1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಶ್ರೀ.ಪುನೀತ್ ರಾಜ್‌ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಕೈಗೊಂಡಿರುವ ಬಗ್ಗೆ.

Date: 
16-ಮಾರ್ಚ್ -2022

ಕರ್ನಾಟಕ ಹಾಲು ಮಹಾಮಂಡಳಯು ರಾಜ್ಯದ ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರುಚಿ ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ”  ಬ್ರ್ಯಾಂಡ್ ಅಡಿಯಲ್ಲಿ ಕಳೆದ ೪೦ ವರ್ಷಗಳಿಂದ ಒದಗಿsಸುತ್ತಾ ಬರುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಗ್ರ‍್ರಾಹಕರ ಆಯ್ಕೆಯ ನೆಚ್ಚಿನ  ಬ್ರ್ಯಾಂಡ್ ಆಗಿದೆ.

ದಕ್ಷಿಣ ಭಾರತದ ಕ್ಷೀರಸಾಗರ “ನಂದಿನಿ”  ಬ್ರ್ಯಾಂಡ್ಗೆ ರಾಯಭಾರಿಯಾಗಿದ್ದ ಶ್ರೀ ಪುನೀತ್ ರಾಜ್‌ಕುಮಾರ್ ರವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಹುಟ್ಟು ಹಬ್ಬದ (ದಿನಾಂಕ : ೧೭.೦೩.೨೦೨೨) ರ ಪ್ರಯುಕ್ತ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ದಿನಾಂಕ:  ೧೬.೦೩.೨೦೨೨ ರಂದು ರಾಷ್ಟ್ರೋತ್ಥಾನ ಪರಿಷತ್ ರವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು,  ಈ ಶಿಬಿರದಲ್ಲಿ ಕೆಎಂಎಫ್‌ನ  ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲಾಗಿದೆ ಹಾಗೂ ಈ ಶಿಬಿರಕ್ಕೆ ವರನಟ  ಡಾ|| ರಾಜ್‌ಕುಮಾರ್ ರವರ ಕುಟುಂಬದ ವತಿಯಿಂದ ಕುಮಾರಿ. ಧನ್ಯಾ ರಾಮ್‌ಕುಮಾರ್ ರವರು ಸಹ ಆಗಮಿಸಿ ಕೆಎಂಎಫ್ ನ ಈ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮವನ್ನು ಶ್ಲಾಘಿಸಿದರು.

ರಕ್ತದಾನ ಶಿಬಿರಕ್ಕೆ ಕೆಎಂಎಫ್‌ನ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಜಾರಕಿಹೊಳಿಯವರು ಆಗಮಿಸಿ ಅಧಿಕಾರಿ ಹಾಗೂ ನೌಕರರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುವ ಕಾರ್ಯವು ಪ್ರಶಂಸನಿಯವಾಗಿದೆಯೆದು ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಿದರು. ಕಹಾಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಸಿ. ಸತೀಶ್ ರವರು, ಆಡಳಿತ ಮಂಡಳಿ ನಿರ್ದೇಶಕರುಗಳಾದ ಶ್ರೀ. ಕಾಪು ದಿವಾಕರ್ ಶೆಟ್ಟಿ, ಶ್ರೀ ಶ್ರೀಶೈಲ ಗೌಡ ಪಾಟೀಲ್, ಶ್ರೀ. ನಂಜುಂಡ ಸ್ವಾಮಿ ಹಾಗೂ ಕಹಾಮದ ಹಿರಿಯ ಅಧಿಕಾರಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಮುಂದುವರೆದು ದಿನಾಂಕ: ೧೭.೦೩.೨೦೨೨ ರಂದು ಶ್ರೀ ಪುನೀತ್ ರಾಜ್‌ಕುಮಾರ್ ರವರ ಹುಟ್ಟದ ಪ್ರಯುಕ್ತ  ಕಂಠೀರವ ಸ್ಟೂಡಿಯೋದ ಸಮಾಧಿ ಬಳಿ ಆಗಮಿಸುವ ಅಭಿಮಾನಿಗಳಿಗೆ ನಂದಿನಿ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿದೆ.  

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105