1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಅರಮನೆ ನಗರಿ ಮೈಸೂರು, ಬಾಳೆಹಣ್ಣಿಗೆ ಹೆಸರುವಾಸಿ. ಮೈಸೂರಿನ ಮಹಾರಾಜರು ದೇಶದಲ್ಲಿಯೇ ಪ್ರಥಮ ಬಾರಿಗೆ ಕೃತಕ ಗರ್ಭಧಾರಣೆಯ ಪರಿಕಲ್ಪನೆಗೆ ಚಾಲನೆ ನೀಡಿದ್ದು ಇಲ್ಲಿಯೇ. ಇದಕ್ಕೆ ಪ್ರತಿ ಕೊಡುಗೆಯಾಗಿ, ಒಕ್ಕೂಟವು ಸಾಮೂಹಿಕ ಕೃತಕ ಗರ್ಭಧಾರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಒಕ್ಕೂಟವು 7 ತಾಲ್ಲೂಕುಗಳನ್ನು ಒಳಗೊಂಡಂತೆ ಕಾರ್ಯಾಚರಣೆಯಲ್ಲಿರುವ 1033 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿದೆ.

ದಿನಂಪ್ರತಿ 10,000ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯದಿಂದ ಪ್ರಾರಂಭಗೊಂಡ ಮೈಸೂರು ಡೇರಿಯು ಹಂತಹಂತವಾಗಿ ವಿಸ್ತರಣೆಗೊಳಪಟ್ಟಿದ್ದು ಈಗ ಪ್ರತಿನಿತ್ಯ 3.00 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ.

ಹುಣಸೂರಿನಲ್ಲಿ 100ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರ ಹೊಂದಿದ್ದು, ಒಟ್ಟಾರೆ 1.00ಲಕ್ಷ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಲ್ಲದೆ, ಒಕ್ಕೂಟದಲ್ಲಿ 93 ಬಲ್ಕ್ ಮಿಲ್ಕ್ ಕೂಲರ್, 467 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 5.26 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 2.47 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದು ಪೇಡಾ, ಪನ್ನೀರ್, ಮೈಸೂರುಪಾಕ್, ಕ್ರೀಂ, ಬರ್ಫಿ, ನಂದಿನಿ ಬೈಟ್ ಸಹ ಮಾರಾಟ ಮಾಡುತ್ತಿದೆ.

ಒಕ್ಕೂಟದ ಹಿರಿಮೆ:     ಒಂದೇ ನಗರದಲ್ಲಿ ಅತಿ ಹೆಚ್ಚು ಕ್ಷೀರ ಮಳಿಗೆಗಳನ್ನು ಹೊಂದಿರುವ ಹೆಗ್ಗಳಿಕೆಯ ಒಕ್ಕೂಟ; ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಮೇವು ಸಾಂದ್ರೀಕರಣ ಘಟಕವನ್ನು ಸ್ಥಾಪಿಸಿದ ಹೆಗ್ಗಳಿಕೆ; ಬರಗಾಲದಲ್ಲಿ ರಾಸುಗಳಿಗೆ ಕುಡಿಯುವ ನೀರಿನ ಅನುವಾಗುವಂತೆ ಹಲವಾರು ಹಾಲು ಉತ್ಪಾದಕರ ಸಂಘಗಳಲ್ಲಿ ಭೂಮಟ್ಟದಲ್ಲಿ ತೊಟ್ಟಿಗಳ ನಿರ್ಮಾಣ ಮಾಡಿದ ಪ್ರಪ್ರಥಮ ಒಕ್ಕೂಟ.

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.
ಸಿದ್ದಾರ್ಥನಗರ, ಟಿ.ನರಸೀಪುರ ರಸ್ತೆ,
ಮೈಸೂರು - 570 011, ಕರ್ನಾಟಕ.
ಫೋನ್: 0821-2473933/ 2473923/ 2471423/ 2473837
ಫ್ಯಾಕ್ಸ್: 0821-2472797
ಇ-ಮೈಲ್: mymul@sanchernet.in   Read More...

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105