1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಬೆಳಗಾವಿ ಹಾಲು ಒಕ್ಕೂಟ
‘ಕರ್ನಾಟಕದ ಮಿನಿ-ಪಂಜಾಬ್’, ‘ಸ್ವಾತಂತ್ರ ಹೋರಾಟಗಾರ್ತಿ ರಾಣಿ ಚೆನ್ನಮ್ಮ ನಗರ’, ‘ತಂಬಾಕಿಗೆ ಪ್ರಸಿದ್ಧವಾದ ನಗರ’, ಎಂಬೆಲ್ಲ ನಾಮಾಂಕಿತಗಳನ್ನು ಪಡೆದಿರುವ ಬೆಳಗಾವಿಯ ಹಾಲು ಒಕ್ಕೂಟವು ‘ಸಮೃದ್ಧಿ’ ಕೆನೆಭರಿತ ಮಿಶ್ರಿತ ಹಾಲಿನ ಸಂಸ್ಕರಣೆ ಮತ್ತು ಮಾರಾಟದಲ್ಲಿ ವಿಶೇಷತೆಯನ್ನು ಪಡೆದಿರುವ ಹಾಲು ಒಕ್ಕೂಟಗಳಲ್ಲಿ ಒಂದು.  ಈ ಹಾಲು ಒಕ್ಕೂಟವು 10 ತಾಲ್ಲೂಕುಗಳ ವ್ಯಾಪ್ತಿಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿರುವ 604 ಸಹಕಾರ ಸಂಘಗಳನ್ನು ಒಳಗೊಂಡಿದೆ.  ಬೆಳಗಾವಿ ಹಾಲು ಒಕ್ಕೂಟವು ನೆರೆರಾಜ್ಯವಾದ ಗೋವಾದಲ್ಲಿ ಸಹ ಗಣನೀಯ ಪ್ರಮಾಣದಲ್ಲಿ ನಂದಿನಿ ಹಾಲಿನ ಮಾರಾಟವನ್ನು ಮಾಡುತ್ತಲಿದೆ.

ಗೋಕಾಕದಲ್ಲಿ 40ಸಾವಿರ ​ಲೀಟರ್, ರಾಮದುರ್ಗದಲ್ಲಿ 20ಸಾವಿರ ಲೀಟರ್, ಅಥಣಿಯಲ್ಲಿ 30ಸಾವಿರ ಲೀಟರ್, ಚಿಕ್ಕೋಡಿಯಲ್ಲಿ 20ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ ದಿನಂಪ್ರತಿ 1,10,000ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. 36 ಬಲ್ಕ್ ಮಿಲ್ಕ್ ಕೂಲರ್, 402 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 1.95 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 0.64 ಲಕ್ಷ  ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.03 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ.  

ಒಕ್ಕೂಟದ ಹಿರಿಮೆ: ಅತಿ ಹೆಚ್ಚು ಪ್ರಮಾಣದ ಎಮ್ಮೆ ಹಾಲಿನ ಶೇಖರಣೆ; ಸ್ವಾದಿಷ್ಟವಾದ ಕುಂದ ಸಿಹಿಗೆ ಪ್ರಸಿದ್ಧಿ; ಗೋವ ರಾಜ್ಯದಲ್ಲಿ ದಿನಂಪ್ರತಿ 40,000ಲೀಟರ್ ಹಾಲಿನ ಮಾರಾಟ.

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ,
ಬೆಳಗಾವಿ ಡೇರಿ ಸಂಕೀರ್ಣ, ಕಣಬರ್ಗಿ ರಸ್ತೆ,
ಬೆಳಗಾವಿ - 590 016, ಕರ್ನಾಟಕ.
ಫೋನ್: 080-31-2454390/ 2454107/ 2454791
ಫ್ಯಾಕ್ಸ್: 080-31-2454791
ಇ-ಮೈಲ್: [email protected] / [email protected] Read More...

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105