1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಕುದುರೆಮುಖದ ಕಬ್ಬಿಣದ ಅದಿರಿನ ಜೊತೆಗೆ ಐತಿಹಾಸಿಕ ಖ್ಯಾತಿ ಪಡೆದಿರುವ ಶ್ರವಣಬೆಳಗೊಳ, ಬೇಲೂರು, ಹಳೇಬೀಡು, ಈ ಸ್ಥಳಗಳನ್ನು ಒಳಗೊಂಡಿರುವ ಹಾಲು ಒಕ್ಕೂಟದ ವ್ಯಾಪ್ತಿ ಪ್ರದೇಶದ ಜಿಲ್ಲೆಗಳಲ್ಲಿ ಈ ಮೊದಲು ಕಾಫಿ, ಆಲೂಗೆಡ್ಡೆ, ಕಿತ್ತಲೆ, ಜೇನು, ಏಲಕ್ಕಿ, ಬೆಣ್ಣೆ ಮತ್ತು ಮೆಣಸು, ಇವುಗಳದೇ ಖ್ಯಾತಿ ಹೊಂದಿತ್ತು  ಆದರೆ ಇಂದು, ಜಿಲ್ಲೆಯ 18 ತಾಲ್ಲೂಕುಗಳಲ್ಲಿ ಶೇಕಡ 78ರಷ್ಟು ಹಳ್ಳಿಗಳನ್ನು ಒಳಗೊಂಡಂತೆ 1,388 ಹಾಲು ಉತ್ಪಾದಕರ ಸಂಘಗಳು ಕಾರ್ಯಾಚರಣೆಯಲ್ಲಿವೆ.

ಪ್ರಾರಂಭದಲ್ಲಿ 60,000 ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯವಿದ್ದ ಹಾಸನ ಡೇರಿಯನ್ನು 1996ರಲ್ಲಿ ದಿನಂಪ್ರತಿ 1,20,000 ಲೀಟರ್ ಹಾಲನ್ನು ಸಂಸ್ಕರಿಸಲು ವಿಸ್ತರಸಿ, ಇತ್ತೀಚೆಗೆ ದಿನಂಪ್ರತಿ 3,00,000 ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯಕ್ಕೆ ವಿಸ್ತರಿಸಲಾಗಿದೆ.  ದಿನಕ್ಕೆ 2.00 ಲಕ್ಷ ಲೀಟರ್ ತಯಾರಿಕಾ ಸಾಮರ್ಥ್ಯದ ಯು.ಹೆಚ್.ಟಿ ಘಟಕವನ್ನು ಸಹ ಹೊಂದಿದೆ. 50,000 ಲೀಟರ್ ಸಾಮರ್ಥ್ಯದ ಮತ್ತೊಂದು ಡೇರಿಯು ಕೂಡಿಗೆಯಲ್ಲಿ ಕಾರ್ಯಾಚರಣೆಯಲ್ಲಿದೆ.

ಹೊಳೇನರಸೀಪುರದಲ್ಲಿ 1.00 ಲಕ್ಷ ಲೀಟರ್, ಬೀರೂರಿನಲ್ಲಿ 50ಸಾವಿರ ಲೀಟರ್, ಚನ್ನರಾಯಪಟ್ಟಣದಲ್ಲಿ 1.50 ಲಕ್ಷ ಲೀಟರ್ ಮತ್ತು ಅರಸೀಕೆರೆಯಲ್ಲಿ 1.00 ಲಕ್ಷ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 4.0 ಲಕ್ಷ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಲ್ಲದೆ, ಒಕ್ಕೂಟದಲ್ಲಿ 40 ಬಲ್ಕ್ ಮಿಲ್ಕ್ ಕೂಲರ್ ಮತ್ತು 403 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 6.67 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 2.11 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ.

ಒಕ್ಕೂಟದ ಹಿರಿಮೆ:    ಒಕ್ಕೂಟಕ್ಕೆ ಅತಿ ಹೆಚ್ಚು ರಾಷ್ಟ್ರೀಯ ಶಕ್ತಿ ಸಂರಕ್ಷಣೆ ಪ್ರಶಸ್ತಿಗಳು ಲಭಿಸಿದೆ; ಒಕ್ಕೂಟದಲ್ಲಿ ಕೇಂದ್ರ ಒಂದಕ್ಕೆ ಅತಿ ಹೆಚ್ಚಿನ ಕೃತಕ ಗರ್ಭಧಾರಣೆ ಮಾಡುತ್ತಿರುವ ಹೆಗ್ಗಳಿಕೆ ಹಾಗೂ ಹೆಚ್ಚುವರಿ ಹಾಲು ಅಧಿಕವಾಗಿರುವ ಒಕ್ಕೂಟ.

                                            

                ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.  

              ಕೈಗಾರಿಕಾ ಪ್ರದೇಶ,  ಬಿ.ಎಮ್.ರಸ್ತೆ,  ಹಾಸನ - 583 201. ಕರ್ನಾಟಕ.

              ಫೋನ್08172-240358/240628/240631/240607
               ಫ್ಯಾಕ್ಸ್08172-240640
                ಇ-ಮೈಲ್hamul77@yahoo.co.in

 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105