1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಪಶು ಆಹಾರ ಮಿಶ್ರಣ ಘಟಕಗಳು

ಹಾಲಿನ ಉತ್ಪಾದನೆಗೆ ಪಶು ಆಹಾರವು ಬಹಳ ಮುಖ್ಯವಾದ ತಾಂತ್ರಿಕ ಸೌಲಭ್ಯವಾಗಿದ್ದು, ರಾಜಾನುಕುಂಟೆ, ಗುಬ್ಬಿ, ಧಾರವಾಡ, ಹಾಸನ ಮತ್ತು ಶಿಕಾರಿಪುರ ಘಟಕಗಳಲ್ಲಿ ಪಶು ಆಹಾರವನ್ನು ಉತ್ಪಾದಿಸಲಾಗುತ್ತಿದೆ.
•    ಈ ಎಲ್ಲಾ ಘಟಕಗಳ ಒಟ್ಟಾರೆ ಉತ್ಪಾದನಾ ಸಾಮರ್ಥ್ಯ 1350 ಮೆಟ್ರಿಕ್ ಟನ್ ಆಗಿದ್ದು, ಉತ್ಪಾದನಾ ಸಾಮರ್ಥ್ಯದ ಬಳಕೆ ಶೇಕಡ 140ಕ್ಕೂ ಹೆಚ್ಚಿನದ್ದಾಗಿರುತ್ತದೆ
•    ಎಲ್ಲಾ ಘಟಕಗಳೂ ISO 9001:2008 ದೃಢೀಕರಣ ಪ್ರಮಾಣ ಪತ್ರವನ್ನು ಪಡೆದಿರುತ್ತವೆ
ಮೇಲೆ ಹೆಸರಿಸಲಾಗಿರುವ ಎಲ್ಲಾ ಘಟಕಗಳೂ ವೈವಿಧ್ಯಮಯ ಪಶು ಆಹಾರಗಳನ್ನು ಉತ್ಪಾದಿಸುತ್ತಿದ್ದು, ಅವುಗಳ ವಿವರ ಹೀಗಿದೆ:
•    ಬೈಪಾಸ್ ಪಶು ಆಹಾರ
•    ನಂದಿನಿ ಗೋಲ್ಡ್ (ಟೈಪ್-1) ಪಶು ಆಹಾರ
•    ಯೂರಿಯ ಕಾಕಂಬಿ ನೆಕ್ಕುಬಿಲ್ಲೆ
•    ಪ್ರದೇಶ  ನಿರ್ದಿಷ್ಟ ಖನಿಜ ಮಿಶ್ರಣ
•    ಕರುಗಳ ಆಹಾರ
•    ಕರುವಿನ ಪ್ರಥಮ ಆಹಾರ (Calf Starter)
•    ಹೋರಿಗಳ ಆಹಾರ

 

ಯೂರಿಯ ಕಾಕಂಬಿ ನೆಕ್ಕುಬಿಲ್ಲೆಗಳನ್ನು ರಾಜಾನುಕುಂಟೆಯಲ್ಲಿ ತಯಾರಿಸಲಾಗುತ್ತಿದ್ದರೆ, ಖನಿಜ ಮಿಶ್ರಣವನ್ನು ಗುಬ್ಬಿ, ಹಾಸನ ಮತ್ತು ಧಾರವಾಡ ಘಟಕಗಳಲ್ಲಿ ತಯಾರಿಸಲಾಗುತ್ತಿದೆ.ಇದೇ ಅಲ್ಲದೆ, ಫಾರ್ಮಾಲ್ಡಿಹೈಡ್ ಟ್ರೀಟ್‍ಮೆಂಟ್(ಬೈಪಾಸ್ ಪ್ರೋಟೀನ್) ಘಟಕವನ್ನು ಹಾಸನದಲ್ಲಿ ಸ್ಥಾಪಿಸಲಾಗಿದ್ದು, ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ.

ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಪಶು ಆಹಾರವನ್ನು ಹಾಲು ಉತ್ಪಾದಕರಿಗೆ ಸರಬರಾಜು ಮಾಡುವುದೇ ಅಲ್ಲದೆ ಡೇರಿ ಫಾರಂಗಳನ್ನು ಹೊಂದಿರುವ ರಾಜಭವನ ಹಾಗು ವಿವಿಧ ಸಂಘಸಂಸ್ಥೆಗಳಾದ NDRI, CFSPTI, CCBF, NIANP, IVRT, BSF-Yelhanka, UAS(Hebbal/GKVK), SLBC, SBTC, SSCC ಸಹ ಸರಬರಾಜು ಮಾಡಲಾಗುತ್ತಿದೆ.

 

ಪಶು ಆಹಾರ ಗುಣಮಟ್ಟದಲ್ಲಿ ಮುಖ್ಯವಾಗಿ ಶಕ್ತಿ ಮತ್ತು ಪೌಷ್ಠಿಕತೆಯನ್ನು ಹೆಚ್ಚಿಸಲು ಮೆಕ್ಕೆಜೋಳದ ಪ್ರಮಾಣವನ್ನು ಹಾಲಿ ಪ್ರಮಾಣಕ್ಕಿಂತ ದ್ವಿಗುಣಗೊಳಿಸಿ ಪಶು ಆಹಾರವನ್ನು ತಯಾರಿಸಲಾಗುತ್ತಿದ್ದು ಇದರಿಂದ ಪಶು ಆಹಾರದಲ್ಲಿ ಶಕ್ತಿ, ಹೆಚ್ಚಿನ ಜಿಡ್ಡಿನಾಂಶ ಹಾಗೂ ಪಚನವಾಗುವ ಪೌಷ್ಠಿಕಾಂಶಗಳು ಹೆಚ್ಚಿಗೆ ಲಭ್ಯವಿರುವ ಕಾರಣ ರಾಸುಗಳು ಆರೋಗ್ಯವಾಗಿರಲು ಹಾಗೂ ಗುಣಮಟ್ಟದ ಹಾಲನ್ನು ಉತ್ಪಾದಿಸಲು ನಂದಿನಿ ಗೋಲ್ಡ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ನಂದಿನಿ ಗೋಲ್ಡ್ ಪಶು ಆಹಾರವು ರಾಸುಗಳಿಗೆ ಹೆಚ್ಚು ಶಕ್ತಿಯುತ ಹಾಗೂ ರುಚಿಕರವಾಗಿರುವುದರಿಂದ, ದೇಹದಲ್ಲಿ ಉಂಟಾಗುವ ಋಣಾತ್ಮಕ ಶಕ್ತಿಯು ನಿವಾರಣೆಯಾಗಿ ಧನಾತ್ಮಕ ಶಕ್ತಿಯಾಗಿ ಬದಲಾವಣೆಯಾಗುತ್ತದೆ. ಈ ಬದಲಾವಣೆಯಿಂದ ರಾಸುಗಳ ಆರೋಗ್ಯ, ಉತ್ಪಾದನಾ ಶಕ್ತಿ, ರೋಗ ನಿರೋಧಕ ಶಕ್ತಿ, ಗರ್ಭ ಧರಿಸುವ ಅಂಶ ಹಾಗೂ ಹಾಲಿನ ಗುಣಮಟ್ಟ ಹೆಚ್ಚುವ ಸಂಭವವಿರುತ್ತದೆ.

 

ನಂದಿನಿ ಗೋಲ್ಡ್ - ಪೌಷ್ಠಿಕಾಂಶಗಳು :-

ಪೌಷ್ಠಿಕಾಂಶಗಳು   

ಪರಿಮಾಣ-ಶೇಕಡಾ

ಕಚ್ಚಾ ಸಸಾರಜನಕ   

18-19

ಕೊಬ್ಬಿನಾಂಶ   

2.5-3

ಕಚ್ಚಾ ನಾರಿನಾಂಶ   

7-8

ಒಟ್ಟು ಪಚನವಾಗುವ ಪೌಷ್ಠಿಕಾಂಶಗಳು   

70-72

ಆಮ್ಲದಲ್ಲಿ ಕರಗದೇ ಇರುವ ಬೂದಿ   

1-2

ತೇವಾಂಶ   

10-11

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

Phone

080-260 96800

Customer Care Number:

1800 425 8030 toll free 10.00AM - 5.30PM

(Except on Second Saturday,Fourth Saturday, Sunday & GOVT.Holidays)

Nandini Neravu Number(24*7):

080-66660000

Fax: 080-255 36105