕ್ರಮದಡಿ ಇಲ್ಲಿಯವರೆಗೆ ಒಟ್ಟು 117 ಜನಜಾಗೃತಿ ಶಿಬಿರಗಳನ್ನು ಹಮ್ಮಿಕೂಳ್ಳಲಾಗಿದೆ.

ಘನೀಕೃತ ವೀರ್ಯನಳಿಕೆಗಳನ್ನು ಕೊಳ್ಳುವಲ್ಲಿ ಅನುಸರಿಸಬೇಕಾದ ಸಾಮಾನ್ಯ ಮಾರ್ಗದರ್ಶನ ಸೂತ್ರಗಳು :-

ಹೆಚ್ ಎಪ್. ತಳಿಯ ಸುಮಾರು 14 ಲಕ್ಷ ಘನೀಕೃತ ವೀರ್ಯನಳಿಕೆಗಳು ಮತ್ತು ಜೆರ್ಸಿ ಶುದ್ಧ ತಳಿಯ 2.0 ಲಕ್ಷ ಹಾಗೂ ಮುರ್ರಾ ತಳಿಯ 5.8 ಲಕ್ಷ  ಘನೀಕೃತ ವೀರ್ಯನಳಿಕೆಗಳು ಮಾರಾಟಕ್ಕೆ ಲಭ್ಯವಿರುತ್ತವೆ.

ಅನುಸರಿಸಬೇಕಾಗಿರುವ ಕಾರ್ಯವಿಧಾನ :-
1. ಒಂದು ವೀರ್ಯನಳಿಕೆಯ ಬೆಲೆ ರೂ.22-00 (ನಂದಿನಿ ವೀರ್ಯಾಣು ಕೇಂದ್ರ, ಹೆಸರಘಟ್ಟ, ಇಲ್ಲಿಗೆ ಅನ್ವಯಿಸುವಂತೆ) ಆಗಿರುತ್ತದೆ.

2. ಗುಣಮಟ್ಟದ ಪರೀಕ್ಷೆಯ ನಂತರ, ಪರಸ್ಪರ ಅನುಕೂಲಕರವಾದ ದಿನದಂದು ವೀರ್ಯನಳಿಕೆಗಳನ್ನು ಕೊಂಡೊಯ್ಯುವುದು.

3. ನಿರ್ದಿಷ್ಟವಾದ ಘನೀಕೃತ ವೀರ್ಯನಳಿಕೆಗಳನ್ನು ಪಡೆದುಕೊಳ್ಳಲು ಅನುವಾಗುವಂತೆ ಸಾಕಷ್ಟು ಸ್ಥಳಾವಕಾಶವಿರುವ ಧಾರಕವನ್ನು (container) ತರಬೇಕಾಗುವುದು.

4. ದ್ರವರೂಪದ ನೈಟ್ರೋಜನ್, ಪ್ರಸ್ತುತ ಮಾರಾಟ ದರ  ಒಂದು ಲೀಟರಿಗೆ ರೂ.18.00+ GST.

5. ಮುಂಗಡ ಹಣಪಾವತಿ: Nandini Sperm Station, Hessarghatta ಹೆಸರಿನಲ್ಲಿ, ಬೆಂಗಳೂರಿನಲ್ಲಿ ಸಂದಾಯವಾಗುವಂತೆ,ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದ ಡಿಮ್ಯಾಂಡ್ ಡ್ರಾಪ್ಟ್  ಅಥವಾ  RTGS ಮೂಲಕ ಹಣ ಪಾವತಿ ಮಾಡಬಹುದಾಗಿದೆ. 

6. ಹೆಚ್ಚಿನ ವಿಚಾರಣೆಗಾಗಿ ಘಟಕದ ದೂರವಾಣಿ ಸಂಖ್ಯೆ:080-28479242, 28479059 ರಲ್ಲಿ ಸಂಪರ್ಕಿಸಬಹುದಾಗಿದೆ.

7. ಇ-ಮೇಲ್ಃ  [email protected]  ಅಥವಾ  [email protected]

Pedigree Information

Certification

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105