1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ವಿಷನ್ ಅಂಡ್ ಮಿಷನ್


ಧ್ಯೇಯದೃಷ್ಟಿ

ಉದಾತ್ತ ಧ್ಯೇಯೋದ್ದೇಶಗಳು ಮತ್ತು ಉತ್ತಮ ಚಿಂತನೆಗಳಿಂದ ಕರ್ನಾಟಕ ಹಾಲು ಮಹಾಮಂಡಳಿಯನ್ನು ರಾಷ್ಟ್ರದಲ್ಲಿಯೇ ಅನುಕರಣೀಯ ಸಂಸ್ಥೆಯನ್ನಾಗಿ ರೂಪಿಸುವುದರ ಜೊತೆಗೆ ವಿಶಿಷ್ಟ ಸಾಧನೆಗಳ ಮೂಲಕ ಇತರ ಹಾಲು ಮಹಾಮಂಡಳಿಗಳಿಗೆ ಮಾದರಿಯಾಗುವಂತಹ ಸಂಸ್ಥೆಯನ್ನಾಗಿ ರೂಪಿಸಲು ಶ್ರದ್ಧೆಯಿಂದ ಮುನ್ನಡೆಯುವುದು.
  • ಕರ್ನಾಟಕ ಹಾಲು ಮಹಾಮಂಡಳಿಯ ಬೆನ್ನೆಲುಬಾಗಿರುವ ಗ್ರಾಮೀಣ ಹಾಲು ಉತ್ಪಾದಕರಿಗೆ ಆರ್ಥಿಕ ಮತ್ತು ಸಾಮಾಜಿಕ ಸದೃಢತೆ ಹಾಗೂ ಶ್ರೇಯಸ್ಸು ಲಭಿಸುವಂತೆ ಮಾಡುವುದು.
  • ಗ್ರಾಮೀಣ ಉದ್ಯೋಗ, ಹೈನು ಉತ್ಪಾದನೆ ಹಾಗೂ ವರಮಾನ ಹೆಚ್ಚಳವನ್ನು ಪ್ರೇರೇಪಿಸುವಂತಹ, ಹಾಲು ಉತ್ಪಾದಕರ ಹಿತದೃಷ್ಟಿಯನ್ನು ಕಾಯುವಂತಹ ಸಹಕಾರಿ ಸಮಾಜವನ್ನು ವೃದ್ಧಿಗೊಳಿಸುವುದು.
  • ಹಾಲಿನ ಮಾರಾಟ ಮತ್ತು ಹಾಲಿನ ಶೇಖರಣಾ ದರಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು.
  • ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲನ್ನು ಒದಗಿಸುವಲ್ಲಿ ಉತ್ತಮ ಮೌಲ್ಯದ ತೀಕ್ಷ್ಣತಮ ವ್ಯಾಪಾರಿ ಚಟುವಟಿಕೆಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಹಾಲು ಉತ್ಪಾದಕರ ವರಮಾನಕ್ಕೆ ಪ್ರೇರಣೆಯಾಗುವುದು.
  • ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುವುದರೊಂದಿಗೆ ಖಾಸಗಿ ಡೇರಿಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಮಾಡುತ್ತ, ಸಹಕಾರಿ ಸಂಸ್ಥೆಯ ಉತ್ತಮ ಸ್ಥಿತಿಯನ್ನು ಕಾಯ್ದುಕೊಳ್ಳುವುದು.


ಘನೋದ್ದೇಶ

ಕರ್ನಾಟಕ ರಾಜ್ಯದಲ್ಲಿ ಒಂದು ಸಶಕ್ತ, ಸ್ವಾವಲಂಬಿ ಮತ್ತು ಸಂಪೂರ್ಣವಾದ ಸಹಕಾರಿ ಹೈನು ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ನಮ್ಮ ಸದಸ್ಯ ಹಾಲು ಉತ್ಪಾದಕರ ಜೀವನದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮೃದ್ಧಿಯನ್ನು ಉಂಟುಮಾಡುವುದೇ ಕರ್ನಾಟಕ ಹಾಲು ಮಹಾಮಂಡಳಿಯ ಘನೋದ್ದೇಶವಾಗಿದೆ.

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

Phone

080-260 96800

Customer Care Number:

1800 425 8030 toll free 10.00AM - 5.30PM

(Except on Second Saturday,Fourth Saturday, Sunday & GOVT.Holidays)

Nandini Neravu Number(24*7):

080-66660000

Fax: 080-255 36105