1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಭೌಗೋಳಿಕವಾಗಿ ಚಿಕ್ಕ ಜಿಲ್ಲೆಯಾದರು ಸಕ್ಕರೆ ಹಾಗೂ ಭತ್ತದ ಬೆಳೆಗಳಿಗೆ ಹೆಸರುವಾಸಿಯಾದ ಮಂಡ್ಯ ಜಿಲ್ಲೆ ಹಾಲು ಉತ್ಪಾದನೆಯಲ್ಲೂ ಜಿಲ್ಲಾವಾರು ಉತ್ಕೃಷ್ಟ ಸ್ಥಾನದಲ್ಲಿದ್ದು ಪ್ರಸ್ತುತ ಕ್ಷೀರನಾಡಾಗಿ ಹೊರಹೊಮ್ಮಿದೆ.  ಮೈಸೂರು ಮತ್ತು ತುಮಕೂರು ಹಾಲು ಒಕ್ಕೂಟಗಳಿಂದ ಬೇರ್ಪಟ್ಟು ಏಪ್ರಿಲ್ 1987ರಲ್ಲಿ ಸ್ವಾಯತ್ತ ಒಕ್ಕೂಟವಾಗಿದ್ದು.  ಈ ಒಕ್ಕೂಟವು ಏಳು ತಾಲ್ಲೂಕುಗಳನ್ನು ಒಳಗೊಂಡಂತೆ ಕಾರ್ಯಾಚರಣೆಯಲ್ಲಿರುವ 1,239 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿದೆ. ದಿನಂಪ್ರತಿ 1.00 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯದಿಂದ ಪ್ರಾರಂಭಗೊಂಡ ಗೆಜ್ಜಲಗೆರೆಯಲ್ಲಿನ ಹಾಲು ಉತ್ಪನ್ನ ಘಟಕವು ಹಂತಹಂತವಾಗಿ ವಿಸ್ತರಣೆಗೊಳಪಟ್ಟಿದ್ದು ಈಗ ಪ್ರತಿನಿತ್ಯ 4.25 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಕ್ಕೂಟದ ದಿನಂಪ್ರತಿ 18 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕವು ಮಂಡ್ಯ ಒಕ್ಕೂಟವಲ್ಲದೆ ನೆರೆಯ ಹಾಸನ ಮತ್ತು ಮೈಸೂರು ಒಕ್ಕೂಟಗಳ ಹೆಚ್ಚುವರಿ ಹಾಲಿನ ಪರಿವರ್ತನೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಲಿದೆ. ಅಲ್ಲದೆ, ಕೆನೆರಹಿತ ಹಾಲಿನ ಪುಡಿಯ ಮಾರಾಟಕ್ಕಾಗಿ ರಫ್ತು ಪರವಾನಗಿಯನ್ನು ಸಹ ಪಡೆದಿದೆ. ದಿನಕ್ಕೆ 1.00 ಲಕ್ಷ ಲೀಟರ್ ತಯಾರಿಕಾ ಸಾಮರ್ಥ್ಯದ ಯು.ಹೆಚ್.ಟಿ ಘಟಕವನ್ನು ಸಹ ಹೊಂದಿದೆ

ಕೆ.ಆರ್.ಪೇಟೆಯಲ್ಲಿ 60ಸಾವಿರ ​ಲೀಟರ್ ಮತ್ತು ನಾಗಮಂಗಲದಲ್ಲಿ 60ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 1.20 ಲಕ್ಷ ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಲ್ಲದೆ, ಒಕ್ಕೂಟದಲ್ಲಿ 234 ಬಲ್ಕ್ ಮಿಲ್ಕ್ ಕೂಲರ್, 1056 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 8.01 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 2.64 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.39 ಲಕ್ಷ ಕೇಜಿ ಮೊಸರನ್ನು ಮಾರಾಟ  ಮಾಡುತ್ತಿದ್ದು ಪನ್ನೀರ್, ಪೇಡಾ, ಬೆಣ್ಣೆ, ತುಪ್ಪ, ಕೆನೆರಹಿತ ಹಾಲಿನ ಪುಡಿ (SMP) ಸಹ ಮಾರಾಟ ಮಾಡುತ್ತಿದೆ.

ಒಕ್ಕೂಟದ ಹಿರಿಮೆ:    ಒಂದು ಸಣ್ಣ ಜಿಲ್ಲೆಯ ಹಾಲು ಒಕ್ಕೂಟವಾಗಿಯೂ ಸಹ ಅತಿ ಹೆಚ್ಚು ಹಾಲು ಶೇಖರಣೆಯನ್ನು ಸಾಧಿಸಿದ ಹೆಗ್ಗಳಿಕೆ; ರಾಷ್ಟ್ರೀಯ ಹೈನು ಯೋಜನೆಯಡಿ ಇಡೀ ದೇಶದಲ್ಲಿ ಅತಿ ಹೆಚ್ಚು 71 ಬಲ್ಕ್ ಮಿಲ್ಕ್ ಕೂಲರುಗಳ ಮಂಜೂರಾತಿ ಪಡೆದ ಒಕ್ಕೂಟವಾಗಿರುತ್ತದೆ ; ಮೆಟಲೈಸ್ಡ್ 50 ಗ್ರಾಂ ಪಾಲಿಯೆಸ್ಟರ್ ಪ್ಯಾಕಿನಲ್ಲಿ, ಹಾಗೂ 200 ಮತ್ತು 500 ಗ್ರಾಂ ಕಾರ್ಟೂನ್ ಗಳಲ್ಲಿ ಕೆನೆರಹಿತ ಹಾಲಿನ ಪುಡಿಯ ಪ್ಯಾಕಿಂಗ್; ಹಾಲಿನ ಪುಡಿಯನ್ನು ರಫ್ತು ಮಾಡುವಲ್ಲಿ ಹಾಗೂ ಸಮನ್ವಯ ದರಪಟ್ಟಿಯನ್ನು ಅಳವಡಿಸಿಕೊಂಡ ಮೊಟ್ಟಮೊದಲ ಒಕ್ಕೂಟವಾಗಿರುತ್ತದೆ ಹಾಗೂ ಸರ್ಕಾರದ ಪ್ರೋತ್ಸಾಹ ಧನವನ್ನು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ  ನೇರವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುತ್ತದೆ.

 

ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಉತ್ಪನ್ನ ಡೇರಿ, ಗೆಜ್ಜಲಗೆರೆ,
ಮದ್ದೂರು ತಾಲ್ಲೂಕು, ಮಂಡ್ಯ -571 428, ಕರ್ನಾಟಕ.
ಫೋನ್: 08232-274074 / 274940 / 274084 / 274571 / 274777
ಫ್ಯಾಕ್ಸ್: 08232-274593
ಇ-ಮೈಲ್: [email protected] / [email protected]  
Read more

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105