1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ಹೈ-ಟೆಕ್ ಪ್ರಾಡಕ್ಟ್ ಪ್ಲಾಂಟ್

ಹಿನ್ನೆಲೆ :

ಹಾಲು ಉತ್ಪಾದನೆಯ ಹೆಚ್ಚಳಕ್ಕೆ ಸತತ ಪ್ರಯತ್ನ ಹಾಗೂ ಅನುಗುಣವಾದ ಕಾರ್ಯನೀತಿಯ ಫಲದಿಂದಾಗಿ ಕರ್ನಾಟಕದ ಸಹಕಾರ ಸಂಸ್ಥೆಯಲ್ಲಿ ಕಾಲಕ್ರಮೇಣ ಹಾಲು ಉತ್ಪಾದನೆಯು ಗಣನೀಯವಾದ ಹೆಚ್ಚಳವನ್ನು ಕಂಡಿದೆ.ಹೆಚ್ಚುವರಿ ಹಾಲಿನ ನಿರ್ವಹಣೆ ಮಾಡುವಲ್ಲಿ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು  ಹೆಚ್ಚಿನ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಪೂರೈಸುವ ನಿಟ್ಟಿನಲ್ಲಿ, ಕರ್ನಾಟಕ ಹಾಲು ಮಹಾಮಂಡಳಿಯು, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯೊಂದಿಗೆ ಸಮಾಲೋಚಿಸಿ, 30 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕದೊಂದಿಗೆ ದಿನಂಪ್ರತಿ 4 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯವುಳ್ಳ ಪ್ರಾಡಕ್ಟ್ ಪ್ಲಾಂಟ್ ಅನ್ನು, ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಹಾಲು ಒಕ್ಕೂಟಗಳ ಹೆಚ್ಚುವರಿ ಹಾಲಿನ ನಿರ್ವಹಣೆಗೆ ಆಯಕಟ್ಟಿನ ಸ್ಥಳವಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸ್ಥಾಪಿಸಲು 2005ರಲ್ಲಿ ನಿರ್ಧರಿಸಿತು.

ಈ ಯೋಜನೆಯನ್ನು ಟರ್ನ್ ಕೀ ಆಧಾರದ ಮೇಲೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ರೂ.69.43 ಕೋಟಿ ಅಂದಾಜು ವೆಚ್ಚದಲ್ಲಿ ಕಾರ್ಯರೂಪಕ್ಕೆ ತಂದಿತು.

 

ಮೂಲಭೂತ ಸೌಕರ್ಯಗಳು :

  • ಪರಿಸರ ಸ್ನೇಹಿ ಆಮ್ಲಜನಕರಹಿತ (anaerobic) ತಂತ್ರಜ್ಞಾನವನ್ನಳವಡಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ.
  • HACCP ಅವಶ್ಯಕತೆಗನುಗುಣವಾಗಿ ಇಂಧನ ಉಳಿತಾಯದ ಯಂತ್ರೋಪಕರಣಗಳಿಂದ ಸುಸಜ್ಜಿತವಾಗಿದ್ದು, ಹಾಲು ಸಂಸ್ಕರಣೆ ಮತ್ತು ಹಾಲಿನ ಪುಡಿ ಉತ್ಪಾದನೆ ಮಾಡುವಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ತಂತ್ರಜ್ಞಾನದ (DCS/SCADA) ಅಳವಡಿಕೆ ಮಾಡಲಾಗಿದೆ.  ಇದೇ ಅಲ್ಲದೆ ಘಟಕದ ಎಲ್ಲಾ ಕಾರ್ಯಚಟುವಟಿಕೆಗಳ ಗಣಕೀಕರಣ (ERP) ವ್ಯವಸ್ಥೆ ಚಾಲ್ತಿಯಲ್ಲಿದೆ.
  • ಪರಿಸರ ಸ್ನೇಹಿ ಅಮೋನಿಯ ದ್ರವವನ್ನು ಉಪಯೋಗಿಸಿದ ಹಾಗೂ ICE ಸೈಲೊ ಅಳವಡಿಸಿದ ಆಧುನಿಕ ತಂತ್ರಜ್ಞಾನದ ಸ್ವಯಂಚಾಲಿತ ರೆಫ್ರಿಜರೇಶನ್ ಯಂತ್ರಾಗಾರಗಳ ಅಳವಡಿಕೆ.

ಸಂಗ್ರಹಣಾ ಸಾಮರ್ಥ್ಯ:

 ವಿವರಗಳು ಹಾಲಿನ ಸಾಮರ್ಥ್ಯ ವಿಸ್ತರಣೆ   ಒಟ್ಟು ವಿಸ್ತರಣಾ ನಂತರ

ಹಾಲಿನ ಸಂಗ್ರಹಣಾ ಸಾಮರ್ಥ್ಯ

6 ಲಕ್ಷ ಲೀಟರ್ 2  ಲಕ್ಷ ಲೀಟರ್  8  ಲಕ್ಷ ಲೀಟರ್
ಹಾಲಿನ ಪುಡಿ ಸಂಗ್ರಹಣಾ ಸಾಮರ್ಥ್ಯ    1400 ಮೆ.ಟನ್. 1400 ಮೆ.ಟನ್. 2800   ಮೆ.ಟನ್  
ಕ್ರೀಮ್ ಸಂಗ್ರಹಣಾ ಸಾಮರ್ಥ್ಯ  60000 ಲೀಟರ್ 40000 ಲೀಟರ್   1  ಲಕ್ಷ  ಲೀಟರ್
ಬೆಣ್ಣೆ ಸಂಗ್ರಹಣಾ ಸಾಮರ್ಥ್ಯ 525 ಮೆ.ಟನ್.   525 ಮೆ.ಟನ್ 1050  ಮೆ. ಟನ್
ತುಪ್ಪ ಸಂಗ್ರಹಣಾ ಸಾಮರ್ಥ್ಯ  25 ಮೆ.ಟ.      --    25  ಮೆ.ಟನ್ 

ಸಂಸ್ಕರಣಾ ಸಾಮರ್ಥ್ಯ :

​​ಬೆಂಗಳೂರು-ಮಂಗಳೂರು ರಾ.ಹೆ.-75 ಯಲ್ಲಿ 32 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿದೆ.

ಅತ್ಯಾಧುನಿಕ ತಂತ್ರಜ್ಞಾನದ Mechanical Vapor Recompressor ತಾಂತ್ರಿಕತೆ ಆಧರಿಸಿದ ಹಾಲಿನ ಪುಡಿ ತಯಾರಿಕಾ ಘಟಕವಾಗಿದೆ.​

 ವಿವರಗಳು ಹಾಲಿನ ಸಾಮರ್ಥ್ಯ

ವಿಸ್ತರಣೆ 

ಒಟ್ಟು ವಿಸ್ತರಣಾ ನಂತರ
ಹಾಲು ಸಂಸ್ಕರಣಾ ಸಾಮರ್ಥ್ಯ   4 ಲಕ್ಷ ಲೀಟರ್   3  ಲಕ್ಷ ಲೀಟರ್   7  ಲಕ್ಷ ಲೀಟರ್
ಹಾಲಿನ ಪುಡಿ ಉತ್ಪಾದನಾ ಸಾಮರ್ಥ್ಯ   30 ಮೆ.ಟ.  30 ಮೆ.ಟನ್      60   ಮೆ.ಟನ್  
ಬೆಣ್ಣೆ ಉತ್ಪಾದನಾ ಸಾಮರ್ಥ್ಯ   21 ಮೆ.ಟ  21  ಮೆ.ಟನ್    42  ಮೆ.ಟನ್
ತುಪ್ಪ ಉತ್ಪಾದನಾ ಸಾಮರ್ಥ್ಯ   5 ಮೆ.ಟ.   --        5  ಮೆ.ಟನ್
 

ನಿರಂತರವಾಗಿ ಹೆಚ್ಚುತ್ತಿರುವ ನಂದಿನಿ ಯು.ಹೆಚ್.ಟಿ ಹಾಲಿನ ಬೇಡಿಕೆಯನ್ನು ಪೂರೈಸಲು ನೂತನ ಯು.ಹೆಚ್.ಟಿ ಹಾಲಿನ ಘಟಕವನ್ನು 09-04-2011ರಂದು ಕಾರ್ಯಾರಂಭ ಮಾಡಲಾಯಿತು

  • ದಿನಂಪ್ರತಿ 1 ಲಕ್ಷ ಲೀಟರ್ ಉತ್ಪಾದನಾ ಸಾಮರ್ಥ್ಯದ ನಂದಿನಿ ಯು.ಹೆಚ್.ಟಿ ಹಾಲಿನ ಸಂಸ್ಕರಣೆ ಮತ್ತು ಪ್ಯಾಕಿಂಗ್ ವ್ಯವಸ್ಥೆಯ ಸ್ಥಾಪನೆ.
  • ನಂದಿನಿ ಯು.ಹೆಚ್.ಟಿ ಹಾಲನ್ನು 500ಮಿಲಿ, 200ಮಿಲಿ ಫಿನೊ ಹಾಗೂ ಬ್ರಿಕ್ ಪ್ಯಾಕ್, ಮತ್ತು 100ಮಿಲಿ ಫಿನೊ ಪ್ಯಾಕ್ಗಳಲ್ಲಿ ಉತ್ಪಾದನೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ (Jan’12 ರಿಂದ).
  • ನಂದಿನಿ ಸುವಾಸಿತ ಹಾಲನ್ನು 200 ಮಿಲಿ ಪ್ಯಾಕ್ಗಳಲ್ಲಿ ಉತ್ಪಾದನೆ ಮಾಡುವ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ.

ಈ ಘಟಕದಲ್ಲಿನ ಹಾಲಿನ ಪುಡಿ ಉತ್ಪಾದನಾ ಸಾಮರ್ಥ್ಯವನ್ನು ದಿನಂಪ್ರತಿ 30 ಮೆಟ್ರಿಕ್ ಟನ್ಗಳಿಂದ  60 ಮೆಟ್ರಿಕ್ ಟನ್ಗಳಿಗೆ  ಹಾಗೂ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ದಿನಂಪ್ರತಿ 4 ಲಕ್ಷ ಲೀಟರುಗಳಿಂದ 7 ಲಕ್ಷ ಲೀಟರುಗಳಿಗೆ ರೂ.104 ಕೋಟಿ ವೆಚ್ಚದಲ್ಲಿ ವಿಸ್ತರಿಸಲಾಗಿದೆ.

 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105