1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ಮೆಗಾ ಹಾಲು ಪುಡಿ ಘಟಕ, ಕನ್ವ ,ರಾಮನಗರ

ದಕ್ಷಿಣ ಭಾರತದಲ್ಲೇ ಆಧುನಿಕ ತಂತ್ರಜ್ಞಾನ ಒಳಗೊಂಡ ಮೊದಲ ಬೃಹತ್ ಸಾಮರ್ಥ್ಯದ (ದಿನವಹಿ 100 ಮೆಟ್ರಿಕ್ ಟನ್) ಹಾಲು ಪುಡಿ ಘಟಕ.ವಿಶ್ವದಾದ್ಯಂತ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಘಟಕವನ್ನು ವಿನ್ಯಾಸಗೊಳಿಸಲಾಗಿದೆ.
ಹಾಲು ಪುಡಿ ಘಟಕವು ಸಂಪೂರ್ಣ ಸ್ವಯಂ ಚಾಲಿತ ((Fully Automated) ಘಟಕವಾಗಿರುತ್ತದೆ.ಹಾಲಿನ ಪುಡಿ ಘಟಕದಲ್ಲಿ ಅತ್ಯಾಧುನಿಕ ಎಮ್‌ವಿಆರ್ ತಾಂತ್ರಿಕತೆ ಅಳವಡಿಸಿಕೊಳ್ಳಲಾಗಿರುತ್ತದೆ.ಕೇಂದ್ರೀಕೃತ ಸೌಲಭ್ಯ ಲಭ್ಯವಿರುವುದರಿಂದ, ಸಾರಿಗೆ ಮತ್ತು ಪರಿವರ್ತನೆ ವೆಚ್ಚದಲ್ಲಿ  ಹೆಚ್ಚು ಉಳಿತಾಯವಾಗಲಿದೆ. ಕೇಂದ್ರೀಕೃತ ಸೌಲಭ್ಯವಿರುವುದರಿಂದ, ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಯಾರಿಸಬಹುದು  ಹಾಗೂ ಇದರಿಂದಾಗಿ ರಫ್ತು ವ್ಯವಹಾರದಲ್ಲಿ ಸಹ ಭಾಗವಹಿಸಬಹುದು.ಇಂತಹ ಎಲ್ಲಾ ಪ್ರಯೋಜನಗಳನ್ನು ಅಂತಿಮವಾಗಿ ರಾಜ್ಯದ ರೈತರಿಗೆ ಅವರ ಕುಟುಂಬಗಳ ಬೆಳವಣಿಗೆ, ಅಭಿವೃದ್ಧಿ ಮತ್ತು ಜೀವನ ಮಟ್ಟಕ್ಕೆ ತಲುಪಿಸಲಾಗುವುದು.ಏಕಕಾಲಕ್ಕೆ 03 ಸಂಖ್ಯೆ ಟ್ಯಾಂಕರ್‌ಗಳಿಂದ ಹಾಲು ಸ್ವೀಕರಣೆ ಮತ್ತು 01 ಸಂಖ್ಯೆ ಹಾಲು ರವಾನೆ ಸೌಲಭ್ಯವಿದೆ.
ಕಹಾಮದಲ್ಲೇ ಪ್ರಪ್ರಥಮವಾಗಿ 03 ಸಂಖ್ಯೆ 50 KLPH ಸಾಮರ್ಥ್ಯದ ಹಾಲು ಸ್ವೀಕರಣೆ ಮತ್ತು 02 ಸಂಖ್ಯೆ50 KLPH ಸಾಮರ್ಥ್ಯದ ಹಾಲು ಪ್ಯಾಶ್ಚರೈಸರ್ ಯಂತ್ರಗಳನ್ನು ಹೊಂದಿದೆ. (ಗರಿಷ್ಟ 15 ಲಕ್ಷ ಲೀ. ಹಾಲಿನ ಸ್ವೀಕರಣೆ ಮತ್ತು ಸಂಸ್ಕರಣೆ).
03 ಸಂಖ್ಯೆಯ 15 ಟನ್ ಸಾಮರ್ಥ್ಯದ ಹಬೆಯಂತ್ರಗಳನ್ನು ಅಳವಡಿಸಲಾಗಿದೆ ಹಾಗೂ ಕಂಡೆನ್ಸ್ಡ್ ನೀರಿನ ಮರುಬಳಕೆ ಸೌಲಭ್ಯವನ್ನು ಒದಗಿಸಲಾಗಿದೆ. 02  ಸಂಖ್ಯೆ 1000  ಕೆವಿಎ ಸಾಮರ್ಥ್ಯದ ಡಿ.ಜಿ. ಸೆಟ್ ಅಳವಡಿಸಲಾಗಿದೆ.
ಪೌಡರ್ ಡ್ರೈಯರ್ ಚೇಂಬರ್ ಮತ್ತು ಒಟ್ಟಾರೆ ಕಟ್ಟಡಗಳಿಗೆ ಬೆಂಕಿ ನಂದಿಸುವ (Fire Hydrant system) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನವುಳ್ಳ 15 ಲಕ್ಷ ಲೀ. ಸಾಮರ್ಥ್ಯದ ಇ.ಟಿ.ಪಿ. ಘಟಕವನ್ನು ಒಳಗೊಂಡಿರುತ್ತದೆ.

ಯೋಜನೆಯ ಪ್ರಮುಖ ಅಂಶಗಳು:

1)  03 ಸಂಖ್ಯೆ 50 KLPH  ಸಾಮರ್ಥ್ಯದ ಹಾಲು ಸ್ವೀಕರಣೆ ಮತ್ತು 02 ಸಂಖ್ಯೆ50 KLPH ಸಾಮರ್ಥ್ಯದ ಹಾಲು ಪ್ಯಾಶ್ಚರೈಸರ್ ಯಂತ್ರಗಳನ್ನು ಹೊಂದಿದೆ.
2)  1.5 ಲಕ್ಷ ಲೀ. ಸಾಮರ್ಥ್ಯದ 08 ಸಂಖ್ಯೆ ಸೈಲೋಗಳನ್ನು ಅಳವಡಿಸಲಾಗಿದೆ.
3)  ಪೌಡರ್ ಪ್ಯಾಕಿಂಗ್ ಸಾಮರ್ಥ್ಯ : 2 ಸಂಖ್ಯೆ 125 ಬ್ಯಾಗ್ಸ್ ಪ್ರತಿ ಘಂಟೆಗೆ. 
4)  ಪೌಡರ್ ಸ್ಟೋರೇಜ್ ಸೈಲೋ ಸಾಮರ್ಥ್ಯ : 2 ಸಂಖ್ಯೆ 70 ಮೆ.ಟನ್ 
5)  ಪ್ರತಿ ಘಂಟೆಗೆ 5 ಟನ್ ಸಾಮರ್ಥ್ಯದ ಬೆಣ್ಣೆ ತಯಾರಿಸುವ ಯಂತ್ರವನ್ನು ಅಳವಡಿಸಲಾಗಿದೆ.
6)   3 ಸಂಖ್ಯೆ ಪ್ಯಾಸೆಂಜರ್ ಲಿಫ್ಟ್ ಮತ್ತು 3 ಸಂಖ್ಯೆ ಗೂಡ್ಸ್ ಲಿಫ್ಟ್ಗಳನ್ನು ಅಳವಡಿಸಲಾಗಿದೆ.
7)  ಆರ್.ಓ. ನೀರಿನ ಘಟಕದ ಸಾಮರ್ಥ್ಯ : 25 KLPH
8)  ಪೌಡರ್ ಸ್ಟೋರ್ ಸಾಮರ್ಥ್ಯ : 2500 ಮೆ.ಟನ್ 
9)  ಬಟರ್ ಡೀಪ್ ಫ್ರೀಜ್ ಸ್ಟೋರ್ ಸಾಮರ್ಥ್ಯ : 750 ಮೆ.ಟನ್
10)  ಇ.ಟಿ.ಪಿ. ನೀರನ್ನು ಸಂಸ್ಕರಿಸಿ ತೋಟಗಾರಿಕೆಗೆ ಮತ್ತು ಸ್ವಚ್ಛತಾ ಕೆಲಸಗಳಿಗೆ ಬಳಸುವ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ.

ಯೋಜನೆಯಲ್ಲಿ ಅಳವಡಿಸಿಕೊಂಡಿರುವ ಸೌಲಭ್ಯಗಳು:

ಹಾಲು ಸಂಸ್ಕರಣಾ ಸಾಮರ್ಥ್ಯ  : ದಿನವಹಿ 12 ಲಕ್ಷ ಲೀಟರ್ 
ಬೆಣ್ಣೆ ತಯಾರಿಕೆ ಸಾಮರ್ಥ್ಯ  : ಮಾಹೆಯಾನ 1200 ಮೆಟ್ರಿಕ್ ಟನ್
ತುಪ್ಪ ತಯಾರಿಕೆ ಸಾಮರ್ಥ್ಯ  : ಮಾಹೆಯಾನ 300 ಮೆಟ್ರಿಕ್ ಟನ್
ಸ್ಕಿಮ್ ಮಿಲ್ಕ್ ಪೌಡರ್    : ಮಾಹೆಯಾನ 3000 ಮೆಟ್ರಿಕ್ ಟನ್  

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105