1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮದರ್ ಡೇರಿ (ಕಹಾಮದ ಒಂದು ಘಟಕ)

www.motherdairykmf.in

ಕರ್ನಾಟಕ ಹಾಲು ಮಹಾಮಂಡಳಿಯ ಒಂದು ಪ್ರತಿಷ್ಟಿತ ಡೇರಿಯಾಗಿದ್ದು, ISO-22000:2005 ದೃಢೀಕರಣ ಪ್ರಮಾಣ ಪತ್ರವನ್ನು ಪಡೆದಿರುವ ಬೆಂಗಳೂರಿನಲ್ಲಿರುವ ಮದರ್ ಡೇರಿಯು ಮೂಲತ: ತನ್ನ ಸ್ವಯಂಚಾಲಿತ ಹಾಲು ಮಾರಾಟ ವ್ಯವಸ್ಥೆಯ ಮೂಲಕ ನಗರದ ಗ್ರಾಹಕರಿಗೆ ಹಾಲನ್ನು ಸರಬರಾಜು ಮಾಡಲು 1984ರಲ್ಲಿ ಸ್ಥಾಪನೆಗೊಂಡಿತು.  ಎರಡು ಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯದೊಂದಿಗೆ ಪ್ರಾರಂಭಗೊಂಡ ಡೇರಿಯು ಇಂದು ದಿನಂಪ್ರತಿ 7 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ.ಇದೇ ಅಲ್ಲದೆ, ಹಾಲು ಮತ್ತು ಮೊಸರನ್ನು ವಿವಿಧ ಪ್ಯಾಕ್ಗಳಲ್ಲಿ  ಅತ್ಯಂತ ಆರೋಗ್ಯಕರ ವಿಧಾನದಲ್ಲಿ ತಯಾರಿಸಿ ಸರಬರಾಜು ಮಾಡುವ ಸೌಲಭ್ಯವನ್ನು ಹೊಂದಿದೆ.ಅಲ್ಲದೆ, ದಿನಂಪ್ರತಿ 30 ಮೆಟ್ರಿಕ್ ಟನ್ಗಳಷ್ಟು  ಕೆನೆರಹಿತ ಹಾಲಿನ ಪುಡಿ, ಡೇರಿ ವೈಟನರ್ ಮತ್ತು ಕೆನೆಭರಿತ ಹಾಲಿನ ಪುಡಿಯನ್ನು ತಯಾರು ಮಾಡುವ ಅತ್ಯಂತ ಆಧುನಿಕ ಸೌಲಭ್ಯವನ್ನು ಸಹ ಹೊಂದಿದೆ.ಪ್ರೊ-ಬಯಾಟಿಕ್ ಸಕ್ಕರೆರಹಿತ ಐಸ್ ಕ್ರೀಂ ಒಳಗೊಂಡಂತೆ ದಿನಂಪ್ರತಿ 15000 ಲೀಟರುಗಳಷ್ಟು 30 ಕ್ಕಿಂತ ಹೆಚ್ಚಿನ ವೈವಿಧ್ಯಮಯ ಐಸ್ ಕ್ರೀಂಗಳನ್ನು ಅನೇಕ ಪ್ಯಾಕ್ಗಳಲ್ಲಿ  ತಯಾರಿಸುವ ಸೌಲಭ್ಯವನ್ನು ಸ್ಥಾಪಿಸಿದೆ.ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಗಾಗಿ ‘ಅಮುಲ್’ ಬ್ರಾಂಡ್ ಐಸ್ ಕ್ರೀಂ ಅನ್ನು ಸಹ ಉತ್ಪಾದಿಸಿ ಕೊ-ಪ್ಯಾಕಿಂಗ್ ಮಾಡುತ್ತಲಿದೆ.

ಮದರ್ ಡೇರಿಯು ತನ್ನದೇ ಆದ ಮಾರಾಟಗಾರರ ಜಾಲವನ್ನು ಹೊಂದಿದ್ದು, ಇವರ ಮೂಲಕ ಗ್ರಾಹಕರಿಗೆ ನಂದಿನಿ ಹಾಲನ್ನು ಸರಬರಾಜು ಮಾಡುತ್ತಲಿದೆ.ಅಲ್ಲದೆ, ಡೇರಿಯು ವಿನೂತನ ಮಾದರಿಯ ಮಾರಾಟ ಮಳಿಗೆಗಳನ್ನು ನಿರ್ಮಿಸಿದ್ದು, ಸುಮಾರು ಐವತ್ತಕ್ಕೂ ಮೀರಿದ ‘ನಂದಿನಿ’ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.ಈ ಮಾರಾಟ ಮಳಿಗೆಗಳನ್ನು ‘ನಂದಿನಿ ಮಿಲ್ಕ್ ಶಾಪಿ’ ಎಂದು ಹೆಸರಿಸಲಾಗಿದೆ.  ಮದರ್ ಡೇರಿಯ ಹಾಲು ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ತಪ್ಪದೆ ನಿರಂತರವಾಗಿ ಹಾಲನ್ನು ಸರಬರಾಜು ಮಾಡಲು ಬೆಂಗಳೂರು ನಗರದ ನಾಲ್ಕು ಆಯಕಟ್ಟಿನ ಸ್ಥಳಗಳಲ್ಲಿ ‘ವಾಕ್-ಇನ್-ಕೋಲ್ಡ್ ಸ್ಟೋರ್’ (Walk-in-Cold Store) ಗಳನ್ನು ಸ್ಥಾಪಿಸಲಾಗಿದೆ.  ಈ ವ್ಯವಸ್ಥೆಯ ಮೂಲಕ ನಿಯತವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕಾದ ಪೂರ್ವಾಗತ್ಯತೆಯನ್ನು ಪೂರೈಸಲಾಗುತ್ತಿದೆ.

ಸುಧಾರಿತ ಗುಣಮಟ್ಟದ ಪನ್ನೀರ್, ಯೋಗರ್ಟ್ ಅಲ್ಲದೆ ಬಾಟಲುಗಳಲ್ಲಿ ಸುವಾಸಿತ ಹಾಲಿನ ಉತ್ಪಾದನೆಯನ್ನು ಡೇರಿಯು ಕೈಗೆತ್ತುಕೊಂಡಿದೆ. ಈ ಉತ್ಪನ್ನಗಳನ್ನೇ ಅಲ್ಲದೆ UHT (Ultra High Temperature) ಹಾಲನ್ನು ಸ್ವಯಂಚಾಲಿತ ಗಣಕೀಕೃತ ತಂತ್ರಜ್ಞಾನದಲ್ಲಿ ತಯಾರಿಸಲು ಯೋಜಿಸಲಾಗಿದೆ.ಅಲ್ಲದೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಕಷ್ಟು ಪ್ರಮಾಣವನ್ನು ಹೊಂದಿರುವಂತಹ Ready to Eat ತಿನಿಸುಗಳನ್ನು ಮಾರಾಟ ಮಾಡಲು ಅವಶ್ಯಕವಾದ ಯೋಜನೆಯನ್ನು ಸಹ ಸಿದ್ಧಪಡಿಸಲಾಗಿದೆ.

ಮದರ್ ಡೈರಿಯ ವೈಶಿಷ್ಟತೆ :
•    ಮದರ್
ಡೇರಿಯು ಉತ್ಪನ್ನ ಗುಣಮಟ್ಟ, ನೈರ್ಮಲ್ಯತೆ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಂಡು ಬಂದಿದ್ದು, 2000ದ ಇಸವಿಯಲ್ಲಿ ISO 9001-2000 ದೃಢೀಕರಣ ಪ್ರಮಾಣಪತ್ರದೊಂದಿಗೆ, 2008ನೇ ಇಸವಿಯಲ್ಲಿ ISO 22000-2005 ದೃಢೀಕರಣ ಪ್ರಮಾಣಪತ್ರವನ್ನು ಪಡೆದಿದೆ.
•    ಕೆನೆರಹಿತ ಹಾಲಿನ ಪುಡಿ, ಕೆನೆಭರಿತ ಹಾಲಿನ ಪುಡಿ,
ಡೇರಿ ವೈಟನರ್, ತುಪ್ಪ ಮತ್ತು ಬೆಣ್ಣೆ, ಈ ಉತ್ಪನ್ನಗಳ ಮಾರಾಟಕ್ಕಾಗಿ ಡೈರಿಯು ರಫ್ತು ಪರವಾನಗಿಯನ್ನು ಹೊಂದಿದೆ.
•    
ಡೇರಿಯು ಪರಿಸರ ಸಂರಕ್ಷಣೆ ಮತ್ತು ಇಂಧನ ಉಳಿತಾಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು, ಬ್ಯೂರೊ ಆಫ್ ಎನರ್ಜಿ ಎಫಿಷಿಯನ್ಸಿ, ಭಾರತ ಸರ್ಕಾರ ಮತ್ತು KREDL ಸಂಸ್ಥೆಯಿಂದ ಮಾನ್ಯತೆಯನ್ನು ಪಡೆದಿದೆ.
•    ಮದರ್
ಡೇರಿಯು ಸೂಕ್ತ ತಂತ್ರಜ್ಞಾನದ ERP ಅಳವಡಿಸಿಕೊಂಡು ಡೇರಿಯ ಎಲ್ಲ ಕಾರ್ಯಚಟುವಟಿಕೆಗಳನ್ನು  ಗಣಕೀಕರಣಗೊಳಿಸಲಾಗಿದೆ.
•  
ಡೇರಿಯು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಧನಾತ್ಮಕ ಆರ್ಥಿಕ ಫಲಿತಾಂಶವನ್ನೇ ನಿಯತವಾಗಿ ಸಾಧಿಸಿಕೊಂಡು ಬರುತ್ತಿದೆ.

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105