1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಹಾಲಿನ ವಿವಿಧ ವರ್ಗಗಳು ಹಾಗೂ ಮಾದರಿಗಳು

ಹಾಲಿನ ವಿವಿಧ ಮಾದರಿಗಳಿಗನುಸಾರ ಆಹಾರ ಸುರಕ್ಷತಾ ಕಾಯ್ದೆ, 2006 ಹಾಗೂ ನಿಯಮಗಳಿಗನುಸಾರ ಭಾರತದಲ್ಲಿ ಹಾಲನ್ನು ವಿವಿಧ ರೀತಿಯಲ್ಲಿ ಹಲವು ಮಾದರಿಗಳನ್ನು ತಯಾರಿಸಿ ಮಾರುಕಟ್ಟೆಗೆ ವಿತರಿಸಲಾಗುತ್ತಿದೆ. ಈ ಹಾಲಿನ ವಿಧಗಳಲ್ಲಿ ಹಾಲಿನ ಕೊಬ್ಬು ಹಾಗೂ ಜಿಡ್ಡೇತರ ಘನಾಂಶಗಳಲ್ಲಿ ವ್ಯತ್ಯಾಸವಿರುತ್ತವೆ. 

#

ಹಾಲಿನ ಮಾದರಿಗಳು ಹಾಲಿನ ಕೊಬ್ಬು (ಕನಿಷ್ಠ % ) ಹಾಲಿನ ಎಸ್‍ಎನ್‍ಎಫ್ (ಕನಿಷ್ಠ % )
 1.  

ಡಬಲ್ ಟೋನ್ಡ್ ಹಾಲು  

1.5

       9.0
 1.  

ಟೋನ್ಡ್ ಹಾಲು  

3.0

       8.5

 1.  

ಸ್ಟ್ಯಾಂಡರ್ಡೈಸ್ಡ್ ಹಾಲು   

4.5

       8.5

 1.  

ಹಸುವಿನ ಹಾಲು

3.5

       8.5

 1.  
ಎಮ್ಮೆ   ಹಾಲು (ಕರ್ನಾಟಕ)  

5.0

       9.0

 1.  
ಕೆನೆಭರಿತ ಹಾಲು 

6.0

       9.0

 1.  

ಸ್ಕಿಮ್  ಹಾಲು 

0.5 ಗಿಂತ ಜಾಸ್ತಿಯಿಲ್ಲದೆ  

       8.7

ಹಳ್ಳಿಗಳಿಂದ ಸಂಗ್ರಹಿಸಲಾಗುವ ಕಚ್ಚಾಹಾಲಿನಲ್ಲಿ ಕೆಲವೊಂದು ಆರೋಗ್ಯಕ್ಕೆ ಹಾನಿಕರವಾದ ಬ್ಯಾಕ್ಟೀರಿಯಾಗಳಿರುವ ಸಾಧ್ಯತೆಗಳಿರುತ್ತದೆ. ಇಂತಹ ಸೂಕ್ಷ್ಮಾಣುಜೀವಿಗಳನ್ನು ಸಕಾಲದಲ್ಲಿ ನಿಯಂತ್ರಿಸದಿದ್ದಲ್ಲಿ, ಇವು ತ್ವರಿತ ಗತಿಯಲ್ಲಿ ಬೆಳೆದು ಹಾಲಿನ ಗುಣಮಟ್ಟವನ್ನು ಹದಗೆಡಿಸುವ ಸಂಭವವಿರುತ್ತದೆ. ಹೀಗಾಗಿ ಸಕಾಲದಲ್ಲಿ ಡೇರಿಗಳಲ್ಲಿ ಪಾಶ್ಚರೀಕರಣ ವಿಧಾನದಿಂದ ಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳನ್ನು ನಿಯಂತ್ರಿಸಿ ಸಂಸ್ಕರಿಸಲಾಗುತ್ತಿದೆ.

ಹಾಲು ಗ್ರಾಹಕರಿಗೆ ತಲುಪುವ  ಮುನ್ನ ನಿರ್ವಹಿಸಲಾಗುವ ವಿಧಾನಗಳು  :-

 •  ಕಚ್ಚಾ ಹಾಲು :

  ರೈತರಿಂದ ಸಂಗ್ರಹಿಸಲಾಗಿರುವ ಹಾಲನ್ನು, ಯಾವುದೇ ಉಷ್ಣ-ಪ್ರಕಾರಗಳಿಗೆ ಒಳಪಡಿಸದೇ ಶೇಖರಣೆಯಾದ 4 ಘಂಟೆಗಳ ಒಳಗೆ ಅಥವಾ ಕಡಿಮೆ ಅವಧಿಯಲ್ಲಿ,  6ಸೆಂಟಿಗ್ರೇಡ್ ಉಷ್ಟಾಂಶಕ್ಕೆ  ಶೈತೀಕರಿಸಲಾಗುತ್ತದೆ.

  Raw chilled Milk

 • ಪಾಶ್ಚರೀಕರಿಸಿದ ಹಾಲು :

  ಹಾಲನ್ನು ಕನಿಷ್ಠ  63ಸೆಂಟಿಗ್ರೇಡ್‍ರವರೆಗೆ ಕಾಯಿಸಿ ಅದೇ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಇರಿಸುವುದು ಅಥವಾ ಕನಿಷ್ಠ 71.9o ಸೆಂಟಿಗ್ರೇಡ್‍ರವರೆಗೆ  ಕನಿಷ್ಠ 15 ಸೆಕೆಂಡುಗಳ ಕಾಲ ಕಾಯಿಸಿ ತಕ್ಷಣ 4o ಸೆಂಟಿಗ್ರೇಡ್ ಅಥವಾ ಕಡಿಮೆ ಉಷ್ಣಾಂಶಕ್ಕೆ ತಂಪುಗೊಳಿಸುವುದು.

  Pasteurized Milk

 • ಸ್ಟೆರಿಲೈಸ್ಡ್ ಹಾಲು :

  ಸ್ಟೆರಿಲೈಸ್ಡ್ ಹಾಲು ಸತತವಾಗಿ 121o ಸೆಂಟಿಗ್ರೇಡ್ ಉಷ್ಣಾಂಶದಲ್ಲಿ 15 ನಿಮಿಷಗಳ ಕಾಲ ನಿರಂತರ ಹರಿವಿನಲ್ಲಿ ಕಾಯಿಸಿ, hermetically sealed containers ಗಳಲ್ಲಿ aseptic condition ನಲ್ಲಿ ಪ್ಯಾಕ್ ಮಾಡಲಾಗಿ ಕೊಠಡಿ ತಾಪಮಾನದಲ್ಲಿ, ಉತ್ಪಾದನೆಯಾದ ದಿನದಿಂದ ಹಾಲಿನ ಮಾದರಿಗನುಗುಣವಾಗಿ 90 ದಿನಗಳ ಕಾಲ ಹಾಲು ಕೆಡದೇ ಬಾಳಿಕೆ ಬರುವುದನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ. 

  Sterilised Milk

 • ಅಲ್ಟ್ರಾ ಹೈ ಟೆಂಪರೇಚರ್ (UHT) ಹಾಲು:

  ಹಾಲನ್ನು ಅತಿ ಹೆಚ್ಚಿನ  ಉಷ್ಣಾಂಶಕ್ಕೋಳಪಡಿಸಿ ಸಂಸ್ಕರಣೆ ಮಾಡುವ ಅತ್ಯಾಧುನಿಕ ವಿಧಾನವಾಗಿರುತ್ತದೆ. ಹಾಲನ್ನು ಮುಚ್ಚಿದ ವ್ಯವಸ್ಥೆಯಲ್ಲಿ ಕಾಯಿಸಿ, ಅತಿ ಹೆಚ್ಚು ಉಷ್ಣಾಂಶದೊಂದಿಗೆ ಹೋಮೋಜಿನೈಸ್ಡ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಹಾಗೂ ತಂಪಾಗಿಸಿ aseptically ಪ್ಯಾಕಿಂಗ್ ಮಾಡಲಾಗುತ್ತದೆ. ಹಾಲನ್ನು ಸಾಮಾನ್ಯವಾಗಿ 135-137o   ಸೆಂಟಿಗ್ರೇಡ್ ಉಷ್ಣಾಂಶದಲ್ಲಿ 2 ಸೆಕೆಂಡುಗಳ ಕಾಲ ಅಥವಾ ಯಾವುದೇ ಹಿಡುವಳಿ ಇಲ್ಲದೇ, ನೇರ ಅಥವಾ ಪರೋಕ್ಷ ತಾಪಮಾನದಲ್ಲಿ, ನೇರ ಸ್ಟೀಮ್ ಇಂಜೆಕ್ಷನ್ ಹಾಗೂ ಪುನಃ ಸೋಂಕಾಗುವಿಕೆ ಅಪಾಯವನ್ನು ತೊಡೆದುಹಾಕಲು aseptic ಪದ್ಧತಿಯಲ್ಲಿ  ಪ್ಯಾಕಿಂಗ್ ಮಾಡಲಾಗುತ್ತದೆ.

  UHT Milk

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105