1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಚಾಮರಾಜನಗರ ಜಿಲ್ಲೆಯು ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಕೊನೆಯಲ್ಲಿರುವ ಜಿಲ್ಲೆ.  1998ರಲ್ಲಿ ಈ ಜಿಲ್ಲೆಯನ್ನು ಮೊದಲಿನ ವಿಶಾಲ ಮೈಸೂರು ಜಿಲ್ಲೆಯಿಂದ ಬೇರ್ಪಡಿಸಲಾಯಿತು.  ಒಟ್ಟು 5,686 ಚದರ ಕಿ.ಮೀ ವಿಸ್ತೀರ್ಣವಿರುವ ಚಾಮರಾಜನಗರ ಜಿಲ್ಲೆಯು ನಾಲ್ಕು ತಾಲ್ಲೂಕುಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು, 16 ಹೋಬಳಿಗಳು, 446 ವಸತಿಗ್ರಾಮಗಳು, 61 ವಸತಿರಹಿತ ಗ್ರಾಮಗಳು ಮತ್ತು 469 ರೆವಿನ್ಯೂವಲಯ ಗ್ರಾಮಗಳನ್ನು ಹೊಂದಿದೆ.

ಈ ಜಿಲ್ಲೆಯು ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸರಹದ್ದಿನಲ್ಲಿದೆ.  ಜಿಲ್ಲೆಯ ಬಹುಪಾಲು ಪ್ರದೇಶವು ನೀಲಗಿರಿಯ ಗಾಳಿಭರಿತ ಪ್ರದೇಶದಲ್ಲಿದ್ದು, ಮುಖ್ಯವಾಗಿ ಮಳೆಯ ಮೇಲೆ ಅವಲಂಬಿತವಾದ ಸಮತಲವಾದ ಒಕ್ಕಲು ಭೂಮಿ ಹಾಗೂ ಗುಡ್ಡಗಾಡು ಪ್ರದೇಶಗಳನ್ನೊಳಗೊಂಡಿದೆ.  ಕರ್ನಾಟಕದ 30 ಜಿಲ್ಲೆಗಳಲ್ಲಿ, ಕೊಡಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿದರೆ ಈ ಜಿಲ್ಲೆಯು ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಜಿಲ್ಲೆಯಾಗಿದೆ.

ಈ ಹಾಲು ಒಕ್ಕೂಟದ ವ್ಯಾಪ್ತಿಪ್ರದೇಶದಲ್ಲಿ 458 ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿವೆ. ಚಾಮರಾಜನಗರದಲ್ಲಿ 60ಸಾವಿರ ಲೀಟರ್ ಮತ್ತು ಕೊಳ್ಳೇಗಾಲದಲ್ಲಿ 40ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 1.0ಲಕ್ಷ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  
ಅಲ್ಲದೆ, ಒಕ್ಕೂಟದಲ್ಲಿ 104 ಬಲ್ಕ್ ಮಿಲ್ಕ್ ಕೂಲರ್ ಮತ್ತು 397 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 2.63 ಲಕ್ಷ ಕೇಜಿ ಹಾಲನ್ನು ಶೇಖರಣೆ  ಮಾಡುತ್ತಿದೆ,ಸರಾಸರಿ 0.30 ಲಕ್ಷ ಲೀಟರ್ ಹಾಲು ಮತ್ತು 0.06 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ.  

ಒಕ್ಕೂಟದ ಹಿರಿಮೆ:    ಒಕ್ಕೂಟದ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು “ಸಾಮೂಹಿಕ ಕೃತಕ ಗರ್ಭಧಾರಣಾ ಕೇಂದ್ರಗಳ” ವ್ಯಾಪ್ತಿಗೊಳಪಟ್ಟಿವೆ.

ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ,
ಕುದೇರು ಗ್ರಾಮ & ಅಂಚೆ, ಸಂತೇಮಾ
ರಹಳ್ಳಿ ಹೋಬಳಿ,
ಚಾಮರಾಜನಗರ – 571 136. ಕರ್ನಾಟಕ.
ಫೋನ್: 08226-234030
ಫ್ಯಾಕ್ಸ್: 08226-234040
ಇ-ಮೈಲ್: [email protected]

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105