ಕೆಳದಿ ರಾಜವಂಶದ ಉಗಮ ಸ್ಥಾನ, ಅರಣ್ಯ ಮತ್ತು ಬರಪೀಡಿತ ಪ್ರದೇಶಗಳ ಸಂಗಮವಾದ ಈ ಯೋಜನಾ ಪ್ರದೇಶ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿದೆ. ವಿಶ್ವವಿಖ್ಯಾತ ಜೋಗ ಜಲಪಾತದ ಪರಿಸರದಲ್ಲಿನ 19 ತಾಲ್ಲೂಕುಗಳಲ್ಲಿ 1,185ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಂಘಗಳು ಕಾರ್ಯಾಚರಣೆಯಲ್ಲಿವೆ. 1991ರಲ್ಲಿ ಸ್ಥಾಪನೆಗೊಂಡ ಶಿವಮೊಗ್ಗ ಡೈರಿಯು ದಿನಂಪ್ರತಿ 1.50 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ದಾವಣಗೆರೆ ಡೇರಿಯು ಪ್ರತಿನಿತ್ಯ 60,000ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊನ್ನಾಳಿಯಲ್ಲಿ 60ಸಾವಿರ ಲೀಟರ್, ತಾಡಗಣಿಯಲ್ಲಿ 40ಸಾವಿರ ಲೀಟರ್, ಆನಂದಪುರದಲ್ಲಿ 30ಸಾವಿರ ಲೀಟರ್, ಚಿತ್ರದುರ್ಗದಲ್ಲಿ 50ಸಾವಿರ ಲೀಟರ್, ಹೊಸದುರ್ಗದಲ್ಲಿ 20ಸಾವಿರ ಲೀಟರ್, ಬಿ.ಜಿ.ಕೆರೆಯಲ್ಲಿ 5ಸಾವಿರ ಲೀಟರ್ ಮತ್ತು ಚಳ್ಳಕೆರೆಯಲ್ಲಿ 10ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 2.15 ಲಕ್ಷ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಒಕ್ಕೂಟದಲ್ಲಿ 130 ಬಲ್ಕ್ ಮಿಲ್ಕ್ ಕೂಲರ್, 785 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.
ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 5.90 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 2.10 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.26 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದ್ದು, ಪನ್ನೀರ, ಕೋವಾ, ಮೈಸೂರು ಪಾಕ್, ಪೇಡಾ ಸಹ ಮಾರಾಟ ಮಾಡುತ್ತಿದೆ.
ಒಕ್ಕೂಟದ ಹಿರಿಮೆ: ಔಷಧೀಯ ಗುಣವುಳ್ಳ ಗಿಡಮೂಲಿಕೆಗಳನ್ನು ಬೆಳೆಸಲು ಮಹಿಳಾ ರೈತ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವಲ್ಲಿ ಪ್ರಪ್ರಥಮ ಒಕ್ಕೂಟ ಎನ್ನುವ ಹೆಗ್ಗಳಿಕೆ.
ಶಿವಮೊಗ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.
ಶಿವಮೊಗ್ಗ ಡೇರಿ ಆವರಣ, ಮಾಚೇನಹಳ್ಳಿ, ನಿದಿಗೆ ಅಂಚೆ,
ಶಿವಮೊಗ್ಗ - 577 222, ಕರ್ನಾಟಕ.
ಫೋನ್ 08182-246161/ 246163/ 246162
ಫ್ಯಾಕ್ಸ್: 08182-246284
ಇ-ಮೈಲ್: [email protected]
Read more
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105